ಶಿವಮೊಗ್ಗ : ಗಣಪತಿ ದೇವಸ್ಥಾನವನ್ನು ಸರ್ಕಾರ ಮತ್ತು ಸಾರ್ವಜನಿಕರ ಸಹಾಯಧನದೊಂದಿಗೆ ಮಾದರಿಯಾಗಿ ನಿರ್ಮಿಸಲಾಗುತ್ತದೆ. ದೇವಾಲಯದ ಮೂಲಭೂತ ಸೌಕರ್ಯಗಳಿಗೆ ಪ್ರಮುಖ ಅಧ್ಯಯನ ನೀಡಲಾಗುತ್ತದೆ ಗಣಪತಿ ದೇವಸ್ಥಾನಕ್ಕೆ ಬೇಕಾದ ಅನುದಾವನ್ನು ಸರ್ಕಾರದಿಂದ ತರಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಗಣಪತಿ ದೇವಸ್ಥಾನ ಆವರಣದಲ್ಲಿ ಗುರುವಾರ ಮುಜರಾಯಿ ಇಲಾಖೆ ವತಿಯಿಂದ ಗಣಪತಿ ದೇವಸ್ಥಾನ ಅಭಿವೃದ್ದಿಗೆ ಸಂಬoಧಿಸಿದoತೆ ಕರೆಯಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದಂತ ಅವರು, ಸಾಗರಕ್ಕೆ ಗಣಪತಿ ದೇವಸ್ಥಾನ ಮತ್ತು ಮಾರಿಕಾಂಬಾ ದೇವಸ್ಥಾನ ಪ್ರಮುಖ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಅನೇಕ ಪ್ರವಾಸಿಗರು ಬಂದಾಗ ಇಲ್ಲಿಗೆ ಭೇಟಿ ನೀಡುತ್ತಾರೆ. ಗಣಪತಿ ದೇವಸ್ಥಾನವನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ದಿ ಮಾಡುವುದು ನನ್ನ ಆದ್ಯತಾ ವಿಷಯಗಳಲ್ಲಿ ಪ್ರಮುಖವಾಗಿದೆ. ಈಗಾಗಲೆ ಮುಜರಾಯಿ ಇಲಾಖೆಯಿಂದ 55 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಹೆಚ್ಚುವರಿಯಾಗಿ 1.,07 ಕೋಟಿ ರೂ. ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಸಮಗ್ರ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ರೂಪಿಸಲಾಗುತ್ತದೆ. ವಾಸ್ತುಪ್ರಕಾರ ದೇವಸ್ಥಾನ ಅಭಿವೃದ್ದಿ, ಮುಖ ಮಂಟಪ, ಕಲ್ಯಾಣ ಮಂಟಪ, ಚಂದ್ರಶಾಲೆ ಇನ್ನಿತರೆಯನ್ನು ಅಭಿವೃದ್ದಿಪಡಿಸಲಾಗುತ್ತದೆ ಎಂದರು.
ಗಣಪತಿ ದೇವಸ್ಥಾನ ಅಭಿವೃದ್ದಿಗೆ ಸಾರ್ವಜನಿಕರು ಸಹಕಾರ ನೀಡಲು ಒಪ್ಪಿದ್ದಾರೆ. ಸಭೆಯಲ್ಲಿ ಬಂದ ಸಾರ್ವಜನಿಕರ ಅಭಿಪ್ರಾಯವನ್ನು ಅಭಿವೃದ್ದಿ ಸಂದರ್ಭದಲ್ಲಿ ಅಳವಡಿಸಿಕೊಳ್ಳಲಾಗುತ್ತದೆ. ಇದರ ಜೊತೆಗೆ ಗಣಪತಿ ದೇವಸ್ಥಾನ ಎದುರಿಗೆಇರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕೆರೆಕೋಡಿ ಆಂಜನೇಯ ಸ್ವಾಮಿ ದೇವಸ್ಥಾನ ಸಹ ಅಭಿವೃದ್ದಿಪಡಿಸುವ ಚಿಂತನೆ ಹೊಂದಲಾಗಿದೆ ಈಗ ಅಸ್ತಿತ್ವದಲ್ಲಿರುವ ಶಿಥಿಲಗೊಂಡಿರುವ ಕಲ್ಯಾಣ ಮಂಟಪವನ್ನು ತೆಗೆದು ಹಾಕಬೇಕು ಮತ್ತು ಶೌಚಾಲಯವನ್ನು ಬೇರೆ ನಿರ್ಮಿಸುವುದು ಹಾಗೂ ಉದ್ಯಾನವನ ನಿರ್ಮಾಣದ ಬಗ್ಗೆ ಭಕ್ತರು ಸಲಹೆ ನೀಡಿದ್ದು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಭೆಯಲ್ಲಿ ಅಶ್ವಿನಿಕುಮಾರ್, ಬಿ ಎನ್ ಜಗದೀಶ್, ಐ.ವಿ.ಹೆಗಡೆ ಸುಂದರ್ ಸಿಂಗ್ ಇನ್ನಿತರರು ಸಲಹೆ ನೀಡಿದರು. ಸಾಗರದ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಶೀಲ್ದಾರ್ ರಶ್ಮಿ, ಗಣಪತಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಮಿಳಾ ಕುಮಾರಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಟಿ.ವಿ.ಪಾಂಡುರoಗ, ಗಣಪತಿ ದೇವಸ್ಥಾನದ ಅರ್ಚಕ ಲಕ್ಷ್ಮಣ್ ಜೋಯಿಸ್ ಪ್ರಮುಖರಾದ ನಿರಂಜನ ಕೋರಿ, ನಾಗೇಂದ್ರ ಕೆ.ಎನ್., ಮೋಹನ್ ಶೇಟ್, ಕೆ.ವಿ.ಜಯರಾಮ್ ಕೆಸಿ ನವೀನ. ದಿನೇಶ್ ಡಿ ಶಿವಮೊಗ್ಗ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.
‘RBD ಮೋಟಾರ್ಸ್’ನ ನೂತನ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಉದ್ಘಾಟಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’
CRIME NEWS: ತಾವೇ ವ್ಯಕ್ತಿಗೆ ವಿಮೆ ಮಾಡಿಸಿ ಹತ್ಯೆ ಮಾಡಿ, ಅಪಘಾತದ ನಾಟಕವಾಡಿದ್ದ ನಾಲ್ವರು ಅರೆಸ್ಟ್
ಜಾತಿಗಣತಿಗಾಗಿ ಮನೆಗೆ ಬರುವ ಗಣತಿದಾರರನ್ನು ಅತಿಥಿಗಳಂತೆ ಕಾಣಿ: ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ