ಬೆಂಗಳೂರು: ಬೆಂಗಳೂರು ಸಿಟಿ ಪೊಲೀಸರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಮವಸ್ತ್ರ ಧರಿಸಿದ, ಧರಿಸದ ಪೊಲೀಸ್ ಸಿಬ್ಬಂದಿ ವರ್ಗದವರು ಗುರುತಿನ ಚೀಟಿ ತೋರಿಸಿ ಬಿಎಂಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ.
ಈ ಕುರಿತಂತೆ ಪೊಲೀಸ್ ಇಲಾಖೆಯಿಂದ ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದು ಸೂಚಿಸಲಾಗಿದೆ. ಅದರಲ್ಲಿ ದಿನಾಂಕ:05-04-2017 ರಲ್ಲಿ ಬಿ.ಎಂ.ಟಿ.ಸಿ. ಬಸ್ಸುಗಳಲ್ಲಿ ಸಮವಸ್ತ್ರ ಧಲಿಸಿ ಪ್ರಯಾಣಿಸುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಹಾಗೂ ಸಮವಸ್ತ್ರ ಧರಿಸದೆ ಇಲಾಖೆಯ ಗುರುತಿನ ಚೀಟಿ ತೋಲಿಸಿ ಪ್ರಯಾಣ ಮಾಡುವ ಅಧಿಕಾರಿ/ಸಿಬ್ಬಂದಿಗಳಿಗೆ ಉಚಿತವಾಗಿ ಪ್ರಯಾಣಿಸಲು ತಮ್ಮ ಸಂಸ್ಥೆಯ ಎಲ್ಲಾ ನಿರ್ವಾಹಕರುಗಳಿಗೆ ಸೂಚನೆ ನೀಡುವಂತೆ ಕೋರಲಾಗಿತ್ತು ಎಂದಿದ್ದಾರೆ.
ಆದರೆ ಉಲ್ಲೇಖಿತ ತಮ್ಮ ಪತ್ರದಲ್ಲಿ ಸಮವಸ್ತ್ರ ಧರಿಸಿದ ಪೊಲೀಸ್ ಸಿಬ್ಬಂದಿ ವರ್ಗದವರು ಮಾತ್ರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಉಚಿತವಾ ಪ್ರಯಾಣಿಸಲು ಅವಕಾಶ ನೀಡುವಂತೆ ತಮ್ಮ ಇಲಾಖೆಯ ಎಲ್ಲಾ ಚಾಲನಾ ಸಿಬ್ಬಂದಿಗಳಗೂ ಮಾಹಿತಿ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿರುತ್ತದೆ.
ಈಗಾಗಲೇ ಬೆಂಗಳೂರು ಮಹಾನಗರ ಸಾಲಿಗೆ ಸಂಸ್ಥೆಯ ವತಿಯಿಂದ ನಿಗಧಿ ಪಡಿಸಿರುವ ಬಸ್ ದರದ ವೆಚ್ಚವನ್ನು ಪ್ರತಿ ವರ್ಷ ಶೇ.10% ರಷ್ಟು ಹೆಚ್ಚುವರಿಯಾಗಿ ಸಂದಾಯ ಮಾಡಲಾಗುತ್ತಿದೆ. ಸಿಬ್ಬಂದಿಗಳು ಪ್ರಯಾಣ ಮಾಡಿದಾಗ ಭಲಿಸುವ ಹಣಕ್ಕಿಂತ ಹೆಚ್ಚುವರಿಯಾ ಮೊತ್ತವನ್ನು ಸಂದಾಯ ಮಾಡಲಾಗಿದೆ ಎಂದಿದ್ದಾರೆ.
ಆದ್ದರಿಂದ ಸಮವಸ್ತ್ರ ಧರಿಸದೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಗೆ ಬಿ.ಎಂ.ಟಿ.ಸಿ ಬಸ್ಸುಗಳಲ್ಲಿ ಪ್ರಯಾಣಿಸಲು ಅವಕಾಶ ನೀಡದೆ ಇರುವುದರಿಂದ ಅವರುಗಳಿಗೆ ಕರ್ತವ್ಯ ಹಾಜರಾಗಲು ತೊಂದರೆಯಾಗುತ್ತಿದೆ ಆದ್ದರಿಂದ ಸಮವಸ್ತ್ರ ಧರಿಸದೆ ಇಲಾಖೆಯ ಗುರುತಿನ ಚೀ ತೋರಿಸಿ ಪ್ರಯಾಣ ಮಾಡುವ ಪೊಲೀಸ್ ಅಧಿಕಾಲಿ/ಸಿಬ್ಬಂದಿಗಳಗೆ ಬಿ.ಎಂ.ಟಿ.ಸಿ. ಬಸ್ಸುಗಳ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವಂತೆ ತಮ್ಮ ಸಂಸ್ಥೆಯ ಎಲ್ಲಾ ನಿರ್ವಾಹಕರ ಸೂಚನೆ ನೀಡುವಂತೆ ಕೋರಿದ್ದಾರೆ.
ಅಂದಹಾಗೇ ಇದು 2017ರಲ್ಲಿ ಹೊರಡಿಸಿರುವಂತ ಆದೇಶವಾಗಿದೆ. ಈ ಆದೇಶದಂತೆ ಇಂದಿಗೂ ಬಿಎಂಟಿಸಿ ಬಸ್ಸುಗಳಲ್ಲಿ ಸಮವಸ್ತ್ರ ಧರಿಸಿದ, ಧರಿಸದ ಪೊಲೀಸ್ ಸಿಬ್ಬಂದಿ ವರ್ಗದವರು ಗುರುತಿನ ಚೀಟಿ ತೋರಿಸಿ ಬಿಎಂಟಿಸಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
BIG NEWS: ‘ಸಹಕಾರ ಸಂಘ’ಗಳೂ ‘ಭ್ರಷ್ಟಾಚಾರ ಕಾಯ್ದೆ’ ವ್ಯಾಪ್ತಿಗೆ ಬರುತ್ತವೆ: ಕರ್ನಾಟಕ ಹೈಕೋರ್ಟ್
SHOCKING : ರಾಜ್ಯದಲ್ಲಿ ‘ಪೈಶಾಚಿಕ ಘಟನೆ’ : ಯುವತಿ ಮೇಲೆ ಗ್ಯಾಂಗ್ ರೇಪ್, ಚಿನ್ನ ಕದ್ದು ಕಾಮುಕರು ಎಸ್ಕೇಪ್.!