ಬೆಂಗಳೂರು : ರಾಜ್ಯದ ಗ್ರಾಮೀಣ ಜನತೆಗೆ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಗ್ರಾಮೀಣ ಭಾಗದಲ್ಲಿ ಇನ್ಮುಂದೆ ಆಸ್ತಿ ಪ್ರಮಾಣ ಪತ್ರ ಪಡೆಯುವುದು ಮತ್ತಷ್ಟು ಸುಲಭವಾಗಲಿದೆ.
ಹೌದು, ಗ್ರಾಮೀಣ ಭಾಗಗಳಲ್ಲಿ ಆಸ್ತಿ ಪ್ರಮಾಣ ಪತ್ರ ಪಡೆಯಲು ಸುಲಭವಾಗುವಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ನ್ನು ಜಾರಿಗೊಳಿಸಿದೆ.
ಈ ನಿಯಮಗಳ ಜಾರಿಯಿಂದ ಇ-ಸ್ವತ್ತು ಅಭಿಯಾನಕ್ಕೆ ರೆಕ್ಕೆ ಬಂದಿದ್ದು, ಒಂದು ಕೋಟಿ ಗ್ರಾಮೀಣ ಆಸ್ತಿಗಳಿಗೆ ಡಿಜಿಟಲ್ ಆಸ್ತಿ ಪ್ರಮಾಣ ಪತ್ರ ವಿತರಿಸುವ ನಮ್ಮ ಗುರಿ ಸಾಧ್ಯವಾಗಲಿದೆ. ಗ್ರಾಮೀಣ ಭಾಗದ ಜನರಿಗೆ ವ್ಯವಸ್ಥಿತವಾಗಿ ಎಲ್ಲಾ ಸೇವೆಗಳನ್ನು ನೀಡುವ ನಮ್ಮ ಸಂಕಲ್ಪ ನೆರವೇರಲಿದ್ದು, ನಮ್ಮ ಇ-ಸ್ವತ್ತು ಅಭಿಯಾನ ಯಶಸ್ವಿಯಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಕಟಣೆಯಾಗಿದೆ.








