ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಬಿಗ್ ಶಾಕ್ ನೀಡಿದ್ದು, ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟು ಹೆಚ್ಚಳ ಮಾಡಲಾಗಿದೆ.
ಹೌದು, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಹೊರಟ ಪ್ರಯಾಣಿಕರಿಗೆ ಖಾಸಗಿ ಬಸ್ ಮಾಲೀಕರು ಶಾಕ್ ನೀಡಿದ್ದು, ಟಿಕೆಟ್ ದರವನ್ನು ದುಪ್ಪಟ್ಟು ಹೆಚ್ಚಳ ಮಾಡಿದೆ ಎನ್ನಲಾಗಿದೆ.
18 ಶನಿವಾರ, 19 ಭಾನುವಾರ, 20 ನರಕ ಚತುರ್ದಶಿ, 21 ಅಮಾವ್ಯಾಸೆ, 22 ದೀಪಾವಳಿಯಿದೆ. ಹೀಗಾಗಿ ಸಾಲು ಸಾಲು ರಜೆ ಬಂದಿವೆ ಹೀಗಾವಿ ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟ ಪ್ರಯಾಣಿಕರಿಗೆ ಬಿಗ್ ಶಾಕ್ ಎದುರಾಗಿದೆ. ಇದೇ ಶುಕ್ರವಾರ ಬೆಂಗಳೂರಿನಿಂದ ಕರ್ನಾಟಕದ ವಿವಿಧ ಊರುಗಳಿಗೆ ಹೋಗುವ ಖಾಸಗಿ ಬಸ್ಗಳು ಟಿಕೆಟ್ ದರವನ್ನು ದುಪ್ಪಟು ಮಾಡಿವೆ. ಇನ್ನೂ ಕೆಲ ಬಸ್ಗಳು 50% ಟಿಕೆಟ್ ದರ ಏರಿಕೆ ಮಾಡಿವೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು-ಹುಬ್ಬಳ್ಳಿ ಪ್ರಸ್ತುತ ದರ 900-1,000 ರೂ. ಇದ್ದದ್ದು 2,500-3,000 ರೂ.ಗೆ ಏರಿಕೆ ಆಗಿದೆ. ಬೆಂಗಳೂರು –ಬೆಳಗಾವಿ 1,500-1,600ರೂ. ಇದ್ದದ್ದು, 2,600-4,000ರೂ. ಆಗಿದೆ. ಬೆಂಗಳೂರು-ಗದಗ ಹಳೆ ದರ: 1,100-1,200ರೂ. ಹೊಸ ದರ: 1,800-2,000ರೂ. ಬೆಂಗಳೂರು-ಮಂಗಳೂರು ಹಳೆ ದರ: 1,300-1,400ರೂ. ಹೊಸ ದರ: 2,300-2,700ರೂ.ಗೆ ಏರಿಕೆಯಾಗಿದೆ.
ಬೆಂಗಳೂರು-ಬೀದರ್ 2,500 ರೂ.ನಿಂದ 3,500 ರೂ.ಬೆಂಗಳೂರು-ರಾಯಚೂರು 1,900-2,700ರೂ.ವರೆಗೆ ಏರಿಕೆಯಾಗಿದ್ರೆ, ಬೆಂಗಳೂರು-ಕಲಬುರಗಿ 2,500-2,600ರೂ.ವರೆಗೆ ಏರಿಕೆಯಾಗಿದೆ.