ನವದೆಹಲಿ: ಆಭರಣ ಪ್ರಿಯರಿಗೆ ಬಿಗ್ ಶಾಕ್, 10 ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು ಒಂದೇ ದಿನ 3280 ರೂ. ಏರಿಕೆಯಾಗಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,868 ರೂಪಾಯಿಗೆ ತಲುಪಿದೆ.
ಇಂದು ಬರೋಬ್ಬರಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 3280 ರೂಪಾಯಿ ಹೆಚ್ಚಳ ಆಗಿದೆ. ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,868 ರೂಪಾಯಿಗೆ ತಲುಪಿದೆ. ಇಂದು ಗ್ರಾಂ ಒಂದಕ್ಕೆ ಬೆಲೆ ಬರೋಬ್ಬರಿ 328 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 300 ರೂಪಾಯಿ ಏರಿಕೆ ಆಗಿದ್ದು, 11,795 ರೂ.ಗೆ ಏರಿಕೆ ಆಗಿದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 3280 ರೂಪಾಯಿ ಹೆಚ್ಚಳ ಆಗಿ, 1,28,680 ರುಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 3000 ರೂ ಏರಿಕೆ ಆಗಿ, 1,17,950 ರೂ.ಗೆ ಏರಿಕೆ ಕಂಡಿದೆ.
ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 1,950 ರೂ. ಏರಿಕೆಯಾಗಿ 10 ಗ್ರಾಂಗೆ 1,27,950 ರೂ. ತಲುಪಿದೆ. ಅಮೆರಿಕ-ಚೀನಾ ವ್ಯಾಪಾರ ಉದ್ವಿಗ್ನತೆ ಚಿನ್ನ ಬೆಲೆ ಏರಿಕೆಗೆ ಕಾರಣವಾಗಿದೆ.
Gold prices in India hit a record ₹12.86 lakh per 10 grams—mirroring global prices—driven by US Fed rate cut expectations, geopolitical tensions, and robust investor demand @anshul91_m | #Gold #GoldPrice #GoldPrices #GoldPriceToday
Read: https://t.co/9QDpPVHzBL pic.twitter.com/xDroaSlxvh
— CNBC-TV18 (@CNBCTV18News) October 14, 2025