ಬೆಂಗಳೂರು: ಇಸ್ರೋದ ಬಾಹುಬಲಿ ಸಿಎಂಎಸ್-03 ಉಪಗ್ರಹವನ್ನು ಇಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. SDSC/ISRO ಶ್ರೀಹರಿಕೋಟಾದಿಂದ CMS-03 ಸಂವಹನ ಉಪಗ್ರಹವನ್ನು ಹೊತ್ತ ISROದ LVM3-M5 ಉಡಾವಣೆ ಮಾಡಲಾಯಿತು.
ಭಾರತೀಯ ನೌಕಾಪಡೆಯ GSAT 7R (CMS-03) ಸಂವಹನ ಉಪಗ್ರಹವು ಇಂದು ಭಾರತೀಯ ನೌಕಾಪಡೆಗೆ ಇದುವರೆಗಿನ ಅತ್ಯಂತ ಮುಂದುವರಿದ ಸಂವಹನ ಉಪಗ್ರಹವಾಗಿದೆ. ಈ ಉಪಗ್ರಹವು ನೌಕಾಪಡೆಯ ಬಾಹ್ಯಾಕಾಶ ಆಧಾರಿತ ಸಂವಹನ ಮತ್ತು ಕಡಲ ಕ್ಷೇತ್ರದ ಜಾಗೃತಿ ಸಾಮರ್ಥ್ಯಗಳನ್ನು ಬಲಪಡಿಸುತ್ತದೆ. ಈ ಉಪಗ್ರಹವು ಇಲ್ಲಿಯವರೆಗಿನ ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿದ್ದು, ಸುಮಾರು 4,400 ಕೆಜಿ ತೂಕವಿದ್ದು, ಭಾರತೀಯ ನೌಕಾಪಡೆಯ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸಲು ವಿಶೇಷವಾಗಿ ಅಭಿವೃದ್ಧಿಪಡಿಸಲಾದ ಅನೇಕ ಸ್ಥಳೀಯ ಅತ್ಯಾಧುನಿಕ ಘಟಕಗಳನ್ನು ಒಳಗೊಂಡಿದೆ.
ಇಸ್ರೋದಿಂದ ಎಲ್ ವಿ ಎಂ 3 ರಾಕೆಟ್ ಮೂಲಕ ಬಾಹುಬಲಿ ಸಿಎಂಎಸ್ 03 ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಸುಮಾರು 4,410 ಕೆಜಿ ತೂಕದ ಸಂವಹನ ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದೆ.
ಭಾರತದ ಭೂಪ್ರದೇಶದ ಮೇಲೆ ನಿಗಾವನ್ನು ಸಿಎಂಎಸ್-03 ಉಪಗ್ರಹವು ವಹಿಸಲಿದೆ. ಭಾರತೀಯ ಸೇನೆಗೆ ಸಂವಹನ ಸೇವೆಯನ್ನು ಈ ಸ್ಯಾಟಲೈಟ್ ಒದಗಿಸಲಿದೆ.
ಸಾಗರದ ಮೇಲೂ ಸಿಎಂಎಸ್-03 ಉಪಗ್ರಹವು ನಿಗಾ ವಹಿಸಲು ನೆರವಾಗಲಿದೆ. ಈ ಉಪಗ್ರಹದಿಂದಾಗಿ ಭಾರತೀಯ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ಬಂದಂತೆ ಆಗಿದೆ.
#WATCH | Sriharikota | The launch of ISRO’s LVM3-M5 carrying the CMS-03 communication satellite from SDSC/ISRO Sriharikota.
Indian Navy’s GSAT 7R (CMS-03) communication satellite today would be the most advanced communication satellite thus far for the Indian Navy. The satellite… pic.twitter.com/nzWZWS94RK
— ANI (@ANI) November 2, 2025
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!








