ಹಾಸನ : ಐತಿಹಾಸಿಕ ಹಾಸನಾಂಬೆ ದರ್ಶನಕ್ಕೆ ಇದೀಗ ಸಾರ್ವಜನಿಕ ದರ್ಶನಕ್ಕೆ ಅಧಿಕೃತವಾಗಿ ತೆರೆ ಬಿದ್ದಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ.
ಕಳೆದ 13 ದಿನಗಳಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು ಇಂದು ಮಧ್ಯಾಹ್ನ 12 ಗಂಟೆಗೆ ದೇಗುಲದ ಗರ್ಭಗುಡಿ ಬಾಗಿಲು ಬಂದ ಆಗಲಿದೆ. ಕೊನೆ ದಿನವಾದ ನಿನ್ನೆ ಲಕ್ಷಾಂತರ ಭಕ್ತರು ಹಾಸನಾಂಬೆ ದೇವಿಯ ದರ್ಶನ ಪಡೆದುಕೊಂಡರು. ಕಳೆದ 13 ದಿನಗಳಿಂದ ಇದುವರೆಗೂ 26 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ ಈ ವರ್ಷ ದಾಖಲೆ 22 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.
ಪ್ರತಿ ವರ್ಷ ಒಂದು ಬಾರಿ ಮಾತ್ರ ಭಕ್ತರಿಗೆ ದರ್ಶನ ಕೊಡುವ ಈ ಒಂದು ಹಾಸನಾಂಬೆ ದೇವಿಯ ಪ್ರಾಮುಖ್ಯತೆ ಏನೆಂದರೆ, ಇಂದು ದೇಗುಲ ಬಂದ್ ಮಾಡಿದರೆ ಮುಂದಿನ ವರ್ಷ ಬಾಗಿಲು ತೆಗೆಯುವವರೆಗು ಹಚ್ಚಿದ ದೀಪ ಆರದೇ ಇರುತ್ತದೆ. ಅಲ್ಲದೆ ಹೂಗಳು ಸಹ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೂ ಬಾಡದೆ ಇರುವುದು ಈ ಒಂದು ದೇವಿಯ ಪವಾಡ ಅಂತಾನೆ ಹೇಳಬಹುದು. ಕಳೆದ 13 ದಿನಗಳಿಂದ ಅನೇಕ ರಾಜಕೀಯ ನಾಯಕರು ಸಿನಿಮಾ ತಾರೆಯರು ಸೇರಿದಂತೆ ಹಲವರು ದೇವರ ದರ್ಶನ ಪಡೆದಿದ್ದಾರೆ.
ಹೀಗಿದೆ 13 ದಿನಗಳಲ್ಲಿ ಭಕ್ತರ ದರ್ಶನದ ಅಂಕಿ-ಸಂಖ್ಯೆ
ದಿನಾಂಕ 10-10-2025 – 0.58 ಲಕ್ಷ
ದಿನಾಂಕ 11-10-2025 – 2.08 ಲಕ್ಷ
ದಿನಾಂಕ 12-10-2025 – 1.45 ಲಕ್ಷ
ದಿನಾಂಕ 13-10-2025 – 2.29 ಲಕ್ಷ
ದಿನಾಂಕ 14-10-2025 – 2.44 ಲಕ್ಷ
ದಿನಾಂಕ 15-10-2025 – 2.47 ಲಕ್ಷ
ದಿನಾಂಕ 16-10-2025 – 2.58 ಲಕ್ಷ
ದಿನಾಂಕ 17-10-2025 – 3.62 ಲಕ್ಷ
ದಿನಾಂಕ 18-10-2025 – 2.17 ಲಕ್ಷ
ದಿನಾಂಕ 19-10-2025 – 1.27 ಲಕ್ಷ
ದಿನಾಂಕ 20-10-2025 – 2.02 ಲಕ್ಷ
ದಿನಾಂಕ 21-10-2025 – 1.50 ಲಕ್ಷ
ದಿನಾಂಕ 22-10-2025 – 1.60 ಲಕ್ಷ
2025ನೇ ಸಾಲಿನಲ್ಲಿ ಹಾಸನಾಂಬೆ ದೇವಿಯನ್ನು ಬರೋಬ್ಬರಿ ಒಟ್ಟು 26,06,691 ಭಕ್ತರು ದರ್ಶನವನ್ನು ಪಡೆದಿದ್ದಾರೆ. ಅದೇ 2024ರಲ್ಲಿ 17,47,240 ಭಕ್ತರು ಹಾಸನಾಂಬೆ ದೇವಿಯ ದರ್ಶನವನ್ನು ಪಡೆದಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು