ಶಿವಮೊಗ್ಗ: ಕಳೆದ 32 ವರ್ಷಗಳಿಂದ ಶಿವಮೊಗ್ಗದ ಸೊರಬ ತಾಲ್ಲೂಕಿನ ಕಾನಹಳ್ಳಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಂತ ಗೋಪಾಲಮ್ಮ ಅವರು ಇಂದು ನಿವೃತ್ತರಾದರು. ಅವರಿಗೆ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದಂತ ಅಂಗನವಾಡಿ ಮೇಲ್ವಿಚಾರಕಿ ರೇಣುಕಾ ಅವರು, ಗೋಪಾಲಮ್ಮ ಅವರು ಉತ್ತಮ ಕೆಲಸಗಾರ್ತಿಯಾಗಿದ್ದರು. ನಾವು ಯಾವುದೇ ಮಾಹಿತಿ ಕೇಳಿದ್ರೂ ಪಟ್ ಅಂತ ನೀಡುತ್ತಿದ್ದರು. ಸೌಮ್ಯ ಸ್ವಭಾವದವರಾಗಿದ್ದಂತ ಅವರು ನಮ್ಮೆಲ್ಲರಿಗೂ ಕೆಲಸದಲ್ಲಿ ಮಾದರಿಯಾಗಿದ್ದರು ಎಂಬುದಾಗಿ ಹೇಳಿದರು.

ಅಂಗನವಾಡಿ ಕಾರ್ಯಕರ್ತೆ ಕೆಲಸ ಮೆಚ್ಚಿ ಸರ್ಕಾರ ಪ್ರಶಸ್ತಿ
ಅಂದಹಾಗೇ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕಾನಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಗೋಪಾಲಮ್ಮ ಸೇವೆಯನ್ನು ಸರ್ಕಾರ ಗುರುತಿಸಿತ್ತು. ಅವರಿಗೆ 2002-3ನೇ ಸಾಲಿನಲ್ಲಿ ಉತ್ತಮ ಅಂಗನವಾಡಿ ಕಾರ್ಯಕರ್ತೆ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.
1993ರಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆಗೆ ಸೇರಿದ್ದಂತ ಗೋಪಾಲಮ್ಮ ಅವರು, ಬರೋಬ್ಬರಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿ, ಇಂದು ನಿವೃತ್ತರಾದರು.
ಗೋಪಾಲಮ್ಮ ನಿವೃತ್ತರಾಗುವ ಬೀಳ್ಕೊಡುಗೆ ವಿಷಯ ತಿಳಿದಂತ ಈ ಹಿಂದೆ ಅಂಗನವಾಡಿ ಕಾರ್ಯಕರ್ತೆಯಾಗಿ, ಸದ್ಯ ಸಾಗರದಲ್ಲಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿರುವಂತ ವಿದ್ಯ ಕೂಡ ಭಾಗಿಯಾಗಿ, ಗೋಪಾಲಮ್ಮ ಗುಣಗಾನ ಮಾಡಿದರು.
ಬೀಳ್ಕೊಡುಗೆ ಸ್ವೀಕರಿಸಿದ ಬಳಿಕ ಭಾವುಕರಾಗಿ ಮಾತನಾಡಿದಂತ ಗೋಪಾಲಮ್ಮ ಅವರು, ನಮ್ಮ ಕಾಲದಲ್ಲಿ ಕಟ್ಟಿಗೆ ಓಲೆಯಲ್ಲಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸಬೇಕಾಗಿತ್ತು. ಈಗ ಗ್ಯಾಸ್ ಸ್ಟೌ ಬಂದು ಆ ಕಷ್ಟವನ್ನು ದೂರ ಮಾಡಿದೆ. ಪ್ರಸ್ತುತ ಡಿಜಿಟಲ್ ವ್ಯವಸ್ಥೆಯಲ್ಲಿ ಎಲ್ಲವೂ ಸ್ಮಾರ್ಟ್ ಪೋನ್ ಮೂಲಕವೇ ಸಾಗುತ್ತಿದೆ. ಇಲ್ಲಿರುವಂತ ಅಂಗನವಾಡಿ ಕಾರ್ಯಕರ್ತೆಯರಿಗೆ ಉತ್ತಮ ಭವಿಷ್ಯವಿದೆ. ಉತ್ತಮ ರೀತಿಯಲ್ಲಿ ಕೆಲಸ ಮಾಡುವಂತೆ ಸಲಹೆ ಮಾಡಿದರು.
ಅಂಗನವಾಡಿ ಕಾರ್ಯಕರ್ತೆಯರ ಮುಖಂಡೆ ರೇಣುಕಾ ಮಾತನಾಡಿದರು. ಈ ವೇಳೆ ಉಳವಿ ಪ್ರಾಥಮಿಕ ಆರೋಗ್ಯದ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಕೆ.ವಿ.ನಿರ್ಮಲ, ಎನ್.ಅಕ್ಷತಾ, ಪಿ.ಕೆ.ಶೈಲಶ್ರೀ, ಅಶ್ವಿನಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಶಿವಮೊಗ್ಗದಲ್ಲಿ ಕಾರ್ಮಿಕ ಇಲಾಖೆ ಕಟ್ಟಡ ಕುಸಿದು ವ್ಯಕ್ತಿ ಸಾವನ್ನಪ್ಪಿಲ್ಲ: ಇಲಾಖೆ ಸ್ಪಷ್ಟನೆ








