ಬೆಳಗಾವಿ: ಜಿಲ್ಲೆಯಲ್ಲಿ ಪ್ರೇಯಸಿಯೊಂದಿಗೆ ಲಾಡ್ಜ್ ನಲ್ಲಿ ಪತಿಯೊಬ್ಬ ಸಿಕ್ಕಿಬಿದ್ದಿದ್ದಾನೆ. ಈ ರೀತಿಯಾಗಿ ಸಿಕ್ಕಿಬಿದ್ದ ಪತಿಯನ್ನು ಕಂಡಂತ ಪತ್ನಿಯು ಹಿಗ್ಗಾಮುಗ್ಗಾ ಧರ್ಮದೇಟು ನೀಡಿರುವಂತ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಪ್ರೇಯಸಿಯೊಂದಿಗೆ ಪತಿಯೊಬ್ಬ ಪತ್ನಿಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾನೆ. ಹೀಗೆ ಸಿಕ್ಕಿಬಿದ್ದಂತ ಪತಿಗೆ ಸಾರ್ವಜನಿಕವಾಗಿ ಪತ್ನಿ ಧರ್ಮದೇಟು ನೀಡಿದ್ದಾರೆ. ಪತಿ ಅವಿನಾಶ್ ಭೋಸಲೆಗೆ ಪತ್ನಿ, ಮಾವ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಚಿಕ್ಕೋಡಿ ಬಸ್ ನಿಲ್ದಾಣದ ಬಳಿಯಲ್ಲಿದ್ದಂತ ಲಾಡ್ಜ್ ಎದುರು ಈ ಘಟನೆ ನಡೆದಿದೆ. ಪತಿಯನ್ನು ಉಳ್ಳಾಡಿಸಿ ಚಪ್ಪಲಿಯಿಂದ ಪತ್ನಿ ಹೊಡೆದಿದ್ದಾರೆ. ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ವಕೀಲರಿಗೆ ಸಚಿವ ಜಮೀರ್ ಅಹಮದ್ ಗುಡ್ ನ್ಯೂಸ್: ಶೀಘ್ರವೇ ವಕೀಲರಿಗೂ ‘ವಸತಿ ಯೋಜನೆ’ ಜಾರಿ
BIG NEWS: ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೆ ಅಪರಾಧವಲ್ಲ: ಹೈಕೋರ್ಟ್








