ಬೆಂಗಳೂರು: ನಗರದ ಹೆಬ್ಬಾಳದ ಸಿಂಧಿ ಕಾಲೇಜಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರಸಿದ್ದವಾದ ಕ್ರೆಸೆಂಡೊ 2025 ಎಂಬ ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿಯರಾದ ಕುಸಿರವಿ ಮತ್ತು ತೇಜಸ್ವಿನಿ ಶರ್ಮ ಉದ್ಘಾಟಿಸಿದರು.
ಇಂದು ಉದ್ಘಾಟನೆ ನೃತ್ಯದಲ್ಲಿ ವಿದ್ಯಾರ್ಥಿಗಳು ಬ್ರಹ್ಮಾಸ್ತ್ರ ಎಂಬ ಥೀಮಿನೊಂದಿಗೆ ಸೊಗಸಾದ ನೃತ್ಯವನ್ನು ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್ ಆಶಾ ರವರು ಅತಿಥಿಗಳನ್ನು ಸ್ವಾಗತಿಸಿ. ಕ್ರೆಸೆಂಡೋ ಉತ್ಸವವು ನಡೆದು ಬಂದ ಬಗೆಯನ್ನು ವಿವರಿಸಿದರು.

ಮುಖ್ಯ ಅತಿಥಿಗಳಾದ ಖುಷಿರವಿ ಅವರು ಮಾತನಾಡುತ್ತಾ ಕಾಲೇಜಿನಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೋತ್ಸಾಹ ನೀಡುವಂತಹದ್ದು. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಅಲ್ಲದೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಸೂಕ್ತ ಗಮನವಹಿಸಬೇಕು ಎಂದರು.
ಚಲನಚಿತ್ರ ನಟಿಯಾದ ತೇಜಸ್ವಿನಿ ಶರ್ಮಾ ಅವರು ಮಾತನಾಡಿ ವಿದ್ಯಾರ್ಥಿಗಳು ಇಂದಿನ ಟೆಕ್ನಾಲಜಿಯನ್ನು ಬಳಸಿಕೊಂಡು ಉತ್ತಮವಾಗಿ ಬೆಳೆಯಬೇಕು ಎಂದರು.

ಚಲನಚಿತ್ರ ನಿರ್ದೇಶಕರಾದ ವಿನಾಯಕ ಅವರು ತಮ್ಮ ನಿರ್ದೇಶನದ ಚಲನಚಿತ್ರ ವಾದ ಫುಲ್ ಮೀಲ್ಸ್ ನವಂಬರ್ 21ರಂದು ರಿಲೀಸ್ ಆಗಲಿದ್ದು ಈ ಚಲನಚಿತ್ರವನ್ನು ಎಲ್ಲರೂ ನೋಡಬೇಕು ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹಿಂದಿ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಎಫ್ ಮಾದ್ವಾನಿ ಅವರು ಮಾತನಾಡುತ್ತಾ ಕಾರ್ಯಕ್ರಮಕ್ಕೆ ಶುಭವನ್ನು ಕೋರಿದರು. ಅಲ್ಲದೆ ವಿದ್ಯಾರ್ಥಿಗಳು ಹೆಚ್ಚಾಗಿ ಎಲ್ಲಾ ರೀತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆಯಬೇಕೆಂದು ಹಾರೈಸಿದರು.
ದಿನಾಂಕ 30 ಮತ್ತು 31 ರಂದು ಎರಡು ದಿನಗಳ ಕಾಲ ಸುಮಾರು 30 ಸ್ಪರ್ಧೆಗಳು ನಡೆಯಲಿದ್ದು 150ಕ್ಕೂ ಅಧಿಕ ಕಾಲೇಜುಗಳಿಂದ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಇದು ಬೆಂಗಳೂರಿನ ಪ್ರತಿಷ್ಠಿತ ಸಾಂಸ್ಕೃತಿಕ ಸ್ಪರ್ಧಾ ಉತ್ಸವವಾಗಿದ್ದು ಸುಮಾರು ಎರಡುವರೆ ಲಕ್ಷಕ್ಕೂ ಹೆಚ್ಚು ಮೊತ್ತದ ಬಹುಮಾನವನ್ನು ವಿದ್ಯಾರ್ಥಿಗಳಿಗೆ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.
BREAKING: ‘ಸ್ಯಾಂಡಲ್ ವುಡ್ ಹಿರಿಯ ನಟಿ ಉಮಾಶ್ರಿ’ಗೆ 2019ನೇ ಸಾಲಿನ ‘ಡಾ.ರಾಜ್ ಕುಮಾರ್’ ಪ್ರಶಸ್ತಿ
BREAKING: ಮುಂಬೈನಲ್ಲಿ 17 ಮಕ್ಕಳನ್ನು ಒತ್ತಾಯಾಳಾಗಿ ಇರಿಸಿಕೊಂಡ ರೋಹಿತ್ ಆರ್ಯ ಪೊಲೀಸರ ಎನ್ ಕೌಂಟರ್ ಗೆ ಬಲಿ








