ಮಂಡ್ಯ : ಪೌತಿ ಖಾತೆ ಮಾಡಲು ಲಂಚಕ್ಕೆ ಬೇಡಿಕೆಯನ್ನು ಪಿಡಿಒ ಇಟ್ಟಿದ್ದರು. ಈ ಸಂಬಂಧ ಲೋಕಾಯುಕ್ತಕ್ಕೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಇಂದು 5,000 ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗಲೇ ಪಿಡಿಓ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವಂತ ಘಟನೆ ಮಂಡ್ಯದ ಮದ್ದೂರಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನ ಬೆಕ್ಕಳಲೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮದ್ದೂರಿನ ತಗಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಸಚಿನ್ ಎಂಬುವರು ಪೌತಿ ಖಾತೆ ಮಾಡಿಕೊಡಲು ಚಿಕ್ಕೋನಹಳ್ಳಿ ಗ್ರಾಮದ ಶಿವಲಿಂಗಯ್ಯ ಬಳಿ ಲಂಚಕ್ಕೆ ಬೇಡಿ ಇಟ್ಟಿದ್ದರು.
ಈ ಸಂಬಂಧ ಶಿವಲಿಂಗಯ್ಯ ಎಂಬುವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇಂದು ಮಂಡ್ಯದ ಮದ್ದೂರಿನ ಬೆಕ್ಕಳಲೆ ಗ್ರಾಮದಲ್ಲಿ 5,000 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಪಿಡಿಓ ಸಚಿನ್ ವಶಕ್ಕೆ ಪಡೆದಿದ್ದಾರೆ.
ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು, ಕುಮಾರ್ ಹಾಗೂ ಬ್ಯಾಟರಾಯನಗೌಡರಿಂದ ಈ ಕಾರ್ಯಾಚರಣೆ ನಡೆಸಲಾಗಿದೆ. ಈ ಮೂಲಕ ಲಂಚ ಪಡೆಯುತ್ತಿದ್ದಾಗಲೇ ಮದ್ದೂರಿನ ತಗಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ಸಚಿನ್ ರೆಡ್ ಹ್ಯಾಂಡ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
BIG NEWS: ‘ಸರ್ಕಾರಿ ವೈದ್ಯ’ರ ಉನ್ನತ ವ್ಯಾಸಂಗಕ್ಕೆ ಅನುಮತಿಗೆ ಈ ‘ಮಾರ್ಗಸೂಚಿ ಪಾಲನೆ’ ಕಡ್ಡಾಯ: ರಾಜ್ಯ ಸರ್ಕಾರ ಆದೇಶ
SHOCKING : ರಾಜ್ಯದಲ್ಲಿ ‘ಪೈಶಾಚಿಕ ಘಟನೆ’ : ಯುವತಿ ಮೇಲೆ ಗ್ಯಾಂಗ್ ರೇಪ್, ಚಿನ್ನ ಕದ್ದು ಕಾಮುಕರು ಎಸ್ಕೇಪ್.!