ಬೆಂಗಳೂರು: ಆರಂಭದಲ್ಲಿ ಪರಸ್ಪರ ಇಬ್ಬರ ನಡುವೆ ಸಮ್ಮತಿಯ ಮೇರೆಗೆ ಸಂಬಂಧ ಚೆನ್ನಾಗಿದ್ದ ಬಳಿಕ, ಕೊನೆಯಲ್ಲಿ ಯಾವುದೋ ಕಾರಣಕ್ಕೆ ನಿರಾಸೆಯಲ್ಲಿ ಅಂತ್ಯಗೊಂಡರೇ ಅದು ಅಪರಾಧವಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಡೇಟಿಂಗ್ ಆಪ್ ನಲ್ಲಿ ಮಹಿಳೆಯೊಬ್ಬರು ಸಾಂಪ್ರಾಸ್ ಆಂಥೋಣಿ ಎಂಬುವರೆಗೆ ಒಂದು ವರ್ಷಗಳ ಕಾಲ ಆತ್ಮೀಯವಾಗಿದ್ದರು. ಆ ಬಳಿಕ ಮಹಿಳೆ ಹಾಗೂ ಸಂಪ್ರಾಸ್ ಆಂಥೋಣಿ ವಿರುದ್ಧ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.
ಈ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಿತು. ಈ ವೇಳೆ ಇಬ್ಬರು ವಾಟ್ಸ್ ಆಪ್ ನಲ್ಲಿ ಪರಸ್ಪರ ಚಾಟಿಂಗ್ ಮಾಡಿದ್ದಾರೆ. ಪೋಟೋ, ವೀಡಿಯೋಗಳನ್ನೂ ವಿನಿಮಯ ಮಾಡಿಕೊಂಡಿದ್ದಾರೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿದಂತ ನ್ಯಾಯಪೀಠವು ಆ ಬಳಿಕ ಪರಸ್ಪರ ಸಮ್ಮತಿಯ ಲೈಂಗಿಕ ಕ್ರಿಯೆ ನಡೆಸಿರುವುದು ಅಪರಾಧವಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿತು.
ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡರೇ ಅಪರಾಧವಲ್ಲ ಎಂಬುದಾಗಿಯೂ ಇದೇ ಸಂದರ್ಭದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಅಲ್ಲದೇ ಮಹಿಳೆ ಸಾಂಪ್ರಸ್ ಆಂಥೋಣಿ ವಿರುದ್ಧ ಮಹಿಳೆ ದಾಖಲಿಸಿದ್ದಂತ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಿತು.
ಅಂದಹಾಗೇ ಮಹಿಳೆ ಹಾಗೂ ಸಾಂಪ್ರಾಸ್ ಆಂಥೋಣಿ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಆ ಬಳಿಕ ಇಬ್ಬರು ಕೆಟ್ಟ ಅಭಿರುಚಿಯ ಚಾಟಿಂಗ್ ಮಾಡಿದ್ದರು. ಅಲ್ಲದೇ ಪರಸ್ಪರ ವೀಡಿಯೋ, ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಆದರೇ ಆರೋಪ ಪಟ್ಟಿ ಸಲ್ಲಿಸಿದ್ದ ಪೊಲೀಸರು ಇನ್ ಸ್ಟಾಗ್ರಾಂ ಚಾಟಿಂಗ್ ಪರಿಗಣಿಸರಿಲಿಲ್ಲ. ಇವುಗಳನ್ನು ಪರಿಶೀಲಿಸಿದರೇ ಮಹಿಳೆಯ ದೂರು ಸುಳ್ಳೆಂದು ಸಾಭೀತಾಗಿದೆ. ಹೀಗಾಗಿ ಹೈಕೋರ್ಟ್ ಒಪ್ಪಿಗೆಯಿಂದ ಆರಂಭಗೊಂಡ ಸಂಬಂಧ ನಿರಾಸೆಯಲ್ಲಿ ಅಂತ್ಯಗೊಂಡಾಗ ಅಪರಾಧವಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟಿದೆ.
BREAKING: ಲಾಡ್ಜ್ ಕೊಠಡಿಯಲ್ಲೇ ನೇಣುಬಿಗಿದುಕೊಂಡು ಗುತ್ತಿಗೆದಾರರ ಆತ್ಮಹತ್ಯೆ
ಬೆಂಗಳೂರಿನ ವಕೀಲರಿಗೆ ಸಚಿವ ಜಮೀರ್ ಅಹಮದ್ ಗುಡ್ ನ್ಯೂಸ್: ಶೀಘ್ರವೇ ವಕೀಲರಿಗೂ ‘ವಸತಿ ಯೋಜನೆ’ ಜಾರಿ








