ಬೆಂಗಳೂರು: ರಾಜ್ಯ ಸರ್ಕಾರದಿಂದ ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಅರ್ಜಿ ತುಂಬಲು ಈ ಕೆಳಕಂಡಂತೆ ವಿಶೇಷ ಸೂಚನೆಗಳನ್ನು ನೀಡಿದೆ.
ಜ್ಯೋತಿ ಸಂಜೀವಿನಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರಿಗೆ ಅರ್ಜಿ ತುಂಬಲು ವಿಶೇಷ ಸೂಚನೆಗಳು :
1.ಅನುಬಂಭ 1 ನ್ನು ಕಛೇರಿಗೆ 2 ಪ್ರತಿಗಳಲ್ಲಿ ಸಲ್ಲಿಸುವುದು.
2. ಅರ್ಜಿಯಲ್ಲಿನ ವಿವರಗಳನ್ನು ಕನ್ನಡ ಮತ್ತು ಆಂಗ್ಲ (CAPITAL LETTERS)ಭಾಷೆಯಲ್ಲಿ ತುಂಬುವುದು.
3.ಆ ನೌಕರರ ಮತ್ತು ಎಲ್ಲಾ ಅವಲಂಬಿತರ ಆಧಾರ್‌ಕಾರ್ಡ್ ಜೆರಾಕ್ಸ್ ಪ್ರತಿ ಲಗತ್ತಿಸುವುದು.
4. ಎಲ್ಲಾ ಅವಲಂಬಿತರ ಪ್ರತಿಯೊಬ್ಬರ ಭಾವಚಿತ್ರಗಳ ಹಿಂದೆ ಬಿಳಿಬಣ್ಣದ ಸೀನ್‌ನಲ್ಲಿರಬೇಕು ( Colour Photo With Wight BackGruond) ಪಾಸ್‌ಪೋರ್ಟ್ ಸೈಜ್
5. ನೌಕರರು ಅವಲಂಬಿತರ ಭಾವಚಿತ್ರದ ಮೇಲೆ ಸಹಿ ಮಾಡಿ ಮತ್ತು ದಿನಾಂಕವನ್ನು ನಮೂದಿಸಿ.
6. ಅನುಬಂಧ-1 ರಲ್ಲಿ ತೋರಿಸಿದ ಅವಲಂಬಿತರ ವಿವರಗಳನ್ನು FORM-C ನಲ್ಲಿಯೂ ತುಂಬಿ BEO ರವರ ಸಹಿಗಾಗಿ ಸಲ್ಲಿಸುವುದು.
7. ನೌಕರರ ಮತ್ತು ಅವಲಂಬಿತರ ಭಾವಚಿತ್ರಗಳು ಒಂದುಸಾರಿ ಅಪ್‌ಲೋಡ್ ಆದಮೇಲೆ ಪುನಃ ಎಲ್ಲರ ಭಾವಚಿತ್ರಗಳನ್ನು 5ವರ್ಷಗಳ ನಂತರವೇ ಬದಲಾಯಿಸಲು ಅವಕಾಶವಿರುತ್ತದೆ.
8.ನೌಕರರಿಗೆ ಅನುಬಂಧ-1 ಸಲ್ಲಿಸಿದ ನಂತರದಲ್ಲಿ ಹೊಸಸೇರ್ಪಡೆ ಮತ್ತು ತೆಗೆದು ಹಾಕುವಿಕೆಗೆ ಅವಕಾಶವಿದೆ.(ವಿವಾಹ, ಮಗುಜನನ, ಮರಣಇತ್ಯಾದಿ)ಇದಕ್ಕಾಗಿ FORM-A4 ಇರುತ್ತದೆ..
9.ಎಲ್ಲಾ ಅವಲಂಬಿತರ ಹೆಸರುಗಳನ್ನು ಆಧಾರ್‌ಕಾರ್ಡ್‌ನಲ್ಲಿರುವಂತೆಯೇ ತುಂಬಬೇಕು. ವ್ಯತ್ಯಾಸವಾದಲ್ಲಿ ಇಂದೀಕರಿಸಲು ಬರುವುದಿಲ್ಲ.
10.ನೌಕರ ಮತ್ತು ಎಲ್ಲಾ ಅವಲಂಬಿತರ ಭಾವಚಿತ್ರಗಳನ್ನು 5ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಬದಲಾಯಿಸಬೇಕು.
11. ಪುರುಷ ನೌಕರರಿಗೆ : ಹೆಂಡತಿ, ಮಕ್ಕಳು, ಮತ್ತು ತಂದೆತಾಯಿಗಳು ಹಾಗೂ ಮಲತಾಯಿ ಮಾತ್ರ ಅವಲಂಬಿತರಾಗಿರುತ್ತಾರೆ. ಹೆಂಡತಿಯ ತಂದೆ,ತಾಯಿಗಳು ಬರುವುದಿಲ್ಲ)
12. ಮಹಿಳಾ ನೌಕರರಿಗೆ : ಗಂಡ,ಮಕ್ಕಳು ಮತ್ತು ತಮ್ಮಗಳ ತಂದೆ,ತಾಯಿಗಳು ಹಾಗೂ ಮಲತಾಯಿ ಮಾತ್ರ (ಗಂಡನ ತಂದೆ,ತಾಯಿ ಅಂದರೆ ಅತ್ತೆ, ಮಾವ ಬರುವುದಿಲ್ಲ.)
13.ಸರ್ಕಾರಿ ವಿವಾಹಿತ ನೌಕರರು ಎರಡು ಮದುವೆಯಾಗಿದ್ದರೆ ಮೊದಲನೇ ಹೆಂಡತಿ ಮತ್ತು ಮಕ್ಕಳು ಮಾತ್ರ ಈ ಯೋಜನೆ ಅನ್ವಯ ಎರಡನೇ ಹೆಂಡತಿ ಮತ್ತು ಮಕ್ಕಳಿಗೆ ಈ ಯೋಜನೆಗೆ ಅವಕಾಸವಿರುವುದಿಲ್ಲ.
ವಿಶೇಷ ಸೂಚನೆ : ಸರ್ಕಾರಿ ನೌಕರರು ಚಿಕಿತ್ಸೆ ಪಡೆಯಲು ಯೋಜನೆಗೆ ಒಳಪಟ್ಟ ಆಸ್ಪತ್ರೆಗೆ ಹೋದಾಗ ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ನಮೂದಾಗಿರುವ ಎಲ್ಲಾ ಅವಲಂಬಿತರ ಹೆಸರು ಮತ್ತು ಭಾವಚಿತ್ರಗಳು ಗೋಚರಿಸುತ್ತವೆ. ಈ ಯೋಜನೆಗೆ ಒಳಪಡದಿದ್ದರೆ ಬರೀ ನೌಕರರ ಹೆಸರು ಮಾತ್ರ ಆಸ್ಪತ್ರೆಯ ವೆಬ್‌ಸೈಟ್‌ನಲ್ಲಿ ಗೋಚರಿಸುವುದರಿಂದ ಅವಲಂಬಿತರಿಗೆ ಚಿಕಿತ್ಸೆ ಕೊಡಿಸಲು ತೊಂದರೆಯಾಗುತ್ತದೆ.
ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಸಿದ್ಧರಾಮಯ್ಯ ಸ್ಪರ್ಧಿಸುವುದು ಖಚಿತ: ಸಚಿವ ಬೈರತಿ ಸುರೇಶ್








