ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅ.01 ರಿಂದ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಲಾಗಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಫಲಾನುಭವಿಗಳಿಗೆ ಸಂಬಂಧಿಸಿದ ಪ್ರಶ್ನೆಗಳು.
1. KASS ಸೌಲಭ್ಯಗಳಿಗೆ ಯಾರು ಅರ್ಹರು?
ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು, ವೈದ್ಯಕೀಯ ಹಾಜರಾತಿ ನಿಯಮಗಳು 1963 ರನ್ವಯ ಕೆಲವೊಂದು ಇಲಾಖೆ/ಗುಂಪುಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಸದಸ್ಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ.
2. ಯೋಜನೆಗೆ ಅರ್ಹ ಅವಲಂಬಿತರು ಯಾರು?
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ “”(Familly) ដƠ,
a. ಸರ್ಕಾರಿ ನೌಕರರ ಪತಿ ಅಥವಾ ಪತ್ನಿ
b. ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಅವರು ಸರ್ಕಾರಿ ನೌಕರನೊಂದಿಗೆ ಸಾಮನ್ಯವಾಗಿ ವಾಸವಾಗಿದ್ದಲ್ಲಿ ಮತ್ತು ಅವರ ಒಟ್ಟು ಮಾಸಿಕ ಆದಾಯ -ಕುಟುಂಬ ಪಿಂಚಣಿ ರೂ. 8,500/- ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಬಾರದು.
c. ಸರ್ಕಾರಿ ನೌಕರನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರಬೇಕು ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡತೆ)
3. KASS ಯೋಜನೆಗೆ ಒಳಪಡದ ನೌಕರರ ವರ್ಗ
ಸಾರ್ವಜನಿಕ ವಲಯದ (public sector establishment) ಇತರೇ ನೌಕರರು ಅಂದರೆ, ಸ್ಥಳಿಯ ಸಂಸ್ಥೆ, ಸ್ನಾಯತ್ತ ಸಂಸ್ಥೆಗಳು, ಅನುದಾನಿತ ಸಂಸ್ಥೆ, ವಿಶ್ವವಿದ್ಯಾಲಯಗಳು, ಶಾಸನಬದ್ಧ ಸಂಸ್ಥೆಗಳು, ಗುತ್ತಿಗೆ/ಹೊರಗುತ್ತಿಗೆ ನೌಕರರು, ಅರೆಕಾಲಿಕ ನೌಕರರು, ದಿನಗೂಲಿ ನೌಕರರು ಈ ಯೋಜನೆಗೆ ಒಳಪಡುವುದಿಲ್ಲ.
ಈಗಾಗಲೇ ಬೇರೆ ಆರೋಗ್ಯ ಯೋಜನೆಯಡಿ ಒಳಪಟ್ಟ ಸರ್ಕಾರಿ ನೌಕರರು (ಉದಾ: ಪೊಲೀಸ್ ಇಲಾಖೆಯಲ್ಲಿನ ‘ಆರೋಗ್ಯ ಭಾಗ್ಯ’ ಯೋಜನೆಗೆ ಒಳಪಟ್ಟ ಸರ್ಕಾರಿ ನೌಕರರು) ಈ ಯೋಜನೆಗೆ ಒಳಪಡುವುದಿಲ್ಲ.
ರಾಜ್ಯ ಸೇವೆಯಲ್ಲಿ ನಿಯೋಜನೆ/ ಎರವಲು ಸೇವೆಯ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ಕೇಂದ್ರ ಸರ್ಕಾರಿ ನೌಕರರು, ಸಾರ್ವಜನಿಕ ವಲಯದ ಸ್ಥಾಪನೆಯ (Establishment in public sector) ನೌಕರರು ಈ ಯೋಜನೆಗೆ ಒಳಪಡುವುದಿಲ್ಲ.
ಸಾರ್ವಜನಿಕ ವಲಯದ ಸ್ಥಾಪನೆ ಎಂದರೇ “ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 5 ರಲ್ಲಿ ನಿರ್ಧಿಷ್ಟಪಡಿಸಲಾದ ಸ್ಥಾಪನೆಗಳ ನೌಕರರು”.
ವೈದ್ಯಕೀಯ ಚಿಕಿತ್ಸೆ ನೀಡುವ ಸಂಬಂಧ ರಾಜ್ಯ ಸರ್ಕಾರವು ರೂಪಿಸಿರುವ ಪ್ರತ್ಯೇಕ ನಿಯಮಗಳು ಅನ್ವಯವಾಗುವ ಇತರೇ ಯಾವುದೇ ವರ್ಗದ ವ್ಯಕ್ತಿಗಳಿಗೆ ಈ ಯೋಜನ ಅನ್ವಯಿಸುವುದಿಲ್ಲ.
ನ್ಯಾಯಾಂಗ ಸೇವೆಯ ಅಧಿಕಾರಿಗಳು ಮತ್ತು ರಾಜ್ಯ ಉಚ್ಚ ನ್ಯಾಯಲಯದ ನೌಕರರು ಈ ಯೋಜನೆ ಒಳಪಡುವುದಿಲ್ಲ.
ಅಖಿಲ ಭಾರತ ಸೇವೆಗೆ ಸೇರಿದ ಅಧಿಕಾರಿಗಳು.
ರಾಜ್ಯ ವಿಧಾನಮಂಡಲದ ನೌಕರರು.
4. KASS ಅಡಿಯಲ್ಲಿ “ಕುಟುಂಬ” ಪದದ ವ್ಯಾಖ್ಯಾನವೇನು?
ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963 ರ ನಿಯಮ 2ರಲ್ಲಿನ “ಕುಟುಂಬ” ಎಂದರೆ ಸರ್ಕಾರಿ ನೌಕರನ ಪತಿ ಅಥವಾ ಪತ್ನಿ, ತಂದೆ ಮತ್ತು ತಾಯಿ (ಮಲತಾಯಿಯನ್ನೊಳಗೊಂಡಂತೆ) ಹಾಗೂ ಸಂಪೂರ್ಣವಾಗಿ ಅವಲಂಬಿತವಾಗಿರುವ ಮಕ್ಕಳು (ದತ್ತು ಪಡೆದ ಮಕ್ಕಳು ಮತ್ತು ಮಲ ಮಕ್ಕಳನ್ನೊಳಗೊಂಡಂತೆ) ಎಂದು ವ್ಯಾಖ್ಯಾನಿಸಲಾಗಿದೆ.
5. ಸರ್ಕಾರಿ ನೌಕರನು ವೃತ್ತಿಪರ (Probationary period) ಅವಧಿಯಲ್ಲಿದ್ದರೆ KASS ಯೋಜನೆಗೆ ಫಲಾನುಭವಿ ಆಗಬಹುದೇ?
ಹೌದು. ವೃತ್ತಿಪರ (Probationary period) ಅವಧಿಯಲ್ಲಿರುವ ಸರ್ಕಾರಿ ನೌಕರನು KASS ಯೋಜನೆಗೆ ಅರ್ಹನಾಗಿರುತ್ತಾನೆ.
6. ದಂಪತಿಗಳಿಬ್ಬರು ರಾಜ್ಯ ಸರ್ಕಾರಿ ಉದ್ಯೋಗಿಗಳಾಗಿದ್ದರೆ ಇಬ್ಬರೂ ವಂತಿಗೆಯನ್ನು ಸಲ್ಲಿಸಬೇಕಾ?
ದಂಪತಿಗಳಿಬ್ಬರು ರಾಜ್ಯ ಸರ್ಕಾರಿ ಉದ್ಯೋಗಿಗಳಾಗಿದ್ದರೆ, ಹೆಚ್ಚಿನ ಮೂಲ ವೇತನವನ್ನು ಪಡೆಯುವ ಉದ್ಯೋಗಿ ಮುಖ್ಯ ಕಾರ್ಡ್ ಹೋಲ್ಡರ್ ಆಗಿ ನೋಂದಾಯಿಸಿಕೊಳ್ಳುತ್ತಾರೆ. ಆದರೆ ಇಬ್ಬರೂ ಉದ್ಯೋಗಿಗಳು ತಮ್ಮ ಪೋಷಕರನ್ನು ಅವಲಂಬಿತರನ್ನಾಗಿ ಸೇರಿಸಲು ಬಯಸಿದರೆ, ಇಬ್ಬರೂ ಪ್ರತ್ಯೇಕವಾಗಿ ಯೋಜನೆಗೆ ನೊಂದಾಯಿಸಿಕೊಳ್ಳತಕ್ಕದ್ದು.
7. ಮಲಮಕ್ಕಳಿಗೆ KASS ಸೌಲಭ್ಯಗಳನ್ನು ಅನುಮತಿಸಲಾಗಿದೆಯೇ?
ಹೌದು,
8. KASS ಸೌಲಭ್ಯಗಳಿಗಾಗಿ ಕುಟುಂಬದ ಸದಸ್ಯರ ಅಡಿಯಲ್ಲಿ ಅವಲಂಬಿತ ಅತ್ತೆಯನ್ನು ಸೇರಿಸಬಹುದೇ?
ಒಬ್ಬ ಮಹಿಳಾ ಸರ್ಕಾರಿ ನೌಕರನು ತನ್ನ ತಂದೆ-ತಾಯಿಯನ್ನು ಅಥವಾ ಅತ್ತೆ-ಮಾವರನ್ನು ಸೇರಿಸಿಕೊಳ್ಳುವ ಆಯ್ಕೆಯನ್ನು ಹೊಂದಿದ್ದು, ಕೆ.ಎ.ಎಸ್.ಎಸ್ ಅಡಿಯಲ್ಲಿ KASS ನಿಯಮದಂತೆ ಸರ್ಕಾರಿ ನೌಕರರನೊಂದಿಗೆ ವಾಸವಾಗಿದ್ದು ಕನಿಷ್ಠ ಮಾಸಿಕ ಆದಾಯ -ಕುಟುಂಬ ಪಿಂಚಣಿ ರೂ. 8,500/- ಹಾಗೂ ಚಾಲ್ತಿಯಲ್ಲಿದ್ದ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತವನ್ನು ಮೀರಬಾರದು.
9. KASS ಯೋಜನೆಯಲ್ಲಿ ಅವಲಂಬಿತರಾಗಿರುವ ಪುತ್ರರು / ಹೆಣ್ಣು ಮಕ್ಕಳಿಗೆ ಯಾವುದೇ ವಯಸ್ಸಿನ ಮಿತಿ ಇದೆಯೇ?
ಹೆಣ್ಣು ಅಥವಾ ಗಂಡು ಮಕ್ಕಳು ಗಳಿಸಲು ಪ್ರಾರಂಭಿಸುವವರೆಗೆ (ಉದ್ಯೋಗ) ಅಥವಾ 30ವರ್ಷ ವಯಸ್ಸನ್ನು ತಲುಪುವವರೆಗೆ ಅಥವಾ ಮದುವೆಯಾಗುವವರೆಗೆ ಅರ್ಹನಾಗಿರುತ್ತಾರೆ. ಆದಾಗ್ಯೂ, ಮಕ್ಕಳು ಯಾವುದೇ ರೀತಿಯ (ದೈಹಿಕ ಅಥವಾ ಮಾನಸಿಕ) ಶಾಶ್ವತ ಅಂಗವೈಕಲ್ಯದಿಂದ ಬಳಲುತ್ತಿದ್ದರೆ ಅವರು KASS ಪ್ರಯೋಜನಗಳಿಗೆ ಅರ್ಹನಾಗಿರುತ್ತಾರೆ.
10. KASS ನೊಂದಾಯಿತ (Empaneled) ಆಸ್ಪತ್ರೆಗಳಲ್ಲಿ ಅನುಮೋದಿಸಲಾದ ವಾರ್ಡ್ ಅರ್ಹತೆಯ ಮಾನದಂಡಗಳು ಯಾವುವು?
ಗುಂಪು ಎ & ಬಿ – “ಖಾಸಗಿ ವಾರ್ಡ್”
ಗುಂಪು ಸಿ – “ಅರೆ ಖಾಸಗಿ ವಾರ್ಡ್”
ಗುಂಪು ಡಿ – “ಜನರಲ್ ವಾರ್ಡ್”









