ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಸಮೀಕ್ಷೆ ಪ್ರಾರಂಭದಿಂದ ಈವರೆಗೆ 9.15 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ.
ಇಂದು 10-10-2025 ರಂದು 5 ನಗರ ಪಾಲಿಕೆಗಳಲ್ಲಿ ರಾತ್ರಿ 08.00 ಗಂಟೆಯವರೆಗೆ 1,47,369 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ.
ಜಿಬಿಎ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸಮೀಕ್ಷೆ ನಡೆಸಿದ ಮನೆಗಳ ವಿವರ:
1. ಕೇಂದ್ರ ನಗರ ಪಾಲಿಕೆ : 19,330
2. ಪೂರ್ವ ನಗರ ಪಾಲಿಕೆ : 22,124
3. ಉತ್ತರ ನಗರ ಪಾಲಿಕೆ : 35,244
4. ದಕ್ಷಿಣ ನಗರ ಪಾಲಿಕೆ : 27,713
5. ಪಶ್ಚಿಮ ನಗರ ಪಾಲಿಕೆ : 42,958
ಕಳೆದ 7 ದಿನಗಳಲ್ಲಿ ಜಿ.ಬಿ.ಎ ವ್ಯಾಪ್ತಿ ಸಮೀಕ್ಷೆಯಾದ ಒಟ್ಟು ಮನೆಗಳು: 9,15,176
ನಾಗರಿಕರಲ್ಲಿ ವಿನಂತಿ:
ಸಮೀಕ್ಷಾದಾರರು ನಿಮ್ಮ ಮನೆಗಳಿಗೆ ಬರುವ ವೇಳೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಹಕರಿಸಲು ಮತ್ತು ಭಾಗವಹಿಸಲು ಎಲ್ಲಾ ನಾಗರಿಕರಲ್ಲಿ ವಿನಂತಿಸಿದೆ.
ನಾಗರಿಕರು ಸಹ ಸ್ವತಃ ಆನ್‌ಲೈನ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು: ವೆಬ್ ಸೈಟ್ ಲಿಂಕ್: https://kscbcselfdeclaration.karnataka.gov.in/
‘RBD ಮೋಟಾರ್ಸ್’ನ ನೂತನ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಉದ್ಘಾಟಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’