ಬೆಳಗಾವಿ: ನನಗೆ ಡಿಸೆಂಬರ್ ನಿಂದ ಶುಕ್ರದೆಸೆ ಪ್ರಾರಂಭವಾಗಲಿದೆ. ಅದು ಯಾವ ರೀತಿಯಿಂದ ಅಂತ ನಾನು ಹೇಳುವುದಿಲ್ಲ. ಅದು ಉದಯ ಆದ ಮೇಲೆ ಎಲ್ಲರಿಗೂ ಗೊತ್ತಾಗಲಿದೆ ಎಂಬುದಾಗಿ ಶಾಸಕ ಲಕ್ಷ್ಮಣ ಸವದಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಇಂದು ಬೆಳಗಾವಿಯ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಬಿಡಿಸಿಸಿ ಬ್ಯಾಂಗ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ನಾನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗುತ್ತೇನೆ ಅಂತನೂ ಎಲ್ಲಿಯೂ ಹೇಳಿಲ್ಲ. ಕಳೆದ 30 ವರ್ಷಗಳಿಂದ ಸಹಕಾರಿ ರಂಗದಲ್ಲಿ ಆಪೇಕ್ಷಿತನಾಗಿ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಸಹಕಾರಿ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಡಿಸಿಎಂ ಆಗಿದ್ದೇನೆ. ಬ್ಯಾಂಕಿಗೆ ಅಧ್ಯಕ್ಷನಾಗಬೇಕು ಎನ್ನುವಂತ ಭ್ರಮೆ ನನಗೆ ಇಲ್ಲ ಎಂಬುದಾಗಿ ಹೇಳಿದರು.
ಡಿಸೆಂಬರ್ ಕಳೆದ ಬಳಿಕ 2026 ಬರುತ್ತದೆ. ಆಗ ಎಲ್ಲರಿಗೂ ಒಳ್ಳೆಯದು ಆಗುತ್ತದೆ. ರಾಜ್ಯಕ್ಕೆ, ದೇಶಕ್ಕೆ, ನನಗೂ ಶುಕ್ರದೆಸೆ ಆರಂಭವಾಗಲಿದೆ. ಮುಂದೆ ಒಳ್ಳೇಯದಾಗುತ್ತದೆ. ಅದಕ್ಕೆ ಯಾವುದೇ ಅರ್ಥ ಬೇಡ ಎಂದರು.