ಮಂಡ್ಯ : ತೀವ್ರ ಕುತೂಹಲ ಕೆರಳಿಸಿರುವ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ರಂಗೇರಿದ್ದು, 8 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರೆ, ಉಳಿದ 8 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದ ಸೋಮವಾದಂದು ಹಲವು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರಿಂದ 8 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಶಿವಮೂರ್ತಿ ಘೋಷಣೆ ಮಾಡಿದ್ದಾರೆ.
ಹೌದು, ಇಡೀ ರಾಜ್ಯದ ಗಮನ ಸೆಳೆದಿರುವ ಮಂಡ್ಯ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಹಾಲಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ, ಹಾಲಿ ಅಧ್ಯಕ್ಷ ಕೆ.ಸಿ.ಜೋಗಿಗೌಡ, ಹಾಲಿ ನಿರ್ದೇಶಕ ಪಿ.ಸಂದರ್ಶ್, ಸಿ.ಸಚ್ಚಿನ್, ಬಿ.ಗಿರೀಶ್, ಕೆ.ವಿ.ದಿನೇಶ್, ಹೆಚ್.ಅಶೋಕ್, ಎ.ವಿಜೇಂದ್ರ ಮೂರ್ತಿ ಇವರ ಪ್ರತಿಸ್ಪರ್ಧಿ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾಗಿದ್ದು, ಚುನಾವಣಾಧಿಕಾರಿ ಕಛೇರಿಗೆ ಆಗಮಿಸಿ ತಮ್ಮ ಪ್ರಮಾಣ ಪತ್ರವನ್ನು ಸ್ವೀಕರಿಸಿದರು. ಇದೇ ವೇಳೆ ತಮ್ಮ ಅಪಾರ ಅಭಿಮಾನಿಗಳು ಡಿಸಿಸಿ ಬ್ಯಾಂಕ್ ಮುಂದೆ ವಿಜಯೋತ್ಸವ ಆಚರಿಸಿದರು.
ಇದರೊಂದಿಗೆ ಮಂಡ್ಯ ತಾಲ್ಲೂಕು, ಪಾಂಡವಪುರ ತಾಲೂಕು, ಕೆ.ಆರ್.ಪೇಟೆ ತಾಲೂಕು ಹಾಗೂ ಮಂಡ್ಯ ಉಪ ವಿಭಾಗದಿಂದ ನಡೆಯಲಿರುವ ಚುನಾವಣಾ ಕಣದಲ್ಲಿ ಒಟ್ಟು 8 ಮಂದಿ ಸ್ಪರ್ಧಿಗಳಿದ್ದಾರೆ.
ಕಣದಲ್ಲಿರುವ ಪ್ರಮುಖರು
ಮಂಡ್ಯ ತಾಲೂಕು : ಸತೀಶ್ – ಸ್ವಾಮಿ
ಪಾಂಡವಪುರ ತಾಲೂಕು : ಎ.ಆರ್.ಅಶೋಕ್ – ಹೆಚ್.ಸಿ. ಪುಟ್ಟಸ್ವಾಮಿಗೌಡ
ಕೆ.ಆರ್.ಪೇಟೆ : ಎಸ್.ಎಸ್.ಅಂಬರೀಶ್ – ಪಿ.ಧರಣೇಶ್ ಕುಮಾರ್
ಮಂಡ್ಯ ಉಪ ವಿಭಾಗ : ಸಿ.ಚಲುವರಾಜು – ವಿ.ಎಂ.ವಿಶ್ವನಾಥ್
ಚುನಾವಣಾ ಕಣದಲ್ಲಿದ್ದಾರೆ.
ಇನ್ನು ಎರಡನೇ ಬಾರಿಗೆ ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಪಿ.ಸಂದರ್ಶ್ ತಮ್ಮ ಬೆಂಬಲಿಗರೊಂದಿಗೆ ಮದ್ದೂರು ನಗರದ ಪ್ರವಾಸಿ ಮಂದಿರದಲ್ಲಿ ಶಾಸಕ ಕೆ.ಎಂ.ಉದಯ್ ಅವರಿಗೆ ಸಿಹಿ ತಿನ್ನಿಸಿ ಅಭಿನಂದಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ
ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಮುಖ್ಯಮಂತ್ರಿ ಸಿದ್ದರಾಮಯ್ಯ
ಸಾರ್ವಜನಿಕರೇ ಗಮನಿಸಿ : ನವೆಂಬರ್ 1 ರಿಂದ `ಆಧಾರ್ ಕಾರ್ಡ್ ಅಪ್ ಡೇಟ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ








