ಬೆಂಗಳೂರು : ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೌದು, ಮನೋಜ್ ಎಂಬಾತ ಬನಶಂಕರಿ ಪೊಲೀಸ್ ಠಾಣೆಗೆ ನಟ ಧ್ರುವ ಸರ್ಜಾ ವಿರುದ್ಧ ದೂರು ನೀಡಿದ್ದಾರೆ. ನಟ ಧ್ರುವ ಸರ್ಜಾರ, ಮ್ಯಾನೇಜರ್, ಚಾಲಕ, ಫ್ಯಾನ್ಸ್ ವಿರುದ್ದ ದೂರು ದಾಖಲಿಸಿದ್ದಾರೆ.
ಧ್ರುವ ಸರ್ಜಾ ರನ್ನು ನೋಡಲು ದಿನನಿತ್ಯ ಅಭಿಮಾನಿಗಳು ಬರುವುದರಿಂದ ನಮಗೆ ಸಾಕಷ್ಟು ತೊಂದರೆಗಳಾಗುತ್ತಿದೆ, ಧ್ರುವ ಸರ್ಜಾ ಅಭಿಮಾನಿಗಳು ಮನೆ ಮುಂದೆ ಪ್ರತಿನಿತ್ಯ ಬೈಕ್ ಗಳನ್ನ ಅಡ್ಡಲಾಗಿ ಪಾರ್ಕ್ ಮಾಡುತ್ತಾರೆ. ಬೈಕ್ ತೆಗೆಯುವಂತೆ ಅದೆಷ್ಟೇ ಮನವಿ ಮಾಡಿದರೂ ಕೂಡ ಕೇಳುವುದಿಲ್ಲ. ಪ್ರತಿನಿತ್ಯ ಮನೆಯ ಮುಂದೆ ಧೂಮಪಾನ ಮಾಡುತ್ತಾರೆ, ಮನೆಯ ಗೋಡೆಯ ಮೇಲೆ ಉಗಿಯುತ್ತಾರೆ, ಕಿರುಚಾಟ ನಡೆಸುತ್ತಾ ಇರುತ್ತಾರೆ ಇದರಿಂದ ನೆಮ್ಮದಿ ಇಲ್ಲದಂತಾಗಿದೆ ಎಂದು ಎಂದು ಪಕ್ಕದ ಮನೆಯ ಮನೋಜ್ ಎಂಬುವವರು ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.








