ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದ್ದು, ಪೊಲೀಸರ ಗುಂಡೇಟಿಗೆ ನಟೋರಿಯಸ್ ರೌಡಿಶೀಟರ್ ಯೂನೂಸ್ ಇಕ್ಲಾಸ್ ಬಲಿಯಾಗಿದ್ದಾನೆ.
ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಪೊಲೀಸರ ಫೈರಿಂಗ್ ನಲ್ಲಿ ನಟೋರಿಯಸ್ ಹಂತಕನಾಗಿದ್ದ ಯೂನುಸ್ ಇಕ್ಲಾಸ್ ಪಟೇಲ್ ಸಾವನ್ನಪ್ಪಿದ್ದಾನೆ.
ರೌಡಿಶೀಟರ್ ಯೂನುಸ್ ಇಕ್ಲಾಸ್ ನಿನ್ನೆ ವ್ಯಕ್ತಿಯೋರ್ವರಿಗೆ ಚಾಕು ತೋರಿಸಿ 25 ಸಾವಿರ ಹಣ ಕಸಿದು ಆತನ ಬೈಕ್ ಕಸಿದುಕೊಂಡು ಪರಾರಿ ಆಗಿದ್ದನು. ಈ ಸಂಬಂಧ ವಿಜಯಪುರದ ಗಾಂಧಿಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಪೊಲೀಸರು ಮುಂದಾಗಿದ್ದರು. ಈ ವೇಳೆ ಪೊಲೀಸರ ಮೇಲೆ ಚಾಕು ಇರಿದು ಹಲ್ಲೆಗೆ ಯತ್ನಿಸಿದ್ದಾನೆ .
ಪೊಲೀಸರು ಶರಣಾಗುವಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೆ ಆತನ ಪರಾರಿಯಾಗಲು ಯತ್ನಿಸಿದ ಹಿನ್ನೆಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಆತನನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಧೃಡಪಡಿಸಿದ್ದಾರೆ.