ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಬಿಜೆಪಿ ಸಿದ್ಧಗೊಂಡಿದೆ. ಇದಕ್ಕೆ ಪೂರಕ ಎನ್ನುವಂತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸಂಯೋಜಕರ ತಂಡವನ್ನು ನೇಮಕ ಮಾಡಲಾಗಿದೆ.
ಈ ಸಂಬಂಧ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯುವ ಚುನಾವಣೆ ಸಂಬಂಧಿತ ಚಟುವಟಿಕೆಗಳಿಗೆ ಈ ಕೆಳಕಂಡಂತೆ ನನ್ನ ನೇತೃತ್ವದಲ್ಲಿ ಪ್ರಾಧಿಕಾರದ ಸಂಯೋಜಕರ ತಂಡ, ಸಂಘಟನಾತ್ಮಕ ಜಿಲ್ಲೆಯ ಸಂಯೋಜಕರು ಹಾಗೂ 5 ಪಾಲಿಕೆಗಳಿಗೆ ಪ್ರಮುಖರು ಹಾಗೂ ಸಹ ಪ್ರಮುಖರನ್ನಾಗಿ ನಿಯೋಜಿಸಿರುವುದಾಗಿ ತಿಳಿಸಿದ್ದಾರೆ.
ಹೀಗಿದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಯೋಜಕರ ಪಟ್ಟಿ
- ಬಿವೈ ವಿಜಯೇಂದ್ರ
- ಆರ್.ಅಶೋಕ್
- ಛಲವಾದಿ ನಾರಾಯಣಸ್ವಾಮಿ
- ಡಿ.ವಿ ಸದಾನಂದಗೌಡ
- ಎಸ್ ಸುರೇಶ್ ಕುಮಾರ್
- ಕುಮಾರಿ ಶೋಭಾ ಕರಂದ್ಲಾಜೆ
- ಪಿ.ಸಿ ಮೋಹನ್
- ಡಾ.ಸಿಎನ್ ಮಂಜುನಾಥ್
- ತೇಜಸ್ವಿ ಸೂರ್ಯ
- ಡಾ.ಕೆ ಸುಧಾಕರ್
- ಎನ್ ಎಸ್ ನಂದೀಶ್ ರೆಡ್ಡಿ.
ಹೀಗಿದೆ ಸಂಘಟನಾತ್ಮಕ ಜಿಲ್ಲೆಯ ಪ್ರಮುಖರ ಪಟ್ಟಿ
- ಬೆಂಗಳೂರು ದಕ್ಷಿಣ-ಸಿ.ಕೆ ರಾಮಮೂರ್ತಿ
- ಬೆಂಗಳೂರು ಉತ್ತರ-ಎಸ್ ಹರೀಶ್
- ಬೆಂಗಳೂರು ಕೇಂದ್ರ-ಎಆರ್ ಸಪ್ತಗಿರಿ ಗೌಡ
ಹೀಗಿದೆ ಪಾಲಿಕೆ ಪ್ರಮುಖರು ಹಾಗೂ ಸಹ-ಪ್ರಮುಖರ ಪಟ್ಟಿ
- ಬೆಂಗಳೂರು ಪೂರ್ವ- ಎಂ.ಟಿ.ಬಿ ನಾಗರಾಜ್, ಕೆಎನ್ ನವೀನ್
- ಬೆಂಗಳೂರು ಉತ್ತರ- ಮುನಿರತ್ನ, ಭಾರತಿ ಶೆಟ್ಟಿ
- ಬೆಂಗಳೂರು ದಕ್ಷಿಣ – ಬೈರತಿ ಬಸವರಾಜ್, ಎನ್ ರವಿಕುಮಾರ್
- ಬೆಂಗಳೂರು ಕೇಂದ್ರ – ಡಾ.ಸಿಎನ್ ಅಶ್ವತ್ಥನಾರಾಯಣ, ಡಿಎಸ್ ಅರುಣ್
- ಬೆಂಗಳೂರು ಪಶ್ಚಿಮ- ಎ.ನಾರಾಯಣಸ್ವಾಮಿ, ಅಶ್ವಥ್ ನಾರಾಯಣ
ಹತ್ತಿ, ಹತ್ತಿ ಬೀಜದ ಖರೀದಿ ಬೆಲೆ 60,000 ನಿಗದಿ ಪಡಿಸಿ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ‘HDK ಪತ್ರ’
ನ.18ರಿಂದ 3 ದಿನ `ಬೆಂಗಳೂರು ಟೆಕ್ ಸಮ್ಮಿಟ್-2025’ ಆಯೋಜನೆ : CM ಸಿದ್ದರಾಮಯ್ಯ ಮಾಹಿತಿ