ಪಾಟ್ನಾ: ಪ್ರಶಾಂತ್ ಕಿಶೋರ್ ಅವರ ಜನ ಸುರಾಜ್ ಪಕ್ಷದ (ಜೆಎಸ್ಪಿ) ಬೆಂಬಲಿಗನೊಬ್ಬ ಪಾಟ್ನಾದ ಮೊಕಾಮಾದಲ್ಲಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾದ ನಂತರ ಬಿಹಾರದಲ್ಲಿ ರಾಜಕೀಯ ಉದ್ವಿಗ್ನತೆ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ದುಲಾರ್ ಚಂದ್ ಯಾದವ್ ಎಂದು ಗುರುತಿಸಲಾಗಿದೆ.
ಎರಡು ಪಕ್ಷಗಳ ಬೆಂಬಲಿಗರ ನಡುವೆ ಘರ್ಷಣೆ ಭುಗಿಲೆದ್ದ ನಂತರ ದುಲಾರ್ ಚಂದ್ ಯಾದವ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಜೆಎಸ್ಪಿಯ ಮತ್ತೊಬ್ಬ ಅಭ್ಯರ್ಥಿ ಪಿಯೂಷ್ ಪ್ರಿಯದರ್ಶಿ ಪರ ಪ್ರಚಾರ ನಡೆಸುತ್ತಿದ್ದಾಗ ದುಲಾರ್ಚಂದ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಟ್ನಾ ಎಸ್ಎಸ್ಪಿ ಕಾರ್ತಿಕೇಯ ಕೆ ಶರ್ಮಾ ಪಿಟಿಐಗೆ ಹೇಳಿಕೆ ನೀಡಿದ್ದು, “ಮೊಕಾಮಾ ತಾಲ್ ಪ್ರದೇಶದಲ್ಲಿ ಪ್ರಚಾರದ ಸಮಯದಲ್ಲಿ ಅಭ್ಯರ್ಥಿಯ ಬೆಂಬಲಿಗನೊಬ್ಬ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಶವವನ್ನು ಪೊಲೀಸರಿಗೆ ಹಸ್ತಾಂತರಿಸದ ಕಾರಣ ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಅವರು ಕೊಲ್ಲಲ್ಪಟ್ಟಿದ್ದಾರೆಯೇ ಅಥವಾ ಇದು ಆಕಸ್ಮಿಕ ಸಾವುವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸರು ಅವರ ಶವವನ್ನು ಪಡೆದ ನಂತರವೇ ತಿಳಿಯುತ್ತದೆ ಎಂದು ಎಸ್ಎಸ್ಪಿ ಹೇಳಿದರು.
“ಮೃತನನ್ನು ಅವರ ಎದುರಾಳಿಯ ಪಕ್ಷದ ಬೆಂಬಲಿಗರು ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪಿಸಲಾಗುತ್ತಿದೆ” ಎಂದು ಎಸ್ಎಸ್ಪಿ ಹೇಳಿದರು.
 
		



 




