Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಭಾರತಕ್ಕೆ ಊಹೆಗೂ ಮೀರಿದ ಮಿಲಿಟರಿ ಮತ್ತು ಆರ್ಥಿಕ ನಷ್ಟ ಸಂಭವಿಸಲಿದೆ ‘: ಪಾಕ್ ಮಿಲಿಟರಿ ನಾಯಕ ಅಸಿಮ್ ಮುನೀರ್ ಎಚ್ಚರಿಕೆ

19/10/2025 6:34 AM

ಗ್ರಾಹಕರಿಗೆ `BSNL’ ನಿಂದ ಗುಡ್ ನ್ಯೂಸ್ : ಕೇವಲ 1 ರೂ.ಗೆ 1 ತಿಂಗಳು ದಿನಕ್ಕೆ 2GB ಡೇಟಾ, 100 SMS, ಕರೆ ಸೌಲಭ್ಯ.!

19/10/2025 6:32 AM

ಆದಾಯವಿರುವ ಸಂಗಾತಿ ಜೀವನಾಂಶಕ್ಕೆ ಅರ್ಹರಲ್ಲ: ದೆಹಲಿ ಹೈಕೋರ್ಟ್‌

19/10/2025 6:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಗ್ರಾಮೀಣ ಜನತೆಗೆ ಶಾಕ್ : ಗ್ರಾಪಂ ವ್ಯಾಪ್ತಿಯ ಎಲ್ಲಾ `ಆಸ್ತಿ’ಗಳಿಗೆ ತೆರಿಗೆ ವಸೂಲಿಗೆ ಸರ್ಕಾರದಿಂದ ನಿಯಮ ಪ್ರಕಟ.!
KARNATAKA

ರಾಜ್ಯದ ಗ್ರಾಮೀಣ ಜನತೆಗೆ ಶಾಕ್ : ಗ್ರಾಪಂ ವ್ಯಾಪ್ತಿಯ ಎಲ್ಲಾ `ಆಸ್ತಿ’ಗಳಿಗೆ ತೆರಿಗೆ ವಸೂಲಿಗೆ ಸರ್ಕಾರದಿಂದ ನಿಯಮ ಪ್ರಕಟ.!

By kannadanewsnow5718/10/2025 6:08 AM

ಬೆಂಗಳೂರು : ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೃಷಿ ತೆರಿಗೆಗೆ ಒಳಪಡದ ಎಲ್ಲಾ ವಸತಿ, ವಸತಿಯೇತರ, ವಾಣಿಜ್ಯ, ವಾಣಿಜೈತರ ಕಟ್ಟಡ, ನಿವೇಶನ, ರೆಸಾರ್ಟ್, ಹೋಮ್ ಸ್ಟೇ ಸೇರಿ ಇತರೆ ಆಸ್ತಿಗಳನ್ನು ಗುರುತಿಸಿ ನಿಯಮ ಬದ್ಧವಾಗಿ ತೆರಿಗೆ ಮತ್ತು ಶುಲ್ಕಗಳ ವಸೂಲಿಗೆ ತಂದಿರುವ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ (ಗ್ರಾಪಂಗಳ ತೆರಿಗೆ, ದರ ಮತ್ತು ಫೀಸು ಗಳು) ನಿಯಮ 2025ಅನ್ನು ಪ್ರಕಟಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 (1993ರ ಪ್ರಕರಣ ಕರ್ನಾಟಕ ಅಧಿನಿಯಮ ಸಂಖ್ಯೆ 14)ರ ಪ್ರಕರಣ 66, 67, 70, 97, 1992, 1990, 1992, 200, 201 ಮತ್ತು 202ನೇ ಪ್ರಕರಣಗಳೊಂದಿಗೆ ಓದಿಕೊಂಡಂತೆ ಪ್ರಕರಣ 311ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2025ರ ថថថ ថ៨ ៥ :RDPR 422 GPA 2025, ໖:04.07.20250 ಮಾಹಿತಿಗಾಗಿ ದಿನಾಂಕ:04.07.2025ರ ಕರ್ನಾಟಕ ರಾಜ್ಯ ಪತ್ರದ ವಿಶೇಷ ರಾಜ್ಯ ಪತ್ರಿಕೆಯ ಭಾಗ-IV ಎ ರಲ್ಲಿ ಪ್ರಕಟಿಸಿ, ಸದರಿ ನಿಯಮಗಳಿಂದ ಬಾಧಿತರಾಗಿರಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆ ಮತ್ತು ಸಲಹೆಗಳನ್ನು ಪ್ರಕಟಣೆಯ ದಿನಾಂಕದಿಂದ ಹದಿನೈದು ದಿನಗಳ ಒಳಗಾಗಿ ಸಲ್ಲಿಸಲು ಅಹ್ವಾನಿಸಲಾಗಿದ್ದರಿಂದ;

ಮತ್ತು ದಿನಾಂಕ:04.07.2025ರಂದು ಸದರಿ ರಾಜ್ಯ ಪತ್ರವನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ಮತ್ತು ಸದರಿ ಕರಡು ನಿಯಮಗಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಸಾರ್ವಜನಿಕರಿಂದ ಬಂದ ಆಕ್ಷೇಪಣೆ/ಸಲಹೆಗಳನ್ನು ಪರಿಗಣಿಸಿರುವುದರಿಂದ;

ಪ್ರಸ್ತುತ 1993ರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ (19930 , 14) 66, 67, 68, 69, 70, 97, 199, 1992 2 1992, 200, 201 ಮತ್ತು 202ನೇ ಪ್ರಕರಣಗಳೊಂದಿಗೆ ಓದಿಕೊಂಡಂತೆ ಪ್ರಕರಣ 311 ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಂಡಂತೆ ನಿಯಮಗಳನ್ನು ರಚಿಸುತ್ತದೆ; ಏನೆಂದರೆ,-

ನಿಯಮಗಳು

ಅಧ್ಯಾಯ-1
ಪ್ರಾರಂಭಿಕ
1. ಹೆಸರು ಮತ್ತು ಪ್ರಾರಂಭ. -(1) ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು
ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025 ಎಂದು ಕರೆಯತಕ್ಕದ್ದು.

(2) ಈ ನಿಯಮಗಳು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರುತ್ತದೆ.
2. ಪರಿಭಾಷೆಗಳು. ಈ ನಿಯಮಗಳಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು, –

(1) “ಅಧಿನಿಯಮ”ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (ಕರ್ನಾಟಕ ಅಧಿನಿಯಮ ಸಂಖ್ಯೆ 14);

(2) “ಅದಿಭೋಗದಾರ” ಎಂದರೆ ಯಾವುದೇ ಕಟ್ಟಡ ಅಥವಾ ಖಾಲಿ ಭೂಮಿಯನ್ನು ಅದರ ಮಾಲೀಕನಿಂದ ಚಾಲ್ತಿಯಲ್ಲಿರುವ ಕಾನೂನಿಗನುಗುಣವಾಗಿ ಬಾಡಿಗೆ ಅಥವಾ ಗುತ್ತಿಗೆ ಅಥವಾ ಬಾಡಿಗೆ ರಹಿತವಾಗಿ ಬಳಸುತ್ತಿರುವ ಅಥವಾ ಅನುಭವದಲ್ಲಿರುವ ಮತ್ತು ಅದಕ್ಕೆ ತಗಲುವ ಬಾಡಿಗೆಯನ್ನು ನಿಬಂಧನೆಗೊಳಪಟ್ಟು ಪಾವತಿಸುತ್ತಿರುವ ವ್ಯಕ್ತಿಯನ್ನು ಒಳಗೊಂಡಿರತಕ್ಕದ್ದು;

(3) “ಕೈಗಾರಿಕಾ ಕಟ್ಟಡ” ಎಂದರೆ ಯಂತ್ರಗಳ ಮೂಲಕ ಉಗಿ, ನೀರು, ತೈಲ, ಅನಿಲ, ವಿದ್ಯುತ್ ಅಥವಾ ಯಾವುದೇ ಇತರೆ ರೀತಿಯ ಇಂಧನ ಶಕ್ತಿಯ ಸಹಾಯದಿಂದ ನಡೆಸುವ ಕೈಗಾರಿಕೆ, ಉತ್ಪಾದನಾ ಘಟಕ, ತಯಾರಿಕಾ ಘಟಕಗಳು,

(4) “ಕೃಷಿ ಆಧಾರಿತ ಉತ್ಪಾದನಾ ಘಟಕಗಳ ಕಟ್ಟಡ” ಎಂದರೆ ಕೃಷಿ ಆಧಾರಿತ ಉತ್ಪಾದನಾ ಘಟಕಗಳು, ವಾಣಿಜ್ಯ ಉದ್ದೇಶದ ಪುಷ್ಪದ್ಯಮ, ವಾಣಿಜ್ಯ ಉದ್ದೇಶದ ನರ್ಸರಿ ಅಥವಾ ತತ್ಸಮಾನ ಪ್ರಕ್ರಿಯೆಯನ್ನು ನಡೆಸಲಾಗುವ ಇತರೆ ಕಟ್ಟಡಗಳು;

(5) “ಕೋಷ್ಠಕ”ಎಂದರೆ ಈ ನಿಯಮಗಳಿಗೆ ಲಗತ್ತಿಸಿರುವ ಕೋಷ್ಠಕ;

(6) “ಖಾಲಿ ಜಮೀನು’ ಎಂದರೆ ವಸತಿ, ವಾಣಿಜ್ಯ, ವಸತಿಯೇತರ, ಕೈಗಾರಿಕೆ ಮತ್ತು ಇತರ ಉದ್ದೇಶದ ಯಾವುದೇ ಕಟ್ಟಡ ಸಾಮಗ್ರಿಗಳನ್ನು ಒಳಗೊಂಡಿರುವ ರಚನೆಯನ್ನು ಹೊಂದಿರದ ಹಾಗೂ ಪಾರ್ಕಿಂಗ್ ಅಥವಾ ಸ್ಟಾಕ್ಯಾರ್ಡ್ ಮತ್ತು ರನ್ಗಾಗಿ ಬಳಸದ ಖಾಲಿ ಜಾಗವಾಗಿರುವ ಭೂಮಿ;

(7)“ತೆರಿಗೆ” ಎಂದರೆ ಅಧಿನಿಯಮದ ಪ್ರಕರಣ 199ನೇ ಪ್ರಕರಣದ ಮೇರೆಗೆ ಗ್ರಾಮ ಪಂಚಾಯಿತಿ ಪ್ರದೇಶದ ಪರಿಮಿತಿಯಲ್ಲಿ ಖಾಲಿ ಜಮೀನು ಅಥವಾ ನಿವೇಶನ ಅಥವಾ ಕಟ್ಟಡ ಅಥವಾ ಅವೆರಡರ ಮೇಲೆ ಅಥವಾ ನಿರ್ಮಿತ ರಚನೆಗಳ ಮೇಲೆ ನಿಯಮಿಸಬಹುದಾದಂತೆ ವಿಧಿಸಬಹುದಾದ ಕರಗಳನ್ನು ಒಳಗೊಂಡಿರತಕ್ಕದ್ದು;

(8) “ದರ” ಎಂದರೆ ಈ ಅಧಿನಿಯಮದ ಪ್ರಕರಣ 199ನೇ (2) ನೇ ಉಪ-ಪ್ರಕರಣದ ಮೇರೆಗೆ ಸರಬರಾಜು ಸೇವೆಗಳಿಗೆ ನಿಯಮಿಸಬಹುದಾದಂತೆ ವಿಧಿಸಬಹುದಾದ ದರಗಳನ್ನು ಒಳಗೊಂಡಿರತಕ್ಕದ್ದು;

(9) “ನಮೂನೆ” ಎಂದರೆ ಈ ನಿಯಮಗಳಿಗೆ ಲಗತ್ತಿಸಿರುವ ನಮೂನೆ;

(10)”ಅನುಬಂಧ” ಎಂದರೆ ಈ ನಿಯಮಗಳಿಗೆ ಲಗತ್ತಿಸಿರುವ ಅನುಬಂಧ;

(11)”ನಿವೇಶನ” ಎಂದರೆ ವಸತಿ, ವಾಣಿಜ್ಯ, ವಸತಿಯೇತರ, ಕೈಗಾರಿಕಾ ಉದ್ದೇಶಕ್ಕಾಗಿ ವಿಭಾಗಗಳಾಗಿ ವಿಂಗಡಿಸಲಾದ, ನಿರ್ಮಿತ ಪ್ರದೇಶದ ಜಾಗ ಹಾಗೂ ಯಾವುದೇ ಕಟ್ಟಡವನ್ನು ಕಟ್ಟಿರದ ವಿವಿಧ ಆಕಾರದ ಖಾಲಿ ಭೂಮಿ;

(12) ನಿರ್ಮಿತ ಪ್ರದೇಶ” ಎಂದರೆ ನಿವೇಶನದ ಒಳಗೆ ಕಾನೂನು ಬದ್ಧವಾಗಿ ಬಿಡಬೇಕಾದ ಪ್ರದೇಶವನ್ನು ಹೊರತುಪಡಿಸಿ ನಿರ್ಮಿಸಿದ ಕಟ್ಟಡ, ನೆಲ ಮಾಳಿಗೆ, ಬಾಲ್ಕನಿ, ಗ್ಯಾರೇಜ್, ಈಜುಕೊಳ, ಮೇಲಂತಸ್ತು ಸೇರಿದಂತೆ ಒಟ್ಟು ನಿರ್ಮಿತ ಅಥವಾ ರಚನೆಯುಳ್ಳ ಪ್ರದೇಶ.

Shock to the rural people of the state: The government has announced rules for collecting tax on all 'properties' within the gram panchayat limits!
Share. Facebook Twitter LinkedIn WhatsApp Email

Related Posts

ಗ್ರಾಹಕರಿಗೆ `BSNL’ ನಿಂದ ಗುಡ್ ನ್ಯೂಸ್ : ಕೇವಲ 1 ರೂ.ಗೆ 1 ತಿಂಗಳು ದಿನಕ್ಕೆ 2GB ಡೇಟಾ, 100 SMS, ಕರೆ ಸೌಲಭ್ಯ.!

19/10/2025 6:32 AM1 Min Read

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲೂ `ಬಿ-ಖಾತಾ’ ವಿತರಣೆ.!

19/10/2025 6:25 AM2 Mins Read

ರಾಜ್ಯ ಅಗ್ನಿಶಾಮಕ, ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗಳಿಗೆ `ಅಪಘಾತ ವಿಮಾ’ ಮೊತ್ತ 50 ಲಕ್ಷ ರೂ.ಗೆ ಹೆಚ್ಚಳ : ಸರ್ಕಾರದಿಂದ ಮಹತ್ವದ ಆದೇಶ

19/10/2025 6:14 AM1 Min Read
Recent News

‘ಭಾರತಕ್ಕೆ ಊಹೆಗೂ ಮೀರಿದ ಮಿಲಿಟರಿ ಮತ್ತು ಆರ್ಥಿಕ ನಷ್ಟ ಸಂಭವಿಸಲಿದೆ ‘: ಪಾಕ್ ಮಿಲಿಟರಿ ನಾಯಕ ಅಸಿಮ್ ಮುನೀರ್ ಎಚ್ಚರಿಕೆ

19/10/2025 6:34 AM

ಗ್ರಾಹಕರಿಗೆ `BSNL’ ನಿಂದ ಗುಡ್ ನ್ಯೂಸ್ : ಕೇವಲ 1 ರೂ.ಗೆ 1 ತಿಂಗಳು ದಿನಕ್ಕೆ 2GB ಡೇಟಾ, 100 SMS, ಕರೆ ಸೌಲಭ್ಯ.!

19/10/2025 6:32 AM

ಆದಾಯವಿರುವ ಸಂಗಾತಿ ಜೀವನಾಂಶಕ್ಕೆ ಅರ್ಹರಲ್ಲ: ದೆಹಲಿ ಹೈಕೋರ್ಟ್‌

19/10/2025 6:28 AM

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲೂ `ಬಿ-ಖಾತಾ’ ವಿತರಣೆ.!

19/10/2025 6:25 AM
State News
KARNATAKA

ಗ್ರಾಹಕರಿಗೆ `BSNL’ ನಿಂದ ಗುಡ್ ನ್ಯೂಸ್ : ಕೇವಲ 1 ರೂ.ಗೆ 1 ತಿಂಗಳು ದಿನಕ್ಕೆ 2GB ಡೇಟಾ, 100 SMS, ಕರೆ ಸೌಲಭ್ಯ.!

By kannadanewsnow5719/10/2025 6:32 AM KARNATAKA 1 Min Read

ನವದೆಹಲಿ : ದೀಪಾವಳಿಯನ್ನು ಆಚರಿಸುವ ಸಲುವಾಗಿ ಭಾರತದ ಪ್ರವರ್ತಕ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಪೂರೈಕೆದಾರ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್…

ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ : ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲೂ `ಬಿ-ಖಾತಾ’ ವಿತರಣೆ.!

19/10/2025 6:25 AM

ರಾಜ್ಯ ಅಗ್ನಿಶಾಮಕ, ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿಗಳಿಗೆ `ಅಪಘಾತ ವಿಮಾ’ ಮೊತ್ತ 50 ಲಕ್ಷ ರೂ.ಗೆ ಹೆಚ್ಚಳ : ಸರ್ಕಾರದಿಂದ ಮಹತ್ವದ ಆದೇಶ

19/10/2025 6:14 AM

GOOD NEWS: ಬೆಂಗಳೂರಲ್ಲಿ ‘ಸರ್ಕಾರಿ ಜಾಗ’ದಲ್ಲಿನ ಮನೆಗಳಿಗೆ ‘ಬಿ’ ಖಾತೆ ಹೊಂದಿದ್ದರೂ, ಹೊಂದಿರದಿದ್ದರೂ ‘ಎ‌‌’ ಖಾತ ವಿತರಣೆ

19/10/2025 6:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.