ಶಿವಮೊಗ್ಗ: ದಿನ ಬೆಳಗಾದರೇ ಸಾಕು ಶಾಸಕ ಗೋಪಾಲಕೃಷ್ಣ ಬೇಳೂರು ನಿವಾಸದ ಬಳಿಯಲ್ಲಿ ಜನರ ದಂಡೇ ನೆರೆದಿರುತ್ತದೆ. ತಮ್ಮನ್ನು ಕಾಣಲು ಬರುವಂತ ಜನರನ್ನು ಸಮಾಧಾನದಿಂದಲೇ ಅವರ ಕಷ್ಟಗಳನ್ನು ಆಲಿಸುವಂತ ಅವರು, ತಮ್ಮ ಕೈಲಾಸ ಸಹಾಯ, ಅವರ ಕೆಲಸವನ್ನು ಸ್ಥಳದಲ್ಲೇ ಮಾಡಿಕೊಟ್ಟು, ಜನರಲ್ಲಿ ಜಾನಾನುರಾಗಿ ನಾಯಕರೆನಿಸಿಕೊಂಡಿದ್ದಾರೆ. ಇಂತಹ ಅವರು ಇದೀಗ ಮಾನವೀಯತೆ ಜೊತೆಗೆ, ತಮ್ಮ ಸಾಮಾಜಿಕ ಬದ್ಧತೆಯನ್ನು ಮೆರೆದು ಮತ್ತೆ ಸುದ್ದಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಕೆಂಚನಾಲ ಗ್ರಾಮ ಮನು ಎಂಬ ಯುವಕ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಉಂಟಾಗಿತ್ತು. ತಲೆಗೆ ತೀವ್ರ ಪೆಟ್ಟುಗೊಂಡಿದ್ದಂತ ಆತ ಕೋಮಾದಲ್ಲಿದ್ದಾನೆ. ಚಿಕಿತ್ಸೆಗೆ ಕುಟುಂಬಸ್ಥರು ತಮ್ಮ ಬಡತನದ ನಡುವೆಯೂ ಲಕ್ಷಾಂತರ ಹೊಂದಿಸಿ, ಕೊಡಿಸುತ್ತಿದ್ದಾರೆ. ಈ ಕುಟುಂಬ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನಿವಾಸಕ್ಕೆ ತೆರಳಿ ತಮ್ಮ ಮಗನ ಚಿಕಿತ್ಸಗೆ ನೆರವಾಗುವಂತೆ ವಿನಂತಿಸಿತ್ತು.
ಈ ವಿಷಯ ತಿಳಿದಂತ ಶಾಸಕ ಗೋಪಾಲಕೃಷ್ಣ ಬೇಳೂರು, ಕೂಡಲೇ ಬೈಕ್ ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿರುವಂತ ಕೆಂಚನಾಲ ಗ್ರಾಮದ ಮನು ಚಿಕಿತ್ಸೆಗೆ ಆರ್ಥಿಕ ನೆರವನ್ನು ನೀಡಿದ್ದಾರೆ. ಈ ಮೂಲಕ ಬಡ ಕುಟುಂಬಕ್ಕೆ ಮಗನ ಚಿಕಿತ್ಸೆಗೆ ನೆರವಾಗಿ ಮಾನವೀಯತೆಯನ್ನು ಮೆರೆದಿದ್ದಾರೆ.

ಇನ್ನೂ ಸಾಗರದ ಶೆಟ್ಟಿಕೆರೆಯಲ್ಲಿರುವಂತ ಗಂಗಾಧರೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ನೆರವಾಗುವಂತೆಯೂ ಗ್ರಾಮಸ್ಥರು ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಭೇಟಿಯಾಗಿ ಕೋರಿದೆ. ಇದಕ್ಕೆ ಸಕಾರಾತ್ಮಕವಾಗಿಯೇ ಸ್ಪಂದಿಸಿದಂತ ಅವರು, ಸ್ಥಳದಲ್ಲೇ ಶೆಟ್ಟಿಕೆರೆಯ ಶ್ರೀ ಗಂಗಾಧರೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ 2 ಲಕ್ಷ ರೂಪಾಯಿಗಳ ಧನಸಹಾಯವನ್ನು ತಮ್ಮ ವೈಯಕ್ತಿಕವಾಗಿ ನೀಡಿ, ಸಾಮಾಜಿಕ ಬದ್ಧತೆಯನ್ನು ತೋರಿದ್ದಾರೆ.
ಇವು ಕೇವಲ ಉದಾಹರಣಗಳಷ್ಟೇ. ಹೀಗೆ ದಿನಂಪ್ರತಿ ತಮ್ಮ ನಿವಾಸಕ್ಕೆ ಬರುವಂತ ಕ್ಷೇತ್ರದ ಜನರಿಗೆ ಒಂದಿಲ್ಲೊಂದು ರೀತಿಯಲ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದಂತ ಗೋಪಾಲಕೃಷ್ಣ ಬೇಳೂರು ನೆರವಾಗುತ್ತಿದ್ದಾರೆ. ಅವರ ಈ ಕಾರ್ಯವನ್ನು ಕ್ಷೇತ್ರದ ಜನತೆ ಕೊಂಡಾಡುತ್ತಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
BREAKING: ದೇಶದಲ್ಲಿ ಮತ್ತೊಂದು ಭೀಕರ ಬಸ್ ಅಗ್ನಿ ಅವಘಡ: ಇಬ್ಬರು ಸಜೀವ ದಹನ, ಹಲವರಿಗೆ ಗಾಯ








