ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸಿಗೆ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ. ಹಂಪಿನಗರ ಬಸ್ ನಿಲ್ದಾಣದಲ್ಲಿ ಸಂಭವಿಸಿದಂತ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಹಂಪಿನಗರ ಬಸ್ ನಿಲ್ದಾಣದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಪಾದಚಾರಿ ಮಹಿಳೆಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಪಾದಚಾರಿ ಮಹಿಳೆಯಾಗಿದ್ದಂತ ಮಾಲಾ(58) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನಡೆದುಕೊಂಡು ತೆರಳುತ್ತಿದ್ದಂತ ಮಾಲಾ ಅವರಿಗೆ ಡಿಕ್ಕಿಯಾಗಿತ್ತು. ಈ ಡಿಕ್ಕಿಯಿಂದಾಗಿ ಮಾಲಾ ಅವರ ತಲೆಗೆ ಗಂಭೀರವಾಗಿ ಪೆಟ್ಟುಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬಿಎಂಟಿಸಿ ಡಿಪೋ 16ಕ್ಕೆ ಸೇರಿದಂತ ಕೆಎ 51 ಎಕೆ 7057 ಸಂಖ್ಯೆ ಬಸ್ ಇದಾಗಿದೆ. ಯಲಹಂಕ ಟು ಹಂಪಿನಗರ ಮಾರ್ಗದಲ್ಲಿ ಈ ಬಿಎಂಟಿಸಿ ಬಸ್ ಸಂಚರಿಸುತ್ತಿತ್ತು.
ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ರಾಜ್ಯದ ‘ಗ್ರಾಮ ಪಂಚಾಯ್ತಿ’ಗಳಲ್ಲಿ ಈ ಎಲ್ಲಾ ‘ಸೇವೆ’ಗಳು ಲಭ್ಯ
ವಾಟ್ಸಾಪ್ ಹೊಸ ವೈಶಿಷ್ಟ್ಯ ; ರಿಪ್ಲೈ ಮಾಡದ ಬಳಕೆದಾರರಿಗೆ ಸಂದೇಶ ಕಳುಹಿಸುವ ಮಿತಿ ಪರಿಚಯ








