ಶಿವಮೊಗ್ಗ: ಬಹುತೇಕರು ಯೂಟ್ಯೂಬ್ ನಲ್ಲಿ ತರಾವರಿ ವೀಡಿಯೋ ನೋಡುತ್ತಾರೆ. ಈ ವೀಡಿಯೋಗಳ ಜೊತೆಗೆ ಜಾಹೀರಾತು ಕೂಡ ಪ್ರಸಾರ ಮಾಡಲಾಗುತ್ತದೆ. ಹೀಗೊಂದು ಯೂಟ್ಯೂಬ್ ನಲ್ಲಿ ಜಾಹೀರಾತು ಕಂಡು ಹೆಚ್ಚಿನ ಲಾಭಾಂಶದ ಆಮಿಷಕ್ಕೆ ಒಳಗಾದಂತ ಮಹಿಳೆಯೊಬ್ಬರು ಬರೋಬ್ಬರಿ 49 ಲಕ್ಷ ಕಳೆದುಕೊಂಡಿದ್ದಾರೆ. ಅದು ಎಲ್ಲಿ ಅಂತ ಮುಂದೆ ಓದಿ.
ಶಿವಮೊಗ್ಗ ಜಿಲ್ಲೆಯ ಹೊಸನಗರದ ಮಹಿಳೆಯೊಬ್ಬರು ಯೂಟ್ಯೂಬ್ ವೀಕ್ಷಿಸುವಂತ ಸಂದರ್ಭದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚು ಲಾಭಾಂಶ ಸಿಗಲಿದೆ ಎನ್ನುವಂತ ಜಾಹೀರಾತು ಗಮನಿಸಿದ್ದಾರೆ. ಅದರಲ್ಲಿ ನೀಡಿದಂತ ವಾಟ್ಸ್ ಆಪ್ ಗುಂಪು ಸೇರುವಂತ ಗ್ರೂಪಿಗೂ ಆಕರ್ಷಿತಳಾಗಿ ಸೇರಿದ್ದಾರೆ.
ಮಹಿಳೆ ಸೇರಿದಂತ ವಾಟ್ಸ್ ಆಪ್ ಗ್ರೂಪಿನಲ್ಲಿ ಮತ್ತೊಂದು ಆಪ್ ಡೌನ್ ಲೋಡ್ ಮಾಡುವಂತೆ ತಿಳಿಸಲಾಗಿದೆ. ಅದರಂತೆ ಅದನ್ನು ಡೌನ್ ಲೋಡ್ ಮಾಡಿಕೊಂಡ ಬಳಿಕ, ತಮ್ಮ ಕಂಪನಿಯ ವ್ಯವಸ್ಥಾಪಕರು ಎಂಬುದಾಗಿ ವ್ಯಕ್ತಿಯೊಬ್ಬ ಪರಿಚಯಿಸಿಕೊಂಡಿದ್ದಾರೆ. ಹೂಡಿಕೆ ಮಾಡೋದಕ್ಕೆ ಬ್ಯಾಂಕ್ ಖಾತೆ ಸಂಖ್ಯೆಗಳನ್ನು ಕಳುಹಿಸಿದ್ದಾರೆ. ಅವರು ನೀಡಿದಂತ ಹೂಡಿಕೆ ಮಾಡುವಂತ ಬ್ಯಾಂಕ್ ಖಾತೆಗೆ ಮಹಿಳೆ ತನ್ನ ಪತಿ ಖಾತೆಯಿಂದ ಹಣವನ್ನು ಸಂದಾಯ ಮಾಡಿದ್ದಾರೆ.
ಈ ರೀತಿಯಾಗಿ ಹೆಚ್ಚು ಹೆಚ್ಚು ಲಾಭಾಂಶದ ಆಸೆಗೆ ಬಿದ್ದಂತ ಮಹಿಳೆಯು ಹಂತ ಹಂತವಾಗಿ ಬರೋಬ್ಬರಿ ರೂ.49,15,047 ಹಣವನ್ನು ವಂಚಕರು ನೀಡಿದಂತ ಬ್ಯಾಂಕ್ ಖಾತೆಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಸಂದಾಯ ಮಾಡಿದ್ದಾರೆ.
ಹೀಗೆ ಹಣ ಹಾಕಿದಂತ ಮಹಿಳೆಗೆ 3 ಕೋಟಿಗೂ ಹೆಚ್ಚು ಲಾಭಾಂಶ ಇಷ್ಟು ಆಗಿದೆ ಎಂಬುದಾಗಿ ತೋರಿಸಿದ್ದಾರೆ. ಆಗ ಮಹಿಳೆ ಹಿಂಪಡೆಯೋದಕ್ಕೆ ಮುಂದಾದಾಗ ವಾಪಾಸು ಪಡೆಯಲು ಶೇ.15ರಷಅಟು ಶುಲ್ಕ ಕಟ್ಟಬೇಕು ಎಂದಿದ್ದಾರೆ. ಆ ಬಗ್ಗೆ ಪ್ರಶ್ನಿಸಿದಾಗ ವಂಚಕರು ನಂಬರ್ ಬ್ಲಾಕ್ ಮಾಡಿದ್ದಾರೆ. ಇದು ವಂಚಕರ ಜಾಲವೆಂದು ತಿಳಿದಾಗ ಕಾಲ ಕೈಮೀರಿ ಹೋಗಿದೆ. ಈಗ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರಿಗೆ ತನ್ನ ಹಣ ವಾಪಾಸ್ಸು ಕೊಡಿಸುವಂತೆ ಮಹಿಳೆ ದೂರು ನೀಡಿದ್ದಾರೆ.
CRIME NEWS: ಬೆಂಗಳೂರಲ್ಲಿ ಕುಡಿಯಲು ಹಣ ಕೊಡಲಿಲ್ಲ ಅಂತ ಸ್ನೇಹಿತನಿಗೆ ಲಾಂಗ್ ನಿಂದ ಹಲ್ಲೆ
ಸಾರ್ವಜನಿಕರೇ ಗಮನಿಸಿ : ನವೆಂಬರ್ 1 ರಿಂದ `ಆಧಾರ್ ಕಾರ್ಡ್ ಅಪ್ ಡೇಟ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ








