ಬೆಂಗಳೂರು : ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2025 ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದು, ಸದ್ರಿ ಸಮೀಕ್ಷೆಯಲ್ಲಿ ಸಾರ್ವಜನಿಕರು ಈ ಕೆಳಕಂಡ QR Code ಅಥವಾ ಲಿಂಕ್ ನ್ನು ಉಪಯೋಗಿಸಿಕೊಂಡು ತಮ್ಮ ಮೊಬೈಲ್ ನಲ್ಲಿ ನಾಗರಿಕ ಲಾಗಿನ್ ಮೂಲಕ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಬಹುದು.
ಕರ್ನಾಟಕದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಆನ್‌ಲೈನ್ ಮೂಲಕ ಮನೆಯಿಂದಲೇ ಭಾಗವಹಿಸಿ- ಆನ್‌ಲೈನ್ ಪೋರ್ಟಲ್ – https://KSCBCSelfDeclaration.karnataka.gov.in
ಪ್ರತಿಯೊಬ್ಬರ ಕಲ್ಯಾಣವನ್ನು ಗುರಿಯಾಗಿಸಿಕೊಂಡು ಸಮೀಕ್ಷೆಯನ್ನು ಕೈಗೊಳ್ಳುತ್ತಿದ್ದು ಸಮೀಕ್ಷೆಯಲ್ಲಿ ನಿಮ್ಮಭಾಗವಹಿಸುವಿಕೆಯನ್ನು ಕೋರಲಾಗಿದೆ.
ಮೇಲಿನ ಕ್ರಮದ ಹೊರತಾಗಿಯೂ ನಮ್ಮಗಣತಿದಾರರು ಸಮೀಕ್ಷೆಗಾಗಿ ಮನೆ – ಮನೆಗೆ ಭೇಟಿ ನೀಡುತ್ತಿದ್ದು, ಅಲ್ಲಿಯೂ ಸಹ ನೀವು ಮಾಹಿತಿಗಳನ್ನು ನೀಡಿ ಸಮೀಕ್ಷೆಯಲ್ಲಿ ಭಾಗವಹಿಸಬಹುದು.