ಶಿವಮೊಗ್ಗ : ಜಿಲ್ಲೆಯಲ್ಲಿ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಅಕ್ಟೋಬರ್.14ರ ನಾಳೆ, ಅಕ್ಟೋಬರ್.15ರ ನಾಡಿದ್ದು ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತಂತೆ ಮಾಹಿತಿ ನೀಡಿದ್ದು, 66/11 ಕೆವಿ ತಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದ ನಿರ್ವಾಹಣಾ ಕೆಲಸವಿರುವುದರಿಂದ ನಗರದಲ್ಲಿ ಅ.14 ರಂದು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದಿದೆ.
ಅಕ್ಟೋಬರ್.14ರಂದು ಈ ಕೆಳಕಂಡ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ಕುವೆಂಪು ನಗರ, ಮ್ಯಾಕ್ಸ್ ಪೂರ್ಣೋದಯ, ಎನ್‌ಇಎಸ್ ಬಡಾವಣೆ, ಡಿವಿಎಸ್ ಕಾಲೋನಿ, ಜ್ಯೋತಿ ನಗರ, ನವುಲೆ ಕೆರೆ ಹೊಸುರು, ಇಂದಿರಾಗಾAಧಿ ಬಡಾವಣೆ, ಶಿವಬಸವ ನಗರ, ವೀರಭದ್ರೇಶ್ವರ ಲೇಔಟ್, ಪಿಡಬ್ಲ್ಯೂಡಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ನವುಲೆ, ಎಲ್‌ಬಿಎಸ್ ನಗರ, ಆಶ್ವಥ್ ನಗರ, ಕೀರ್ತಿ ನಗರ, ಸವಳಂಗ ರಸ್ತೆ, ಬಸವೇಶ್ವರ ನಗರ, ಕೃಷಿ ನಗರ, ರಾಯಲ್ ಬಡಾವಣೆ, ಅನೂಪ್ ಪಾಟೀಲ್ ಬಡಾವಣೆ, ಪವನಶ್ರೀ ಬಡಾವಣೆ, ಅಮೀರ್ ಅಹಮದ್ ಕಾಲೋನಿ, ವೆಂಕಟಾಪುರ, ದೇವಂಗಿ ಸ್ಟೇಜ್-01, ರೆಡ್ಡಿ ಲೇಔಟ್ ವ್ಯಾಪ್ತಿಯಲ್ಲಿ ಕರೆಂಟ್ ಇರೋದಿಲ್ಲ.
ಜೆಎಸ್‌ಎಸ್‌ಸಿ ಕಾಲೇಜ್ ಸುತ್ತಮುತ್ತಲಿನ ಪ್ರದೇಶಗಳು, ಹಳೆ ಬೊಮ್ಮನಕಟ್ಟೆ, ದೇವಂಗಿ ಸ್ಟೇಜ್-02, ಬೊಮ್ಮನಕಟ್ಟೆ ಎ ಇಂದ ಹೆಚ್ ಬ್ಲಾಕ್ ವರೆಗೆ, ಎಮ್‌ಎನ್‌ಕೆ ಲೇಔಟ್, ಸಾನ್ವಿ ಲೇಔಟ್, ವಿನಾಯಕ ಲೇಔಟ್, ಮಲ್ನಾಡ್ ಕೌಂಟಿ, ಸಾಯಿ ಲೇಔಟ್, ಶಾಂತಿ ನಗರ, ತಾವರೆಚಟ್ನಹಳ್ಳಿ, ಹೊನ್ನಾಳಿ ರಸ್ತೆ, ಶಾದ್ ನಗರ್, ಮಲ್ಲಿಕಾರ್ಜುನ ನಗರ, ಸೇವಾಲಾಲ್ ನಗರ, ತರಳುಬಾಳು ಬಡಾವಣೆ, ಗುಂಡಪ್ಪ ಶೆಡ್, ವೆಂಕಟೇಶ್ವರ ಸಾಮಿಲ್, ದೇವಂಗಿ ತೋಟ, ಯುಜಿಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಅ.15 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಆಲ್ಕೊಳ್ಳ ವಿದ್ಯುತ್ ವಿತರಣಾ ಕೇಂದ್ರದ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು, ನಗರದ ವಿವಿಧೆಡೆ ಅ.15 ರಂದು ಬೆಳಿಗ್ಗೆ 10 ರಿಂದ ಸಂಜೆ 6.00 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಶಿವಪ್ಪನಾಯಕ ಬಡಾವಣೆ, ಜಯದೇವ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಸಹ್ಯಾದ್ರಿನಗರ, ಜೆ.ಹೆಚ್.ಪಟೇಲ್ ಬಡಾವಣೆ ಎ ಯಿಂದ ಇ ಬ್ಲಾಕ್, ಮುನಿಯಪ್ಪ ಲೇಔಟ್, ಸಂಗೊಳ್ಳಿರಾಯಣ್ಣ ಲೇಔಟ್, ರವಿಶಂಕರ್ ಗುರೂಜಿ ಶಾಲೆ ಸುತ್ತಮುತ್ತ, ಸೋಮಿನಕೊಪ್ಪ, ಮಧ್ವನಗರ, ವಿಜಯಲಕ್ಷ್ಮೀ ಲೇಔಟ್, ಪುಷ್ಪಗಿರಿ ಲೇಔಟ್, ಎಂ.ಎಂ.ಎಸ್.ಲೇಔಟ್, ಸೋಮನಾಥ ಲೇಔಟ್, ಭೋವಿ ಕಾಲೋನಿ, ಆದರ್ಶನಗರ, ಆಟೋಕಾಲೋನಿ, ತಮಿಳು ತಾಯ್ ಭವನ, ಹೊಂಗಿರಣ ಬಡಾವಣೆ, ಸಹಕಾರಿನಗರ, ರಾಜೇಶ್ ಲೇಔಟ್, ಗೆಜ್ಜೆನಹಳ್ಳಿ, ಹನುಮಂತನಗರ, ದೇವಕಾತಿಕೊಪ್ಪ, ಅಂಬೇಡ್ಕರ್ ಕ್ಯಾಂಪ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
BIG NEWS : ಚಿಕ್ಕಬಳ್ಳಾಪುರದಲ್ಲಿ ವರದಕ್ಷಣೆ ಕಿರುಕುಳಕ್ಕೆ ಬೇಸತ್ತ ಗೃಹಿಣಿ : ವಿಷ ಸೇವಿಸಿ ಆತ್ಮಹತ್ಯೆಗೆ ಶರಣು
SHOCKING : ರಾಜ್ಯದಲ್ಲಿ ‘ಪೈಶಾಚಿಕ ಘಟನೆ’ : ಯುವತಿ ಮೇಲೆ ಗ್ಯಾಂಗ್ ರೇಪ್, ಚಿನ್ನ ಕದ್ದು ಕಾಮುಕರು ಎಸ್ಕೇಪ್.!