ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಬಿ ಸಿ ಟ್ರಸ್ಟ್ (ರಿ ), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ )ಶಿರಸಿ ಜಿಲ್ಲೆ, ಸ್ವಸಹಾಯ ಸಂಘಗಳ ಒಕ್ಕೂಟ, ಸಾಗರ, ನವ ಜೀವನ ಸಮಿತಿ ಸಾಗರ ಇದರ ಸಹಯೋಗದೊಂದಿಗೆ ಗಾಂಧಿ ಸ್ಮರಣೆ ಹಾಗೂ ಬೃಹತ್ ವ್ಯಸನ ಮುಕ್ತ ಸಮಾವೇಶ ಯಶಸ್ವಿಯಾಗಿ ನಡೆಯಿತು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಬೃಹತ್ ಜನಜಾಗೃತಿ ಜಾಥಾ ಗಾಂಧಿ ಸ್ಮರಣೆ, ಬ್ರಹತ್ ವ್ಯಸನ ಮುಕ್ತರ ಸಮಾವೇಶವನ್ನು ನಗರ ಸಭೆ ಸಾಗರ ಇದರ ಅಧ್ಯಕ್ಷರಾದ ಶ್ರೀಮತಿ ಮೈತ್ರಿ ಪಾಟೀಲ್ ಉದ್ಘಾಟಿಸಿದರು.
ಈ ಬಳಿಕ ಮಾತನಾಡಿದಂತ ಅವರು, ಈ ಯೋಜನೆಯ ಕಾರ್ಯಕ್ರಮಗಳ ಮೂಲಕ ಲಕ್ಷಾಂತರ ಕುಟುಂಬಗಳು ಬದುಕನ್ನು ಕಟ್ಟಿಕೊಂಡಿವೆ. ಗಾಂಧೀಜಿಯ ತತ್ವಗಳನ್ನು ಸುವಿಚಾರಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಮದ್ಯ ವರ್ಜನಾ ಶಿಬಿರಗಳಲ್ಲಿ ಭಾಗವಹಿಸಿದ ಕುಟುಂಬಗಳು ಅಭಿವೃದ್ಧಿ ಹೊಂದಿವೆ. ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಎಲ್ಲರೂ ಪಣ ತೊಡಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕರಾದ ದಿನೇಶ್ ಎಂ.ಕೆ ಮಾತನಾಡಿ ಗಾಂಧೀಜಿಯವರು ಈ ದೇಶವನ್ನು ವ್ಯಸನ ಮುಕ್ತ ಆಗುವ ಬಗ್ಗೆ ಒಳ್ಳೆಯ ಸಂದೇಶ ನೀಡಿರುತ್ತಾರೆ. ಗಾಂಧೀಜಿಯು ವ್ಯಸನ ಮುಕ್ತ ಸಮಾಜ ನಿರ್ಮಾಣ ಆಗಬೇಕು ಎಂದು ಸಂಕಲ್ಪ ಮಾಡಿದ್ದರು. ಪರಮ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಜನ ಜಾಗೃತಿ ವೇದಿಕೆಯ ಮೂಲಕ ವಿವಿಧ ಕಾರ್ಯಕ್ರಮಗಳನ್ನೂ ಜಾರಿಗೊಳಿಸಿದ್ದಾರೆ. ಆ ಮೂಲಕ ದುಶ್ಚಟ ದುರಭ್ಯಾಸಗಳನ್ನ ಹೋಗಲಾಡಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಬಡವರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ತರುವಲ್ಲಿ ದಿಟ್ಟ ಹೆಜ್ಜೆಯನ್ನ ಇಟ್ಟಿದ್ದಾರೆ ಎಂದು ವಿವರಿಸಿದರು.
ಬ್ಯಾಂಕುಗಳ ಪ್ರತಿನಿಧಿಯಾಗಿ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ಪ್ರಗತಿ ಬಂಧು ಸ್ವ ಸಹಾಯ ಗುಂಪುಗಳನ್ನು ರಚನೆ ಮಾಡುವುದರ ಮೂಲಕ ಗುಂಪಿನ ಸದಸ್ಯರಿಗೆ ಆರ್ಥಿಕ ಚೈತನ್ಯ ಸಿಕ್ಕಿದೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾದ್ಯ ಆಗಿದೆ ಎಂದರು.
ಜಿಲ್ಲಾ ಜನ ಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷರು ಹಾಲಿ ಸದಸ್ಯರಾದ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಮದ್ಯ ವರ್ಜನಾ ಶಿಬಿರ ಆಯೋಜನೆ ಮಾಡುವುದರ ಮೂಲಕ ಸಾಕಷ್ಟು ಕುಟುಂಬಗಳು ಬಡತನದ ಬೇಗೆಯಿಂದ ಹೊರಬಂದಿವೆ. ನವಜೀವ ಸಮಿತಿಯ ಸದಸ್ಯರು ಯಾವುದೇ ಕಾರಣಕ್ಕೂ ತಪ್ಪು ಹೆಜ್ಜೆಗಳನ್ನು ಇಡದೇ ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕು ಎಂದು ಕರೆ ನೀಡಿದರು.
ಪೂಜ್ಯರ ಕಾರ್ಯಕ್ರಮಗಳಿಂದಾಗಿ ಗ್ರಾಮೀಣ ಭಾಗದಲ್ಲಿ ಇರುವ ಜನರಲ್ಲಿ ಪರಿವರ್ತನೆ ಆಗಿದೆ. ಈ ಹಿಂದಿನ ನಡೆದು ಬಂದ ಹಾದಿಯನ್ನು ಯಾರು ಕೂಡ ಮರೆಯದೆ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಮ.ನಿ.ಪ್ರ ಅಭಿನವ ಚೆನ್ನ ಬಸವ ಮಹಾಸ್ವಾಮಿಗಳು ಸದಾನಂದ ಶಿವಯೋಗಶ್ರಮ ಮೂಲೆಗದೆ ಮಠ ಹೊಸನಗರ ಆಶೀರ್ವಚನ ಮಾಡುತ್ತಾ, ಬಸವಣ್ಣರ ತತ್ವ ಆದರ್ಶಗಳನ್ನು ಈ ಕಾಲದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ಮಠ ಮಂದಿರಗಳಿಂದ ಪರಿವರ್ತನೆ ಆಗುತ್ತದೆ. ಒಳ್ಳೆಯ ರೀತಿಯಲ್ಲಿ ಸಮಾಜದಲ್ಲಿ ಎಲ್ಲರೂ ಸಹ ಬಾಳ್ವೆಯಿಂದ ಬದುಕಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಶೈಕ್ಷಣಿಕ ಹಾಗೂ ಸಾಮಾಜಿಕ ಪರಿವರ್ತನೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಅದರ ಸದ್ಬಳಕೆಯನ್ನ ಎಲ್ಲರೂ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಸಾಗರ ನಗರ ಸಭೆಯ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಅರವಿಂದ ರಾಯ್ಕರ್, ಮಾಜಿ ಅಧ್ಯಕ್ಷರು ಜಿಲ್ಲಾ ಜನ ಜಾಗೃತಿ ಹಾಲಿ ಸದಸ್ಯರಾದ ಪ್ರೇಮ್ ಕುಮಾರ್, ಉಪಾಧ್ಯಕ್ಷರಾದ ಗೌರಿ, ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ದೇವರಾಜ್ ಕುರುವರಿ, ಕಸ್ತೂರಿ ಸಾಗರ್, ಪ್ರಮೀಳಾ ಎಸ್. ಬಿ. ಎ ಸಿ ಚೆನ್ನವೀರಪ್ಪ, ದಿನಕರ್ ಭಾವೆ, ಸುಧಾ ಶಿವಪ್ರಸಾದ್, ಭರಮ ಗೌಡ ಪಾಟೀಲ, ಎಚ್ ಎಮ್ ಬಾಬು ಸಾಹೇಬ, ಚಂದ್ರ ಶೇಖರ್ ಎ ಮೊದಲಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಶಿರಸಿ ವಿಭಾಗದ ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಕಾಳಿಂಗ ರಾಜ್ ಎಂ ಎಸ್ ವಹಿಸಿದ್ದರು. ಸಾದನೆ ಮಾಡಿದ ನವ ಜೀವನ ಸಮಿತಿ ಸದಸ್ಯರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.
ತಾಲೂಕು ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕರಾದ ಕೃಷ್ಣ ಮೂರ್ತಿ ನಿರೂಪಿಸಿದು. ಈ ಕಾರ್ಯಕ್ರಮದಲ್ಲಿ ಸಾಗರ ವಲಯ ಮೇಲ್ವಿಚಾರಕರಾದ ಕಮಲಾಕ್ಷಿ ವಂದಿಸಿದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡವೆಂದು ಮನೆಯಿಂದಲೇ ಪ್ರತಿಭಟನೆ ಧ್ವನಿ ಬರಬೇಕು: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್
‘MBBS ವ್ಯಾಸಂಗ’ದ ನಿರೀಕ್ಷೆಯಲ್ಲಿದ್ದವರ ಗಮನಕ್ಕೆ: 3ನೇ ಸುತ್ತಿಗೆ ಹೆಚ್ಚುವರಿ ‘200 ವೈದ್ಯಕೀಯ ಸೀಟು’ ಲಭ್ಯ