ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಎಡಬಿಡದೆ ಮಳೆಯಾಗುತ್ತಿದೆ. ತೀವ್ರ ಮಳೆಯಿಂದಾಗಿ ಸಾಗರ ತಾಲ್ಲೂಕಿನ ಗಂಟಿನಕೊಪ್ಪದಲ್ಲಿ ಮನೆಯೊಂದು ಕುಸಿತಗೊಂಡಿತ್ತು. ವಿಷಯ ತಿಳಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸಾಂತ್ವಾನ ಹೇಳುವಂತೆ ಕಾಂಗ್ರೆಸ್ ಮುಖಂಡರಿಗೆ ಸೂಚಿಸಿದ್ದರು. ಅದರಂತೆ ಭೇಟಿ ನೀಡಿದಂತ ಕಾಂಗ್ರೆಸ್ ಮುಖಂಡರು, ಸಂತೈಸಿ, ಪರಿಹಾರದ ಭರವಸೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ತೀವ್ರ ಮಳೆಯಿಂದ ಗಂಟಿನಕೊಪ್ಪದ ವಾಸಿಗಳಾದ ಪಾರ್ವತಮ್ಮ ಕೋಂ ಬಾಬು ರವರ ಮನೆ ಹಾನಿಯಾಗಿತ್ತು. ಈ ಹಿನ್ನಲೆಯಲ್ಲಿ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರ ನಿರ್ದೇಶನದ ಮೇರೆಗೆ ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಶಾಸಕರ ಆಪ್ತ ಸಹಾಯಕ ಶ್ರೀನಿವಾಸ ಮೂರ್ತಿ ಹಾಗೂ ಮುಖಂಡರುಗಳು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು. ಅಲ್ಲದೇ ಅಗತ್ಯ ಪರಿಹಾರಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಅಂದಹಾಗೇ ಸಾಗರ ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಗಳಿಗೆ ಈ ಹಿಂದೆ ಭೇಟಿ ನೀಡಿದ್ದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಸ್ಥಳದಲ್ಲಿದ್ದಂತ ಅಧಿಕಾರಿಗಳಿಗೆ ಸೂಕ್ತ ಪರಿಹಾರಕ್ಕೆ ಸೂಚಿಸಿದ್ದರು. ಜೊತೆಗೆ ಸಕಾಲದಲ್ಲಿ ಪರಿಹಾರ ದೊರೆಯುವಂತ ಕೆಲಸವನ್ನು ಮಾಡಿದ್ದರು. ಇದೀಗ ಮನೆಹಾನಿಗೊಂಡು ಬೀದಿಗೆ ಬಿದ್ದಂತ ಗಂಟಿನಕೊಪ್ಪದ ಪಾರ್ವತಮ್ಮ ಅವರಿಗೂ ಕೂಡಲೇ ವೈಯಕ್ತಿಕವಾಗಿ ಸಹಾಯವನ್ನು ತುರ್ತು ಸಾಮಗ್ರಿ ಖರೀದಿಗೆ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಮನೆ ಮರು ನಿರ್ಮಾಣಕ್ಕೂ ಶೀಘ್ರವೇ ಪರಿಹಾರ ಕೊಡಿಸುವುದಾಗಿ ಶಾಸಕರು ಭರವಸೆಯನ್ನು ನೀಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಶ್ರೀನಗರಕ್ಕೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಇಂಧನ ಸೋರಿಕೆ: ವಾರಣಾಸಿಯಲ್ಲಿ ತುರ್ತು ಭೂಸ್ಪರ್ಷ
ಮುಂದಿನ ಸಿಎಂ ವಿಚಾರದಲ್ಲಿ ನನ್ನ ಬಗ್ಗೆ ಚರ್ಚೆ ಬೇಡ, ಯತೀಂದ್ರ ಹೇಳಿಕೆ ಬಗ್ಗೆ ಅವರನ್ನೇ ಕೇಳಿ: ಡಿಕೆಶಿ ತಿರುಗೇಟು