ಬೆಂಗಳೂರು: ನಗರದಲ್ಲಿ ಶಾಕಿಂಗ್ ಘಟನೆ ಎನ್ನುವಂತೆ ಹೆಂಡತಿಯ ಕಿರುಕುಳಕ್ಕೆ ತಾಳಲಾರದೇ ಸೆಲ್ಫಿ ವೀಡಿಯೋ ಮಾಡಿಟ್ಟು, ಪತಿಯೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದ ಬಿಡದಿ ಬಳಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಹೆಂಡತಿಯ ಕಿರುಕುಳ ತಾಳಲಾರದೇ ಸೆಲ್ಫಿ ವೀಡಿಯೋ ಮಾಡಿಟ್ಟು ರೈಲಿಗೆ ತಲೆಕೊಟ್ಟು ಬಿಡದಿ ಬಳಿಯಲ್ಲಿ ರೇವಂತ್ ಕುಮಾರ್(30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನಅಣ್ಣದೊಡ್ಡಿ ನಿವಾಸಿಯಾಗಿದ್ದಂತ ರೇವಂತ್ ಕುಮಾರ್ ಎಂಬುವರಿಗೆ ಪತ್ನಿ ತುಂಬಾನೇ ಕಿರುಕುಳ ನೀಡುತ್ತಿದ್ದರಂತೆ. ಈ ಕಾರಣದಿಂದಾಗಿ ಬೇಸತ್ತು ಇಂದು ಬಿಡದಿ ಬಳಿಯಲ್ಲಿ ಸೆಲ್ಫಿ ವೀಡಿಯೋ ಮಾಡಿ, ನನ್ನ ಸಾವಿಗೆ ಪತ್ನಿ ಕಾರಣವೆಂದು ತಿಳಿಸಿ, ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ 5 ತಿಂಗಳ ಹಿಂದೆ ಬಿಡದಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಂತ ರೇವಂತ್ ಕುಮಾರ್, ವಿವಾಹವಾಗಿದ್ದರು. ವಿವಾಹದ ಬಳಿಕ ಪತ್ನಿ ತುಂಬಾ ಕಿರುಕುಳ ನೀಡುತ್ತಿದ್ದರಂತೆ. ಈ ಹಿನ್ನಲೆಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸೆಲ್ಫಿ ವೀಡಿಯೋದಲ್ಲಿ ತಿಳಿಸಿದ್ದಾರೆ.
ಮಂಡ್ಯ: ಹುತಾತ್ಮ ಪೊಲೀಸರ ಸ್ಮರಣೆ ಎಲ್ಲರ ಕರ್ತವ್ಯವಾಗಿದೆ- ನ್ಯಾಯಮೂರ್ತಿ ಮಂಜುಳಾ ಇಟ್ಟಿ