ಹಾವೇರಿ: ಆಕ್ಸಿಡೆಂಟಲ್ ಇನ್ಸೂರೆನ್ಸ್ ಹಣಕ್ಕಾಗಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿ, ಅಪಘಾತದ ನಾಟಕವಾಡಿದ್ದಂತ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಸೆಪ್ಟೆಂಬರ್.27, 2025ರಂದು ರಟ್ಟಿಹಳ್ಳಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ 38 ವರ್ಷದ ಬಸವರಾಜ್ ಪುಟ್ಟಪ್ಪನವರ್ ಕೊಲೆ ಮಾಡಲಾಗಿತ್ತು. ಈ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಂತ ಪೊಲೀಸರಿಗೆ ವಿಮೆ ಹಣಕ್ಕಾಗಿ ಹತ್ಯೆ ಮಾಡಿರುವುದು ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಬಸವರಾಜ್ ಮಾವ ರಾಘವೇಂದ್ರ ಮಾಳಗೊಂಡರ, ಸಿದ್ದನಗೌಡ ಹಲಗೇರಿ, ಪ್ರವೀಣ್ ಹಾಗೂ ಲೋಕೇಶ್ ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಂದಹಾಗೇ ಹತ್ಯೆಯಾಗಿದ್ದ ಬಸವರಾಜ್ ತಂದೆ-ತಾಯಿ, ಸಹೋದರ ನಿಧನರಾಗಿದ್ದರು. ಹೀಗಾಗಿ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದನು. ಈತನಿಗೆ 8 ಎಕರೆ ಜಮೀನು, ಮನೆ ಇತ್ತು. ಅಲ್ಲದೇ ಆರೋಪಿಗಳೇ ಮೃತನಿಗೆ ಆಕ್ಸಿಡೆಂಟಲ್ ಇನ್ಸೂರೆನ್ಸ್ ಮಾಡಿಸಿದ್ದರು. ಈ ವಿಮೆ ಕ್ಲೈ ಮಾಡಲು ಬಸವರಾಜ್ ಹತ್ಯೆ ಮಾಡಿ ಅಪಘಾತದ ನಾಟಕವಾಡಿದ್ದರು.
‘RBD ಮೋಟಾರ್ಸ್’ನ ನೂತನ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಉದ್ಘಾಟಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’