ಬೆಂಗಳೂರು : ಮದುವೆಗೆ ನಿರಾಕರಿಸಿದ ಯುವತಿಯನ್ನು ಅಪಹರಿಸಿದ್ದ ಐವರನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಬೆಂಗಳೂರಿನ ಸುಬ್ರಮಣ್ಯಪುರ ಠಾಣೆ ಪೋಲೀಸರು ಐವರು ಆರೋಪಗಳನ್ನು ಅರೆಸ್ಟ್ ಮಾಡಿದ್ದಾರೆ. ರಂಗನಾಥ, ರಾಜೇಶ್, ಚಂದನ್,ಶ್ರೇಯಸ್ ಹಾಗೂ ಮಂಜುನಾಥ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದ್ದು, ಮಾರಕಾಸ್ತ್ರ ಸಮೇತ ಆಟೋ ಬೈಕ್ ನಲ್ಲಿ ಬಂದು ಯುವತಿಯನ್ನು ಅಪಹರಿಸಿದ್ದಾರೆ.
ಯುವತಿ ಅಪಹರಿಸಿದ್ಧ ಹನ್ನೆರಡು ಗಂಟೆಯೊಳಗೆ ಪೊಲೀಸರು ಆರೋಪಿಗಳ ಹೇಡೆಮುರಿ ಕಟ್ಟಿದ್ದಾರೆ. ಯುವತಿಯನ್ನು ರಕ್ಷಿಸಿ, ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಚಿಕ್ಕಲ್ಲಸಂದ್ರದಲ್ಲಿ ವಾಸವಿದ್ದ ಯುವತಿಯನ್ನು ಈ ಒಂದು ಗ್ಯಾಂಗ್ ಕಿಡ್ಯಾಪ್ ಮಾಡಿತ್ತು. ಬುಧವಾರ ಮನೆಯ ಬಳಿಗೆ ಯುವತಿಯನ್ನು ಕಿಡ್ನಾಪ್ ಮಾಡಿದ್ದರು. ಕಿಡ್ನಾಪ್ ಆಗಿದ್ದ ಯುವತಿಗೆ ಆರೋಪಿ ರಂಗನಾಥ್ ಪರಿಚಯವಿದ್ದ ಎನ್ನಲಾಗಿದೆ. ಬೈಕ್ ಮೆಕ್ಯಾನಿಕ್ ಆಗಿ ಆರೋಪಿ ರಂಗನಾಥ್ ಕೆಲಸ ಮಾಡುತ್ತಿದ್ದ. ಕೊಲೆ ಪ್ರಕರಣ ಒಂದರಲ್ಲಿ ಜೈಲಿಗೆ ಸಹ ಹೋಗಿ ಬಂದಿದ್ದ.
ಜೈಲಿನಿಂದ ಬಂದ ನಂತರ ಮದುವೆಯಾಗುವಂತೆ ಯುವತಿಗೆ ಒತ್ತಡ ಹೇರಿದ್ದಾನೆ ಮನೆಯ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಮದುವೆ ಮಾಡಿಕೊಡಲು ಯುವತಿ ಪೋಷಕರು ನಿರಾಕರಿಸಿದ್ದಾರೆ. ಇದರಿಂದ ಕೆರಳಿ ರಂಗನಾಥ್ ಮತ್ತು ಗ್ಯಾಂಗ್ ಯುವತಿಯನ್ನು ಕಿಡ್ನಾಪ್ ಮಾಡಿದ್ದಾರೆ. ಈ ಕುರಿತು ಪೋಷಕರು ಸುಬ್ರಮಣ್ಯಪುರ ಠಾಣೆಗೆ ದೂರು ನೀಡಿದ್ದಾರೆ.ಸದ್ಯ ಯುವತಿಯನ್ನು ರಕ್ಷಿಸಿ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
BREAKING: ಕನ್ನಡದ ‘ಬಿಗ್ ಬಾಸ್’ ಕಾರ್ಯಕ್ರಮ ಯಾವತ್ತೂ ನಿಲ್ಲೋದಿಲ್ಲ: ನಟ ಕಿಚ್ಚ ಸುದೀಪ್ | Kannada Bigg Boss
BIG NEWS: ಪ್ರಿಯಕರನ ಜೊತೆ ಓಡಿ ಹೋದ ಪುತ್ರಿ: ಶೃದ್ದಾಂಜಲಿ ಬ್ಯಾನರ್ ಹಾಕಿ, ಇಡೀ ಊರಿಗೆ ತಿಥಿ ಊಟ ಹಾಕಿಸಿದ ತಂದೆ