ಬೆಂಗಳೂರು : ಸಂಸ್ಥೆಯ ಬಸ್‌ಗಳಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡಗಳು ಸಂಭವಿಸಿದಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಕರ್ನಾಟಕ ಸಾರಿಗೆ ಇಲಾಖೆಯು ಮಹತ್ವದ ಆದೇಶ ಹೊರಡಿಸಿದೆ.
ಸಂಸ್ಥೆಯ ಬಸ್ಸುಗಳಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡಗಳು ಸಂಭವಿಸಿದಾಗ ಅಗ್ನಿನಂದಕಗಳ ಉಪಯೋಗದ ಬಗ್ಗೆ ಎಲ್ಲಾ ಸಿಬ್ಬಂದಿಗಳಿಗೆ ಹೆಚ್ಚು ಹೆಚ್ಚು ತರಬೇತಿ ನೀಡುವುದು. ಸಂಸ್ಥೆಯ ವಾಹನಗಳ/ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಕೆಳಕಂಡ ಕ್ರಮಗಳನ್ನು ಅನುಸರಿಸುವುದು ಅಗತ್ಯವಾಗಿರುತ್ತದೆ.
1. ಎಲ್ಲಾ ಪ್ರತಿಷ್ಠಿತ ರಾತ್ರಿ ಸಾರಿಗೆಯ ವಾಹನಗಳಲ್ಲಿ 05 ಲೀಟರ್‌ನ 02 ಅಗ್ನಿನಂದಕಗಳು, ಇತರೆ ವಾಹನಗಳಲ್ಲಿ ಅವಶ್ಯ ಅಗ್ನಿ ನಂದಕಗಳು ಸುಸ್ಥಿತಿಯಲ್ಲಿ ಇರುವುದನ್ನು ಖಾತರಿಪಡಿಸಿಕೊಂಡು ಕಾರ್ಯಾಚರಣೆ ಮೇಲೆ ಕಳುಹಿಸುವುದು.
2. ಪ್ರತಿಷ್ಠಿತ ವಾಹನಗಳಲ್ಲಿ (Fire Detection & Suppression System), FAPS (Fire Alarm & Protection System) ಹಾಗೂ ಸದರಿ ಉಪಕರಣಗಳು ಸದಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವುದು ಹಾಗೂ ಈ ಬಗ್ಗೆ ಚಾಲನಾ ಸಿಬ್ಬಂದಿಗಳಿಗೆ ಅವುಗಳ ಕಾರ್ಯನಿರ್ವಹಣೆ ಬಗ್ಗೆ ತಿಳುವಳಿಕೆ ಮೂಡಿಸುವುದು.
3. FDAS (Fire Detection & Alarm System) ವಾಹನದ ಚಾಲಕರು Emergency Button Press ಮಾಡಿ ವೋಟರ್ ಶಬ್ದದೊಂದಿಗೆ ಎಚ್ಚರಿಸುವ ಬಗ್ಗೆ ಚಾಲಕರಿಗೆ ತರಬೇತಿ/ಮಾಹಿತಿಯನ್ನು ನೀಡುವುದು ಪ್ಯಾನಿಕ್ ಬಟನ್‌ಗಳು ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿರುವುದನ್ನು ಖಾತರಿಪಡಿಸಿಕೊಳ್ಳುವುದು. ಪ್ಯಾನಿಕ್ ಬಟನ್‌ಗಳು ಇಲ್ಲದಿದ್ದಲ್ಲಿ ಅವುಗಳನ್ನು ಅಳವಡಿಸಲು ತತಕ್ಷಣ ಕ್ರಮ ವಹಿಸುವುದು.
4. ಪ್ರತಿ ನಿತ್ಯ ಕಾರ್ಯಾಚರಣೆಗೊಳ್ಳುವ ಸಂದರ್ಭದಲ್ಲಿ ಎಲೆಕ್ಟಿಕ್ ವೈರ್‌ಗಳು ಸುಸ್ಥಿತಿಯಲ್ಲಿರುವ ಕುರಿತು ಪರಿಶೀಲನೆಗೆ ಒಳಪಡಿಸುವುದು ಮತ್ತು ಎಲ್ಲಾ ವಾಹನಗಳಲ್ಲಿ ಬ್ಯಾಟರಿ ಕಟ್‌ಆಫ್ ಸ್ವಿಚ್‌ಗಳು ಸುಸ್ಥಿತಿಯಲ್ಲಿರುವ ಕುರಿತು ಸಮೀಕ್ಷೆ ನಡೆಸಿ ಅವುಗಳು ಕಾರ್ಯ ನಿರ್ವಹಿಸದಿದ್ದಲ್ಲಿ ದುರಸ್ಥಿಪಡಿಸುವುದು ಮತ್ತು ಎಲೆಕ್ಟಿಕಲ್ ವೈರುಗಳು ವಾಹನದ ಮೆಟಲ್‌ಗೆ ಉಜ್ಜುವಿಕೆಯಿಂದ ಉಂಟಾಗಬಹುದಾದ ಅವಘಡಗಳನ್ನು ತಪ್ಪಿಸಲು ಬ್ಯಾಟರಿ ಕೇಬಲ್‌ಗೆ ಸ್ಟೀವ್‌ಗಳು ಮತ್ತು ರಬ್ಬರ್ ಗೋಮೇಟ್ ಬುಷ್‌ಗಳನ್ನು ಅಳವಡಿಸುವುದು.
5. ಎಲ್ಲಾ ಎಸಿ ವಾಹನಗಳಲ್ಲಿ ಕಿಟಕಿ ಗ್ಲಾಸ್‌ಗಳನ್ನು ತುರ್ತು ಸಂದರ್ಭಗಳಲ್ಲಿ ಬ್ರೇಕ್ ಮಾಡುವ ಹ್ಯಾಮರ್‌ಗಳು ಅಳವಡಿಕೆಯಾಗಿರುವುದನ್ನು ಖಾತರಿಪಡಿಸಿಕೊಳ್ಳುವುದು ಮತ್ತು ಹ್ಯಾಮರ್‌ಗಳು ವಾಹನಗಳಲ್ಲಿ ಅಳವಡಿಸದಿದ್ದಲ್ಲಿ ಅಳವಡಿಸಿಯೇ ಕಾರ್ಯಾಚರಣೆ ಮಾಡಲು ಅಗತ್ಯ ಕ್ರಮ ವಹಿಸುವುದು.
6. ರಾತ್ರಿ ವೇಳೆಯಲ್ಲಿ ಸೊಳ್ಳೆ ನಿಯಂತ್ರಿಸಲು ಚಾಲನಾ ಸಿಬ್ಬಂದಿಗಳು ಸೊಳ್ಳೆ ಕಾಯಲ್‌ಗಳನ್ನು ಹಚ್ಚದಂತೆ ಕಟ್ಟುನಿಟ್ಟಿನ ಕ್ರಮ ವಹಿಸುವುದು.
7. ಎಲ್ಲಾ ವಾಹನಗಳ ತುರ್ತು ಬಾಗಿಲುಗಳು/ಪ್ರಯಾಣಿಕರ ಬಾಗಿಲುಗಳು/ಚಾಲಕರ ಬಾಗಿಲುಗಳು ಕಾರ್ಯ ನಿರ್ವಹಿಸುವ/ಸುಸ್ಥಿತಿಯಲ್ಲಿರುವ ಬಗ್ಗೆ ಸಮೀಕ್ಷೆ ನಡೆಸಿ ಕಾರ್ಯಾಚರಣೆ ಮೇಲೆ ಕಳುಹಿಸುವುದು.
8. ವಾಹನಗಳ ಕಾರ್ಯಾಚರಣೆ ವೇಳೆ ಲಗೇಜ್ ಅನ್ನು ಸ್ವೀಕರಿಸುವಂತಹ ಚಾಲನಾ ಸಿಬ್ಬಂದಿಗಳು ಬೆಂಕಿಯನ್ನು ಆಕರ್ಷಿಸಿಸುವಂತಹ ವಸ್ತುಗಳನ್ನು/ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ನಿಷೇಧಿತ ವಸ್ತುಗಳನ್ನು ಸಾಗಾಣಿಕೆ ಮಾಡದಂತೆ ಚಾಲನಾ ಸಿಬ್ಬಂದಿಗಳಿಗೆ ಆಗಿಂದಾಗ್ಗೆ ಸೂಕ್ತ ತಿಳುವಳಿಕೆ ಮೂಡಿಸುವುದು.
9. ಈ ಕುರಿತು ಸಂಸ್ಥೆಯ ಬಸ್‌ಗಳಲ್ಲಿ ಆಕಸ್ಮಿಕವಾಗಿ ಉಂಟಾಗುವ ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಅಗ್ನಿಶಾಮಕ ದಳ/ಪೊಲೀಸ್ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳಿಂದ ವಿಶೇಷ ಕಾರ್ಯಾಗಾರಗಳನ್ನು ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ತಲುಪುವ ರೀತಿಯಲ್ಲಿ ಪ್ರತಿ ನಿತ್ಯ ಬೆಳಿಗ್ಗೆ, ಸಂಜೆ ನಡೆಸುವುದು ಮತ್ತು ನಡೆಸಿದ ಕುರಿತು ಫೋಟೋ ಸಮೇತ ಅನುಸರಣಾ ವರದಿಗಳನ್ನು ಕಳುಹಿಸುವುದು.











