ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣದಲ್ಲಿ ತಾಯಿಯಿಂದ ಬೇರ್ಪಟ್ಟು, ತಪ್ಪಿಸಿಕೊಂಡಿದ್ದ ಪರದಾಡುತ್ತಿದ್ದಂತ ಮಗುವನ್ನು ಮರಳಿ ಅಮ್ಮನ ಮಡಿಲಿಗೆ ಸೇರಿಸುವಲ್ಲಿ BMTCL ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಆರ್ ಸಿ ಎಲ್ ನೀಡಿದ್ದು, 1 ನವೆಂಬರ್ 2025ರಂದು ಮಧ್ಯಾಹ್ನ ಸುಮಾರು 12:30 ಗಂಟೆ ಸುಮಾರಿಗೆ, 6 ವರ್ಷದ ಬಾಲಕಿ ಮೆಟ್ರೋ ರೈಲು ಪ್ರಯಾಣದ ಸಂದರ್ಭದಲ್ಲಿ ನಾದಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮಜೆಸ್ಟಿಕ್)ದಲ್ಲಿ ತನ್ನ ತಾಯಿಯಿಂದ ಬೇರ್ಪಟ್ಟಿದ್ದಳು ಎಂದಿದೆ.
ಬಾಲಕಿಯನ್ನು ಒಬ್ಬ ಪ್ರಯಾಣಿಕರು ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು ಮತ್ತು ಆಕೆ ಮಜೆಸ್ಟಿಕ್ ನಿಲ್ದಾಣದಲ್ಲೇ ಇದ್ದಳು. ಆಕೆಯ ತಾಯಿಯನ್ನು ಪತ್ತೆ ಹಚ್ಚಲು ಬಿಎಂಆರ್ ಸಿ ಎಲ್ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾದರು ಎಂದು ಹೇಳಿದೆ.
ಎಲ್ಲಾ ನಿಲ್ದಾಣ ನಿಯಂತ್ರಕರಿಗೂ ಎಚ್ಚರಿಕೆ ನೀಡಲಾಯಿತು ಮತ್ತು ಕೆಂಪೇಗೌಡ ಮಜೆಸ್ಟಿಕ್ ನಿಲ್ದಾಣದ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನದ ಫಲವಾಗಿ ಬಾಲಕಿಯ ತಾಯಿಯನ್ನು ಪತ್ತೆ ಹಚ್ಚಿ, ಬಾಲಕಿಯನ್ನು ತಾಯಿಯವರ ಕೈಗೆ ಒಪ್ಪಿಸಲಾಯಿತು. ಎಂಬುದಾಗಿ ಬಿಎಂಆರ್ ಸಿ ಎಲ್ ತಿಳಿಸಿದೆ.
ರಾಜ್ಯದ ಅಕ್ರಮ ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಸಚಿವ ಈಶ್ವರ್ ಖಂಡ್ರೆ ಬಿಗ್ ಶಾಕ್
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!








