ಕೋಲಾರ: ಜಿಲ್ಲೆಯಲ್ಲಿ ಸಮೀಕ್ಷೆಗೆ ತೆರಳಿದ್ದಾಗ ನಾಪತ್ತೆಯಾಗಿದ್ದ ಶಾಲಾ ಶಿಕ್ಷಕಿ ಶವವಾಗಿ ಪತ್ತೆಯಾಗಿದ್ದಾರೆ. ಕೋಲಾರದಲ್ಲಿ ನಾಪತ್ತೆಯಾಗಿದ್ದ ಶಾಲಾ ಶಿಕ್ಷಕಿ ಅಖ್ತರ್ ಶವವಾಗಿ ಪತ್ತೆಯಾಗಿದ್ದಾರೆ.
ಕೋಲಾರ ತಾಲ್ಲೂಕಿನ ಕೆ.ಬಿ ಹೊಸಹಳ್ಳಿ ಸರ್ಕಾರಿ ಶಾಲಾ ಶಿಕ್ಷಕಿ ಅಖ್ತರ್ ಅವರನ್ನು ರಾಜ್ಯದಲ್ಲಿ ನಡೆಯುತ್ತಿರುವಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗಣತಿದಾರರನ್ನಾಗಿ ನೇಮಕ ಮಾಡಲಾಗಿತ್ತು.
ಕೋಲಾರದ ನರಸಾಪುರದಲ್ಲಿ ಸಮೀಕ್ಷೆ ಕಾರ್ಯದ ನಂತ್ರ ಶಾಲಾ ಶಿಕ್ಷಕಿ ಅಖ್ತರ್ ನಾಪತ್ತೆಯಾಗಿದ್ದರು. ಕೋಲಾರ ನಗರದ ಮಹಾಲಕ್ಷ್ಮೀ ಬಡಾವಣೆಯ ನಿವಾಸಿಯಾಗಿದ್ದಂತ ಶಾಲಾ ಶಿಕ್ಷಕಿ ನಾಪತ್ತೆ ಬಗ್ಗೆ ದೂರು ದಾಖಲಾಗಿತ್ತು. ಇದೀಗ ನಾಪತ್ತೆಯಾಗಿದ್ದ ಎರಡು ದಿನಗಳ ಬಳಿಕ ಅಖ್ತರ್ ಬೇಗಂ(53) ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಕೆಜಿಎಫ್ ತಾಲ್ಲೂಕಿನ ಐಪಲ್ಲಿ ಕರೆಯಲ್ಲಿ ಸಮೀಕ್ಷೆಗೆ ತೆರಳಿದ್ದಾಗ ನಾಪತ್ತೆಯಾಗಿದ್ದಂತ ಶಾಲಾ ಶಿಕ್ಷಕಿ ಅಖ್ತರ್ ಶವ ಪತ್ತೆಯಾಗಿದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
BREAKING : ಇನ್ಮುಂದೆ ‘PUC’ ಅಲ್ಲಿ 198 & ‘SSLC’ ಅಲ್ಲಿ 206 ಅಂಕ ಪಡೆದರೆ ಪಾಸ್ : ಸಚಿವ ಮಧು ಬಂಗಾರಪ್ಪ