ಬೆಂಗಳೂರು: ರಾಜ್ಯ ಸರ್ಕಾರದಿಂದ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದವರಿಗೆ ಗುಡ್ ನ್ಯೂಸ್ ನೀಡಿದೆ. ಅದೇ ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರವಾನಗಿ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿದ್ದರೂ ದಂಡವನ್ನು ಕಟ್ಟಿಸಿಕೊಂಡು ವಿನಾಯ್ತಿ ನೀಡುವುದಕ್ಕೆ ಅಸ್ತು ಎಂದಿದೆ.
ಹೌದು.. ರಾಜ್ಯದ ನಗರ ಪಾಲಿಕೆ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪರವಾನಗಿ ಉಲ್ಲಂಘನೆ ಮಾಡಿದ ಕಟ್ಟಡಗಳಿಗೆ ವಿನಾಯ್ತಿ ನೀಡಿ ದಂಡ ಕಟ್ಟಿ, ಪರಿಷ್ಕೃತ ನಕ್ಷೆ ಪಡೆಯಲು ಸರ್ಕಾರ ಅವಕಾಶವನ್ನು ನೀಡಿದೆ. ಆದರೇ ಅದಕ್ಕಾಗಿ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿದಂತ ಮಾಲೀಕರು ಶೇ.15ರಷ್ಟು ಮಿತಿಯೊಳಗೆ ನಿಯಮ ಉಲ್ಲಂಘಿಸಿದ್ದರೇ ಮಾತ್ರ ಈ ಆದೇಶವು ಅನ್ವಯ ಆಗಲಿದೆ.
ಯಾರು ನಿಯಮ ಉಲ್ಲಂಘಿಸಿ ಸೆಟ್ ಬ್ಯಾಕ್, ಕಾರ್ ಪಾರ್ಕಿಂಗ್ ಉಲ್ಲಂಘನೆ ಮಾಡಿ ಕಟ್ಟಡ ಕಟ್ಟಿರುತ್ತಾರೋ ಅವರಿಗೆಲ್ಲ ಅನುಕೂಲ ಆಗಲಿದೆ. ಈ ಪರವಾನಿಗೆ ಉಲ್ಲಂಘಿಸಿದ ಕಟ್ಟಡಗಳಿಗೆ ವಿನಾಯಿತಿ ನೀಡಲು ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ಕೆಳಕಿನಂತೆ ದಂಡ ನಿಗದಿಪಡಿಸಿದೆ.
- ಈ ಆದೇಶವು ಶೇ.15ರಷ್ಟು ಮಿತಿಯೊಳಗೆ ನಿಯಮ ಉಲ್ಲಂಘಿಸಿ ಕಟ್ಟಿದಂತ ಕಟ್ಟಡಗಳಿಗೆ ಮಾತ್ರವೇ ಅನ್ವಯ
- ಸೆಟ್ ಬ್ಯಾಕ್, ಕಾರ್ ಪಾರ್ಕಿಂಗ್ ಉಲ್ಲಂಘನೆ ಮಾಡಿದವರಿಗೆ ದಂಡ ಕಟ್ಟಲು ಅವಕಾಶ
- ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ ಪಾರ್ಕಿಂಗ್ ಉಲ್ಲಂಘನೆಗೆ ರೂ.5,000 ದಂಡ
ದಂಡದ ಮೊತ್ತ ಎಷ್ಟು?
ಪಟ್ಟಣಪಂಚಾಯಿತಿ ವ್ಯಾಪ್ತಿಯಲ್ಲಿ..
- ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,000 ರೂ. ದಂಡ
- ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,500 ದಂಡ ನಿಗದಿ
- ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,200 ದಂಡ
- ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,800 ದಂಡ
- ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 1,500 ದಂಡ
- ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀಗೆ 2,250 ದಂಡ
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ…
- ವಸತಿ, ಕೈಗಾರಿಕಾ ಕಟ್ಟಡಕ್ಕೆ ಪ್ರತಿ ಚ.ಮೀಗೆ 2,000 ದಂಡ ನಿಗದಿ
- ವಾಣಿಜ್ಯ ಕಟ್ಟಡಕ್ಕೆ ಪ್ರತಿ ಚ.ಮೀಗೆ 3,000 ದಂಡ
‘ಗ್ರಾಮ ಪಂಚಾಯ್ತಿ ಚುನಾವಣೆ’ಗೆ ‘ನಾಮಪತ್ರ’ದೊಂದಿಗೆ ಸಲ್ಲಿಸಲು ಈ ‘ದಾಖಲೆ’ಗಳು ಕಡ್ಡಾಯ








