ಶಿವಮೊಗ್ಗ: ಜಿಲ್ಲೆಯ ಸೊರಬದ ಉಳವಿಯ ಪೆಟ್ರೋಲ್ ಬಂಕ್ ಸಮೀಪದಲ್ಲಿ ಟ್ರಿಲ್ಲರ ಹೊಡೆಯುತ್ತಿದ್ದಾಗ ವಿದ್ಯುತ್ ಶಾಕ್ ನಿಂದ ಪತ್ರೆಸಾಲಿನ ಯುವಕ ಅರುಣ್ ಕುಮಾರ್(31) ಗಂಭೀರವಾಗಿ ಗಾಯಗೊಂಡಿದ್ದಾರೆ.
ಡೆಡ್ ಲೈನ್ ಎಂದು ಮೆಸ್ಕಾಂ ಇಲಾಖೆ ನಿರ್ಲಕ್ಷ್ಯ, ಯುವಕನಿಗೆ ವಿದ್ಯುತ್ ಶಾಕ್
ಉಳವಿಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ, ಪಕ್ಕದಲ್ಲಿ ಡೆಡ್ ಲೈನ್ ಎಂಬುದಾಗಿ ವಿದ್ಯುತ್ ವಯರ್ ಸಹಿತ ಕಂಬಗಳನ್ನು ಹಾಗೆ ಬಿಡಲಾಗಿದೆ. ಇದೇ ಇಂದಿನ ಘಟನೆಗೆ ಕಾರಣ ಎಂಬುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡೆಡ್ ಲೈನ್ ಎಂದು ಮೇನ್ ಲೈನ್, ನಾಲ್ಕು ಲೈನ್ ಪಕ್ಕದಲ್ಲೇ ಗೈಯಿರುವ ಕಂಬವನ್ನು ಬಿಡಲಾಗಿದೆ. ಇದಕ್ಕೆ ಬಳ್ಳಿ ಸುತ್ತಿಕೊಂಡು ಹೋಗಿ ಮೇನ್ ಲೈನ್ ಗೆ ತಾಗಿದೆ. ಇಂದು ಅದೇ ಕಾರಣಕ್ಕಾಗಿ ಟ್ರ್ಯಾಕ್ಟರ್ ಗೆ ಗೈ ತಾಗಿದ್ದೇ ತಡ ವಿದ್ಯುತ್ ಶಾಕ್ ಹೊಡೆದಿದೆ. ಇದರಿಂದ ಅರುಣ್ ಕುಮಾರ್ ಕೈ, ಕಾಲು ಸುಟ್ಟು ಹೋಗಿವೆ. ಜೊತೆಗೆ ಟ್ರ್ಯಾಕ್ಟ್ ಸಹ ಸುಟ್ಟಿದೆ ಎಂಬುದು ಜನರ ಆರೋಪವಾಗಿದೆ.
ಮೆಸ್ಕಾಂ ಕಚೇರಿ ಮುಂದೆ ಇದ್ದರೂ ಕಣ್ ಮುಚ್ಚಿ ಕುಳಿತ ಸಿಬ್ಬಂದಿ
ಇಂದು ಉಳವಿಯಲ್ಲಿ ನಡೆದಿರುವ ವಿದ್ಯುತ್ ಅವಘಡ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ನಡೆದಿರುವಂತ ಘಟನೆ ಆಗಿದೆ. ವಿದ್ಯುತ್ ಕಂಬಕ್ಕೆ ಬಳ್ಳಿ ಹಬ್ಬಿದ್ದರೂ ಮೆಸ್ಕಾಂ ಮುಂಭಾಗದಲ್ಲಿ ಇದ್ದರೂ ಅದನ್ನು ಕ್ಲೀನ್ ಮಾಡಿಲ್ಲ. ಹಾಗೆಯೇ ಬಿಟ್ಟ ಕಾರಣ ವಿದ್ಯುತ್ ಪ್ರವಹಿಸಿ ಯುವಕ ಗಂಭೀರವಾಗಿ ಗಾಯಗೊಂಡಂತೆ ಆಗಿದೆ.
ಅವಘಡದ ಬಳಿಕ ಉಳವಿಯ ಮೆಸ್ಕಾಂ ಕಚೇರಿ ಬಾಗಿಲು ಹಾಕಿಕೊಂಡು ನಾಪತ್ತೆಯಾದ ಮೆಸ್ಕಾಂ ಸಿಬ್ಬಂದಿ
ಉಳವಿಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ವಿದ್ಯುತ್ ಅವಘಡ ಸಂಭವಿಸುತ್ತದ್ದಂತೆ ಸಿಬ್ಬಂದಿ ಮಾತ್ರ ಕಚೇರಿ ಭಾಗಿಲನ್ನೇ ಹಾಕಿಕೊಂಡು ನಾಪತ್ತೆಯಾಗಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರಾದ ಮಂಜಪ್ಪ ಅವರು ಸೊರಬ ಎಇಇಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು.
ಡೆಡ್ ಲೈನ್ ತೆರವುಗೊಳಿಸಿ, ಮತ್ತಷ್ಟು ಮುಂದಾಗುವ ವಿದ್ಯುತ್ ಅವಘಡ, ಜೀವ ಹಾನಿಯನ್ನು ತಪ್ಪಿಸಿ
ಮೆಸ್ಕಾಂ ಅಧಿಕಾರಿಗಳು ಡೆಡ್ ಲೈನ್ ಎಂದು 11ಕೆವಿ ವಿದ್ಯುತ್ ವಯರ್ ಸಾಗಿರುವ ಮಾರ್ಗದಲ್ಲಿ ಬಿಟ್ಟಿರುವುದನ್ನು ತೆರವುಗೊಳಿಸಬೇಕು. ಇದರಿಂದ ಮುಂದೆ ಆಗುವಂತ ವಿದ್ಯುತ್ ಅವಘಡ, ಜೀವಹಾನಿ ತಪ್ಪಿದಂತೆ ಆಗಲಿದೆ. ಆ ನಿಟ್ಟಿನಲ್ಲಿ ಮೆಸ್ಕಾಂ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂಬುದಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಗಾಯಾಳು ಅರುಣ್ ಕುಮಾರ್ ಶಿಫ್ಟ್
ಉಳವಿಯ ಪೆಟ್ರೋಲ್ ಬಂಕ್ ಬಳಿಯಲ್ಲಿ ರೋಟರ್ ಹೊಡೆಯುತ್ತಿದ್ದಂತ ಸಂದರ್ಭದಲ್ಲಿ ಗೈಗೆ ರೋಟರ್ ತಗುಲಿ ವಿದ್ಯುತ್ ಪ್ರವಹಿಸಿ, ಅರುಣ್ ಕುಮಾರ್ ಅವರ ಕೈ, ಕಾಲುಗಳಿಗೆ ವಿದ್ಯುತ್ ಶಾಕ್ ನಿಂದ ಸುಟ್ಟ ಗಾಯಗಳಾಗಿದ್ದವು. ಉಳವಿಯ ಪ್ರಾಥಮಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಸಾಗರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಆದರೇ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯುವಂತೆ ಸೂಚಿಸಿದ ಪರಿಣಾಮ ಕೊಂಡೊಯ್ಯಲಾಗಿದೆ.
ಸೂಕ್ತ ಪರಿಹಾರಕ್ಕೆ ಆಗ್ರಹ
ವಿದ್ಯುತ್ ಶಾಕ್ ನಿಂದ ಸುಟ್ಟ ಗಾಯದಿಂದ ಗಂಭೀರವಾಗಿ ಗಾಯಗೊಂಡಿರುವಂತ ಅರುಣ್ ಕುಮಾರ್ ಅವರ ಚಿಕಿತ್ಸಾ ವೆಚ್ಚವನ್ನು ಮೆಸ್ಕಾಂ ಇಲಾಖೆ ಭರಿಸಬೇಕು. ಅಲ್ಲದೇ ಸೂಕ್ತ ಪರಿಹಾರವನ್ನು ನೀಡಬೇಕು ಎಂಬುದಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆ ನಿಟ್ಟಿನಲ್ಲಿ ಮೆಸ್ಕಾಂ ಇಲಾಖೆ ಅನುವಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ವಸಂತ ಬಿ ಈಶ್ವರಗೆರೆ, ಸಂಪಾದಕರು, ಕನ್ನಡ ನ್ಯೂ ನೌ.ಕಾಂ – 9738123234
BREAKING: ‘ರೌಡಿ ಶೀಟರ್’ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ ‘PSI ಸಸ್ಪೆಂಡ್’
BREAKING : ‘ಬಿಹಾರ ವಿಧಾನಸಭಾ ಚುನಾವಣೆ’ಗೆ BJP ಮೊದಲ ಪಟ್ಟಿ ಬಿಡುಗಡೆ: ’71 ಅಭ್ಯರ್ಥಿ’ಗಳ ಹೆಸರು ಘೋಷಣೆ