ಬೆಂಗಳೂರು: ಬೆಂಗಳೂರು ನಗರ ವಿಶ್ವ ವಿದ್ಯಾನಿಲಯಕ್ಕೆ ಸಿಂಡಿಕೇಟ್ ಪ್ರಾಧಿಕಾರದ ಸದಸ್ಯರನ್ನಾಗಿ ಡಾ.ಮಹಂತೇಶ್ ಪಾಟೀಲ್(ಡಾ.ಮಹಂತಗೌಡ) ಅವರನ್ನು ನೇಮಿಸಿ ಕುಲಸಚಿವರು ಆದೇಶಿಸಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯದ ಕುಲಸಚಿವರು ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರಿನ ಬಾಪು ಕಾಲೇಜ್ ಆಫ್ ಎಜುಕೇಷನ್ ಪ್ರಾಂಶುಪಾಲರಾದಂತ ಡಾ.ಮಹಂತೇಶ್ ಪಾಟೀಲ್ ಅವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದಿದ್ದಾರೆ.
ಅಂದಹಾಗೇ ಡಾ.ಮಹಂತೇಶ್ ಪಾಟೀಲ್ ಅವರು ಮದರ್ ಥೆರೇಸಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪ್ಯಾಸಕರಾಗಿ, ಆ ಬಳಿಕ ಪ್ರಾಂಶುಪಾಲರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಆ ಬಳಿ ಜಿಎಂ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದರು. ಇದೀಗ ಬೆಂಗಳೂರಿನ ಯಶವಂತಪುರದಲ್ಲಿರುವಂತ ಬಾಪು ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
‘ಗ್ರಾಮ ಪಂಚಾಯ್ತಿ ಚುನಾವಣೆ’ಗೆ ‘ನಾಮಪತ್ರ’ದೊಂದಿಗೆ ಸಲ್ಲಿಸಲು ಈ ‘ದಾಖಲೆ’ಗಳು ಕಡ್ಡಾಯ
ರಾಜ್ಯದ ಕೆಲ ವಿವಿಗಳಿಗೆ ಬಸವಣ್ಣ, ನಾಲ್ವಡಿ ಕೃಷ್ಣರಾಜ ಒಡೆಯರ್, ಅರಸು ನಾಮಕರಣಕ್ಕೆ ಸಿಎಂ ಸಿದ್ಧರಾಮಯ್ಯ ಆದೇಶ








