ಮಂಡ್ಯ: ಜಿಲ್ಲೆಯಲ್ಲಿ ತಮ್ಮ ಜಮೀನು ಸಮಸ್ಯೆಗೆ ಬಗೆಹರಿಯದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿರುವಂತ ಘಟನೆ ಮಂಡ್ಯ ಡಿಸಿ ಕಚೇರಿ ಎದುರಿನ ಪಾರ್ಕ್ ನಲ್ಲಿ ನಡೆದಿದೆ. ಬೆಂಕಿ ಹಚ್ಚಿಕೊಂಡು ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದಂತ ರೈತನನ್ನು ಮಂಜೇಗೌಡ ಎಂಬುದಾಗಿ ಗುರುತಿಸಲಾಗಿದೆ. ಈತ ಕೆ.ಆರ್.ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದವರಾಗಿದ್ದಾರೆ.
ಹಲವು ವರ್ಷಗಳಿಂದ ಬಗೆಯರಿದ ಜಮೀನು ಸಮಸ್ಯೆಯಾಗಿತ್ತು. ಈ ಸಂಬಂಧ ತಾಲೂಕು ಕಚೇರಿಗೆ ಅಲೆದು ಮಂಜೇಗೌಡ ಸುಸ್ತಾಗಿದ್ದರು. ಜಿಲ್ಲಾಧಿಕಾರಿ ಕಚೇರಿಗೂ ಹಲವು ಬಾರಿ ರೈತ ಮಂಜೇಗೌಡ ಅಲೆದಾಡಿದ್ದರು. ಇಷ್ಟಾದರೂ ಜಮೀನು ಸಮಸ್ಯೆ ಬಗೆಹರಿದಿರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆಗೆ ರೈತ ಮಂಜೇಗೌಡ ಯತ್ನಿಸಿದ್ದಾರೆ.
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರಿನ ಪಾರ್ಕ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ರೈತ ಮಂಜೇಗೌಡ ಬೆಂಕಿ ಹಚ್ಚಿಕೊಂಡಿದ್ದಾನೆ. ಈ ದೃಶ್ಯ ಕಂಡು ಸ್ಥಳೀಯರು ಕೂಡಲೇ ಬೆಂಕಿ ಹಾರಿಸಿದ್ದಾರೆ. ಇದೀಗ ಗಾಯಗೊಂಡಿರುವ ಮಂಜೇಗೌಡರನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವರದಿ: ಗಿರೀಶ್ ರಾಜ್, ಮಂಡ್ಯ
SHOCKING: 19 ವರ್ಷಗಳ ವಿಫಲ ಗರ್ಭಧಾರಣೆಯ ನಂತರ ದಂಪತಿಗಳಿಗೆ ಗರ್ಭಿಣಿಯಾಗಲು ‘AI ಸಹಾಯ’








