ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದಂತ ವೇಳೆಯಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಂತ ಇಬ್ಬರು ಆರೋಪಿಗಳಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ದಂಡವನ್ನು ವಿಧಿಸಿ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶಿಸಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 2021ರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸದ್ಗುರು ಲೇಔಟ್ ನಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ದಾಳಿಯ ಸಂದರ್ಭದಲ್ಲಿ ಬರೋಬ್ಬರಿ 1.60 ಕೆಜಿ ಒಣ ಗಾಂಜಾ, 800 ರೂಪಾಯಿ ಹಣ ಹಾಗೂ ಮಾರುತಿ ಒಮಿನಿ ಕಾರನ್ನು ಜಪ್ತಿ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಸಾಗರದ ಇಮ್ರಾನ್(25) ಹಾಗೂ ಇಮ್ತಿಯಾಜ್(28) ಎಂಬಾತನನ್ನು ಬಂಧಿಸಲಾಗಿತ್ತು. ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ತಿಯನ್ನು ಪಿಎಸ್ಐ ಸಾಗರ್ ಕರ್ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದಂತ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಮಂಜುನಾಥ ನಾಯಕ್ ಅವರು, ಆರೋಪಿಗಳ ವಿರುದ್ಧದ ಆರೋಪ ಸಾಭೀತಾದ ಹಿನ್ನಲೆಯಲ್ಲಿ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 25 ಸಾವಿರ ದಂಡವನ್ನು ವಿಧಿಸಿ ಆದೇಶಿಸಿದ್ದಾರೆ.
CRIME NEWS: ತಾವೇ ವ್ಯಕ್ತಿಗೆ ವಿಮೆ ಮಾಡಿಸಿ ಹತ್ಯೆ ಮಾಡಿ, ಅಪಘಾತದ ನಾಟಕವಾಡಿದ್ದ ನಾಲ್ವರು ಅರೆಸ್ಟ್
ರಾಜ್ಯದ MSME ಮತ್ತು ಗಣಿ ಇಲಾಖೆಯ ಕಾರ್ಯದರ್ಶಿಯಾಗಿ ‘ರೋಹಿಣಿ ಸಿಂಧೂರಿ’ ನೇಮಿಸಿ ಸರ್ಕಾರ ಆದೇಶ