ಚಿತ್ರದುರ್ಗ: ದಾವಣಗೆರೆ ವಿವಿಯ ಅಂತರ ಕಾಲೇಜು ಭಾರ ಎತ್ತುವ ಸ್ಪರ್ಧೆಯಲ್ಲಿ ದಾವಣಗೆರೆಯ ಹೊನ್ನೂರು ಗೊಲ್ಲರಹಟ್ಟಿಯ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಕಳೆದ ಅಕ್ಟೋಬರ್.9, 10ರಂದು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ 2025-26ನೇ ಸಾಲಿನ ದಾವಣಗೆರೆ ವಿಶ್ವ ವಿದ್ಯಾಲಯದ ಅಂತರ ಕಾಲೇಜು ಭಾರ ಎತ್ತುವ ಸ್ಪರ್ಧೆ ನಡೆಯಿತು.
ಈ ಸ್ಪರ್ಧೆಯಲ್ಲಿ ದಾವಣಗೆರೆಯ ಹೊನ್ನೂರು ಗೊಲ್ಲರಹಟ್ಟಿಯಲ್ಲಿರುವಂತ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ಸ್ಪರ್ಧೆಯಲ್ಲಿ ಈ ಕೆಳಕಂಡಂತೆ ವಿದ್ಯಾರ್ಥಿಗಳು ಗೆಲುವು ಸಾಧಿಸಿದ್ದಾರೆ.
- ಪವನ್ ಎಚ್- Power Lifting 66 kg ವಿಭಾಗದಲ್ಲಿ ಒಟ್ಟು 410 kg ಎತ್ತುವ ಮೂಲಕ ಪ್ರಥಮ ಸ್ಥಾನ, Weight Lifting 65 kg ವಿಭಾಗದಲ್ಲಿ ಒಟ್ಟು 180 kg ಎತ್ತುವ ಮೂಲಕ ಪ್ರಥಮ ಸ್ಥಾನ
- ನವೀನ್ ಎಸ್ –Weight Lifting 71 kg ವಿಭಾಗದಲ್ಲಿ ಒಟ್ಟು 215 kg ಎತ್ತುವ ಮೂಲಕ ಪ್ರಥಮ ಸ್ಥಾನ
- ವಿಷ್ಣು ಎಮ್ – Power Lifting 59 kg ವಿಭಾಗದಲ್ಲಿ ಒಟ್ಟು 445 kg ಎತ್ತುವ ಮೂಲಕ ದ್ವೀತಿಯ ಸ್ಥಾನವನ್ನು ಪಡೆದಿದ್ದಾರೆ.
ದಾವಣಗೆರೆ ವಿವಿಯ ಅಂತರ ಕಾಲೇಜು ಭಾರ ಎತ್ತುವ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದಂತ ವಿದ್ಯಾರ್ಥಿಗಳಿಗೆ ಹೊನ್ನೂರು ಗೊಲ್ಲರಹಟ್ಟಿಯ ಡಿ.ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಯಾದಂತ ಡಾ. ಗೀತಾ ಶಿವಮೂರ್ತಿ ನಾಯ್ಕ್, ಪ್ರಾಂಶುಪಾಲರಾದ ತಿಪ್ಪೇಶಿ.ಜಿ ಆರ್, ಡಾ.ಶಿವಶಂಕರ.ವಿ, ದೈಹಿಕ ಶಿಕ್ಷಣ ನಿರ್ದೇಶಕರು ಮತ್ತು ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಶುಭ ಕೋರಿದ್ದಾರೆ.
ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ ಸಂಚಾರ
BIG NEWS: ‘ಸಹಕಾರ ಸಂಘ’ಗಳೂ ‘ಭ್ರಷ್ಟಾಚಾರ ಕಾಯ್ದೆ’ ವ್ಯಾಪ್ತಿಗೆ ಬರುತ್ತವೆ: ಕರ್ನಾಟಕ ಹೈಕೋರ್ಟ್








