ಚಿತ್ತಾಪುರ: ಮಹಾನ್ ಮಾನವತಾವಾದಿ, ಸಮಾಜ ಸುಧಾರಕರು ಹಾಗೂ ವಚನ ಚಳವಳಿಯ ಶ್ರೇಷ್ಠ ಪ್ರೇರಕರಾದ ಶ್ರೀ ನಿಜಶರಣ ಅಂಬಿಗರ ಚೌಡಯ್ಯರವರ ಪ್ರತಿಮೆಯನ್ನು ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ದುಷ್ಕರ್ಮಿಗಳು ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ ಹಾಗೂ ನಾಚಿಕೆಗೆಡು ಕೃತ್ಯವಾಗಿದೆ ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ನಾಡಿನ ಎಲ್ಲೆಡೆ ವಿವಿಧ ಮಹಾ ಪುರುಷರ ಪ್ರತಿಮೆಗಳಿವೆ; ಅವರ ಚಿಂತನೆಗಳು ಜನಮನದಲ್ಲಿ ಅಳಿಸಲಾಗದ ಗುರುತು ಬಿಟ್ಟಿವೆ. ಈ ಎಲ್ಲರನ್ನೂ ನಾಡಿನ ಜನರು ಗೌರವಿಸುತ್ತಾರೆ. ಆದರೆ ಚಿತ್ತಾಪುರದಲ್ಲಿ ನಮ್ಮ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯ ಕೈ ಮುರಿದು, ಮುಖದ ಮೇಲೆ ಹಸುವಿನ ಸಗಣಿ ಎರಚಿದ ಕೃತ್ಯ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಿದೆ ಎಂದಿದ್ದಾರೆ.
ವಿವಿಧ ಸಮುದಾಯಗಳು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಇಂತಹ ಕೃತ್ಯದಿಂದ ಅವರ ಭಾವನೆಗಳಿಗೆ ನೇರ ಅವಮಾನವಾಗಿದೆ. ಇದು ನಮ್ಮ ಸಾಂಸ್ಕೃತಿಕ ಪರಂಪರೆ, ನಂಬಿಕೆ ಮತ್ತು ಸಹಬಾಳ್ವೆ ಮೌಲ್ಯಗಳ ಮೇಲಿನ ದಾಳಿ ಎಂದರೆ ತಪ್ಪಾಗಲಾರದು. ಈ ರೀತಿಯ ಹೇಯ ಕೃತ್ಯಗಳು ಸಮಾಜದಲ್ಲಿ ದ್ವೇಷ, ಅಸೂಯೆ ಮತ್ತು ವಿಭಜನೆಗೆ ಕಾರಣವಾಗುತ್ತವೆ ಎಂದು ಹೇಳಿದ್ದಾರೆ.
ನಿಜಶರಣ ಅಂಬಿಗರ ಚೌಡಯ್ಯರವರ ತತ್ವಗಳು, ಮಾನವೀಯತೆ ಮತ್ತು ನೈತಿಕತೆಯ ಸಂದೇಶಗಳು ಎಂದಿಗೂ ಅಜರಾಮರವಾಗಿವೆ. ಇಂತಹ ದುಷ್ಕೃತ್ಯಗಳಿಂದ ಅವರ ಚಿಂತನೆಗಳನ್ನು ಮಸುಕಾಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಈ ಕೃತ್ಯದಲ್ಲಿ ಭಾಗಿಯಾದವರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರ ಹಾಗೂ ಪೊಲೀಸರನ್ನು ಆಗ್ರಹಿಸಿದ್ದಾರೆ. ಅದೇ ಸ್ಥಳದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯರವರ ಭವ್ಯ ಪ್ರತಿಮೆಯನ್ನು ಮರು ಪ್ರತಿಷ್ಠಾಪನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ಮಹಾತ್ಮರ ಪ್ರತಿಮೆಗಳನ್ನು ಅವಮಾನಿಸುವವರ ವಿರುದ್ಧ ಸಮಾಜವು ಒಗ್ಗಟ್ಟಾಗಿ ನಿಂತು ಖಂಡಿಸಬೇಕು ಎಂದಿದ್ದಾರೆ.
ಮಹಾನ್ ಮಾನವತಾವಾದಿ, ಸಮಾಜ ಸುಧಾರಕರು ಹಾಗೂ ವಚನ ಚಳವಳಿಯ ಶ್ರೇಷ್ಠ ಪ್ರೇರಕರಾದ ಶ್ರೀ ನಿಜಶರಣ ಅಂಬಿಗರ ಚೌಡಯ್ಯರವರ ಪ್ರತಿಮೆಯನ್ನು ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ದುಷ್ಕರ್ಮಿಗಳು ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ ಹಾಗೂ ನಾಚಿಕೆಗೆಡು ಕೃತ್ಯವಾಗಿದೆ.
ನಾಡಿನ ಎಲ್ಲೆಡೆ ವಿವಿಧ ಮಹಾ ಪುರುಷರ… pic.twitter.com/MIwlVyzHvL
— Chalavadi Narayanaswamy (@NswamyChalavadi) October 12, 2025
ಮಕ್ಕಳಲ್ಲಿ ರಾಷ್ಟ್ರಭಕ್ತಿಯ ಸಂಸ್ಕಾರವನ್ನು ನೀಡುವುದು ಅಪರಾಧವೇ?: ಸಿ.ಟಿ ರವಿ ಪ್ರಶ್ನೆ
BIG NEWS: ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರಿಗೆ ‘ಸಚಿವ ಸ್ಥಾನ’ ಫಿಕ್ಸ್!? | Karnataka Cabinet Expansion