ತುಮಕೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವಿಎನ್ ರೆಡ್ಡಿ(103) ಅವರು ನಿಧನರಾಗಿದ್ದಾರೆ. ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರ ವಿಎನ್ ರೆಡ್ಡಿ ಇನ್ನಿಲ್ಲವಾಗಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಟಾಪುರದಲ್ಲಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಸ್ವಾತಂತ್ರ್ಯ ಹೋರಾಟಗಾರ ವಿ.ಎನ್ ರೆಡ್ಡಿ ಅವರು ನಿಧನರಾಗಿದ್ದಾರೆ. ತಮ್ಮ ವೆಂಕಟಾಪುರ ಗ್ರಾಮ ಮನೆಯಲ್ಲಿ ವಿಎನ್ ರೆಡ್ಡಿ ನಿಧನರಾಗಿದ್ದಾರೆ.
ಮೃತ ಸ್ವಾತಂತ್ರ್ಯ ಹೋರಾಟಗಾರಿ ವಿಎನ್ ರೆಡ್ಡಿ ಅವರು ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿದ್ದರು. ಮಹಾತ್ಮಾ ಗಾಂಧೀಜಿಯವರ ಸೇವೆಯನ್ನು ನಂದಿಬೆಟ್ಟದಲ್ಲಿ ವಿಶ್ರಾಂತಿಯಲ್ಲಿ ಇದ್ದಾಗ ಮಾಡಿದ್ದರು.
ಇಂದು ಮೃತರಾದಂತ ಸ್ವಾತಂತ್ರ್ಯ ಹೋರಾಟಗಾರಿ ವಿಎನ್ ರೆಡ್ಡಿ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ಸ್ವಾತಂತ್ರ್ಯ ಹೋರಾಟಗಾರ ವಿ.ಎನ್.ರೆಡ್ಡಿ ನಿಧನಕ್ಕೆ ಮಾಜಿ ಸಂಸದ ವಿಎಸ್ ಉಗ್ರಪ್ಪ ಸಂತಾಪ
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಟಪುರ ಗ್ರಾಮದ ನಿವಾಸಿ. ತಾಲ್ಲೂಕು ಮಂಡಳಿ ಅಧ್ಯಕ್ಷರಾಗಿದ್ದರು, ಆಜೀವ ಕಾಂಗ್ರೆಸ್ ನಾಯಕರಾಗಿದ್ದರು ಮತ್ತು ತಾತ್ವಿಕವಾಗಿ ಗಾಂಧಿಯಾನ್ ಆಗಿದ್ದರು. ವಿದುರಸ್ವತ ಸ್ವಾತಂತ್ರ್ಯ ಚಳವಳಿ, ಉಪ್ಪಿನ ಸತ್ಯಗ್ರಹದಲ್ಲಿ ಭಾಗವಹಿಸಿದರು. ಕ್ವಿಟ್ ಇಂಡಿಯಾ ಚಳುವಳಿಗಾಗಿ ಬೆಂಗಳೂರಿನ ಸೆಟ್ರಲ್ ಜೈಲಿನಲ್ಲಿ ಜೈಲಿನಲ್ಲಿದ್ದರು ಎಂಬುದಾಗಿ ಮಾಜಿ ಸಂಸದ ವಿಎಸ್ ಉಗ್ರಪ್ಪ ಹೇಳಿದ್ದಾರೆ.
ಇವರು ಇಂದು ಬೆಳಗ್ಗೆ ತಮ್ಮ ಊರಾದ ಪಾವಗಡ ತಾಲ್ಲೂಕಿನ ವೆಂಕಟಾಪುರ ಊರಿನಲ್ಲಿ ದೈವಾಧೀನರಾದರು. ಇವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಇವರ ಅಗಲಿಕೆಯಿಂದ ನಮಗೆಲ್ಲ ಅತೀವ ನೋವು ಹಾಗೂ ತುಂಬಲಾರದ ನಷ್ಟ ಉಂಟಾಗಿದೆ ಎಂದರೆ ತಪ್ಪಾಗಲಾರದು. ಇವರ ಅಗಲಿಕೆಯಿಂದ ಆಗಿರುವ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಊರಿನವರಿಗೆ ನೀಡಲಿ ಎಂದು ಸಂತಾಪವನ್ನು ಸೂಚಿಸಿದ್ದಾರೆ.
‘ಶರಾವತಿ ಪಂಪ್ಡ್ ಸ್ಟೋರೇಜ್’ ಯೋಜನೆ: ‘KPCL ಅಧಿಕಾರಿ’ಗಳಿಂದ ಈ ಸ್ಪಷ್ಟನೆ
ಸಾರ್ವಜನಿಕರೇ ಗಮನಿಸಿ : ನವೆಂಬರ್ 1 ರಿಂದ `ಆಧಾರ್ ಕಾರ್ಡ್ ಅಪ್ ಡೇಟ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ








