ಮೈಸೂರು: 2025ರ ಅಕ್ಟೋಬರ್ 15ರಂದು, ಮೈಸೂರು ವಿಭಾಗದ ವಾಣಿಜ್ಯ ವಿಭಾಗವು ಟಿಕೆಟ್ ಪರಿಶೀಲನಾ ಸಿಬ್ಬಂದಿ ನಡೆಸಿದ ಕ್ಷೇತ್ರ ಪರಿಶೀಲನೆಗಳಲ್ಲಿ ಉತ್ತರ ಫಲಿತಾಂಶವನ್ನು ಸಾಧಿಸಿದೆ. ಟಿಕೆಟ್ ಇಲ್ಲದೆ ಪ್ರಯಾಣ ಮತ್ತು ಇತರ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ವಿಭಾಗದ ವಿವಿಧ ಮಾರ್ಗಗಳಲ್ಲಿ ತೀವ್ರ ಟಿಕೆಟ್ ಪರಿಶೀಲನಾ ಅಭಿಯಾನಗಳನ್ನು ಹಮ್ಮಿಕೊಳ್ಳಲಾಯಿತು.
ಈ ಪರಿಶೀಲನೆಗಳಲ್ಲಿ ಒಟ್ಟು 727 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ₹6,29,010 ದಂಡವನ್ನು ಸಂಗ್ರಹಿಸಲಾಗಿದೆ. ವಿವರಗಳು ಹೀಗಿವೆ:
ಹೆಚ್ಚಿನ ದಂಡದ ಪ್ರಕರಣಗಳು: 543 – ₹5,60,060 ದಂಡ
ಅತಿಕ್ರಮ ಪ್ರಯಾಣದ ಪ್ರಕರಣಗಳು: 33 – ₹37,640 ದಂಡ
ಬುಕ್ ಮಾಡದ ಸರಕು (ಲಗೇಜ್) ಪ್ರಕರಣಗಳು: 7 – ₹1,250 ದಂಡ
ಧೂಮಪಾನ ಪ್ರಕರಣಗಳು: 3 – ₹600 ದಂಡ
ಅನಧಿಕೃತ ವ್ಯಾಪಾರ (ವೆಂಡಿಂಗ್) ಪ್ರಕರಣ: 1 – ₹1,000 ದಂಡ
ಇತರ ಪ್ರಕರಣಗಳು: 140 – ₹28,460 ರೂ ಸಂಗ್ರಹಿಸಲಾಗಿದೆ.
ಮೈಸೂರು ವಿಭಾಗದ ವಾಣಿಜ್ಯ ವಿಭಾಗವು ಪ್ರಯಾಣಿಕರು ಸರಿಯಾದ ಟಿಕೆಟ್ ಗಳೊಂದಿಗೆ ಪ್ರಯಾಣಿಸುವಂತೆ ಮತ್ತು ರೈಲ್ವೆ ನಿಯಮಗಳನ್ನು ಪಾಲಿಸುವಂತೆ ಖಚಿತಪಡಿಸಲು ನಿರಂತರವಾಗಿ ಕಟ್ಟುನಿಟ್ಟಿನ ಜಾಗರೂಕತೆ ವಹಿಸುತ್ತಿದೆ. ಇಂತಹ ಅಭಿಯಾನಗಳು ಆದಾಯವನ್ನು ಹೆಚ್ಚಿಸುವುದಲ್ಲದೆ, ಪ್ರಯಾಣಿಕರಲ್ಲಿನ ಶಿಸ್ತಿನ ಮತ್ತು ಕಾನೂನು ಪಾಲನೆಯ ಮನೋಭಾವವನ್ನು ಉತ್ತೇಜಿಸುತ್ತದೆ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರಾದ ಲೋಹಿತೇಶ್ವರ. ಜೆ ಇವರು ತಿಳಿಸಿದರು.
ಬೆಂಗಳೂರು ಒಂದರಲ್ಲೇ ವರ್ಷಕ್ಕೆ 943 ಟನ್ ಅನ್ನ ವೇಸ್ಟ್ ಮಾಡುತ್ತಿದ್ದೇವೆ: ಸಿಎಂ ಸಿದ್ದರಾಮಯ್ಯ ಕಳವಳ
BIG NEWS: ರಾಜ್ಯದ ‘ಸರ್ಕಾರಿ ಶಾಲಾ ಆವರಣ’ದಲ್ಲಿ ಖಾಸಗಿ ಕಾರ್ಯಕ್ರಮ ಬ್ಯಾನ್: 2013ರಲ್ಲೇ ಆದೇಶ, ಪತ್ರ ವೈರಲ್