ಬೆಂಗಳೂರು: ರಾಜ್ಯ ಸರ್ಕಾರದಿಂದ 10 ಕೆಜಿ ಅಕ್ಕಿ ಬದಲಾಗಿ 5 ಕೆಜಿ ಅಕ್ಕಿ ನೀಡಿ, ಇನ್ನುಳಿದ ಐದು ಕೆಜಿ ಅಕ್ಕಿಯ ಬದಲಾಗಿ ಇಂದಿರಾ ಆಹಾರದ ಕಿಟ್ ವಿತರಣೆಗೆ ನಿರ್ಧರಿಸಿದೆ. ಹಾಗಾದರೇ ಆ ಆಹಾರದ ಕಿಟ್ ನಲ್ಲಿ ಏನಿರಲಿದೆ ಎನ್ನುವ ಬಗ್ಗೆ ಮುಂದಿದೆ ಓದಿ.
ರಾಜ್ಯ ಸರ್ಕಾರದ ವತಿಯಿಂದ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ ಐದು ಕೆಜಿ ಅಕ್ಕಿಯ ಬದಲಾಗಿ ಪ್ರತಿ ಪಡಿತರ ಚೀಟಿಗೆ ಇಂದಿರಾ ಆಹಾರದ ಕಿಟ್ ಅಂದರೆ ಪೌಷ್ಠಿಕ ಆಹಾರದ ಕಿಟ್ ಅನ್ನು ನೀಡಲು ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
INDIRA ಅಂದರೇ Integrated Nutrition and Dietary Initiative For Realizing Annabhagya Beneficiaries ಎಂಬುದಾಗಿದೆ. ಅಂದರೆ ಅನ್ನಭಾಗ್ಯ ಫಲಾನುಭವಿಗಳನ್ನು ಪುನರುಜ್ಜೀವನಗೊಳಿಸಲು ಸಮಗ್ರ ಪೋಷಣೆ ಮತ್ತು ಆಹಾರ ಉಪಕ್ರಮದ ಕಿಟ್ ಎಂದು ನಾಮೀಕರಿಸಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಇಂದಿರಾ ಆಹಾರದ ಕಿಟ್ ನಲ್ಲಿ ಏನಿರಲಿದೆ?
ತೊಗರಿ ಬೇಳೆ – 1 ಕೆಜಿ
ಹೆಸರುಕಾಳು- 1 ಕೆಜಿ
ಅಡುಗೆ ಎಣ್ಣೆ – 1 ಲೀಟರ್
ಸಕ್ಕರೆ – 1 ಕೆಜಿ
ಉಪ್ಪು- 1 ಕೆಜಿ
ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಹೆಚ್ಚುವರಿ ಅಕ್ಕಿ ನೀಡಲು ಅಯವ್ಯಯದಲ್ಲಿ ಹಂಚಿಕೆ ಮಾಡಿರುವ ರೂ.6,426 ಕೋಟಿ ಅನುದಾನದಲ್ಲಿ ರೂ.6,119.52 ಕೋಟಿ ವೆಚ್ಚದಲ್ಲಿ ಇಂದಿರಾ ಆಹಾರ ಕಿಟ್ ಒದಗಿಸಲು ಬಜೆಟ್ ಮರು ಹಂಚಿಕೆ ಮಾಡಲು ನುಮೋದನೆ ನೀಡಿದೆ.
ಹಸಿವುಮುಕ್ತ ಕರ್ನಾಟಕ!
ಹಸಿವುಮುಕ್ತ ಕರ್ನಾಟಕ ನಿರ್ಮಾಣವೇ ನಮ್ಮ ಮುಖ್ಯ ಉದ್ದೇಶವಾಗಿರುವುದರಿಂದ ಅನ್ನಭಾಗ್ಯದ ಅಕ್ಕಿಯ ಜೊತೆಗೆ ಇಂದಿರಾ ಕಿಟ್ ವಿತರಿಸಲು ನಮ್ಮ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅನ್ನಭಾಗ್ಯದ 10 ಕೆಜಿಯ ಅಕ್ಕಿಯ ಬದಲು ಇನ್ಮುಂದೆ 5 ಕೆಜಿ ಅಕ್ಕಿ ಕೊಟ್ಟು, ಇನ್ನುಳಿದ 5 ಕೆಜಿಯ ಲೆಕ್ಕದಲ್ಲಿ ದಿನಸಿ ಪದಾರ್ಥಗಳನ್ನು… pic.twitter.com/mB1jSmHTvc
— DK Shivakumar (@DKShivakumar) October 13, 2025