ಬೆಂಗಳೂರು : ಖ್ಯಾತ ರಂಗಭೂಮಿ ಕಲಾವಿದ ಕೆರೆಯಾಗಲಹಳ್ಳಿ ಮೈಲಾರಪ್ಪ ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ ಹಾಗೂ ಸಾಮಾಜಿಕ ಕಳಕಳಿಯ ಹಿರಿಯ ನಾಯಕರಾದ ಕೆರೆಯಾಗಲಹಳ್ಳಿ ಮೈಲಾರಪ್ಪನವರ ನಿಧನವಾರ್ತೆ ನೋವುಂಟುಮಾಡಿದೆ,
ಮೃತರ ಆತ್ಮಕೆ ಶಾಂತಿಯನ್ನು ಕರುಣಿಸಲಿ ಮತ್ತು ದುಃಖತಪ್ತ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.








