ಹಾಸನ: ಕಾಂಗ್ರೆಸ್ ಸರ್ಕಾರದ ಅವಧಿ ಇದೇ ಕೊನೆಯಾಗಿದೆ. ಇದಾದ ಮೇಲೆ ಜನ್ಮ ಜನ್ಮದಲ್ಲೂ ಅಧಿಕಾರಕ್ಕೆ ಬರುವುದಿಲ್ಲ ಎಂಬುದಾಗಿ ಬ್ರಹ್ಮಾಂಡ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ಇಂದು ಹಾಸನಾಂಬೆ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಇದು ಕೊನೆಯ ಹಂತವಾಗಿದೆ. ಮುಂದಿನ ದಿನಗಳಲ್ಲಿ ಪ್ರಳಯ ಆಗುತ್ತದೆ. ಉತ್ತರ ಭಾರತ, ಉತ್ತರ ಕರ್ನಾಟಕ ಭಾಗ ಮುಳುಗಡೆಯಾಗಲಿದೆ ಎಂದರು.
ಕರ್ನಾಟಕ ಮೂರು ಭಾಗವಾಗಲಿದೆ. ಭಾರತ ದೇಶವು ಎರಡು ಭಾಗವಾಗುತ್ತದೆ. ಇದಕ್ಕೆಲ್ಲ ಮುನ್ಸೂಚನೆಯಾಗಿದೆ. ಇದೊಂದು ಕೊನೆಯ ವಿಶೇಷವಾದಂತ ಸಂದರ್ಭವಾಗಿದೆ. ಮುಂದೆ ಆಗುವುದನ್ನು ಆ ತಾಯಿ ಸೂಚನೆ ಕೊಟ್ಟಿದ್ದಾಳೆ ಎಂಬುದಾಗಿ ಭವಿಷ್ಯ ನುಡಿದರು.
ರಾಜ್ಯ ರಾಜಕೀಯದಲ್ಲಿ ಸ್ಥಾನ ಪಲ್ಲಟವಾಗಲಿದೆ. ಇಡೀ ಜಗತ್ತಿನ ಇತಿಹಾಸದ ಪುಟದಲ್ಲಿ ಕರ್ನಾಟಕ ರಾಜ್ಯ ಕುರ್ಚಿಗಾಗಿ ಒಡೆದಾಡಿಕೊಳ್ಳುವುದರಲ್ಲಿ ಹೆಸರುವಾಸಿಯಾಗುತ್ತದೆ. ಸಂಕ್ರಾಂತಿ ಒಳಗಡೆ ಕೇತು ಮತ್ತು ಸೂರ್ಯ ರಾಹು ಜೊತೆಯಾಗಲಿದ್ದು, ಬಹಳ ದೊಡ್ಡ ಗಲಾಟೆಗಳು ನಡೆಯಲಿವೆ ಎಂದರು.
ಸಿದ್ಧರಾಮಯ್ಯ ಅವರು ಆರೋಗ್ಯ ಕ್ಷೀಣಿಸದಂತೆ ನೋಡಿಕೊಳ್ಳಬೇಕು. ಅಲ್ಲದೇ ಕಾಂಗ್ರೆಸ್ ಅಧಿಕಾರ ಅವಧಿ ಇದೇ ಕೊನೆಯಾಗಿದೆ. ಮುಂದೆ ಜನ್ಮ ಜನ್ಮದಲ್ಲೂ ಅಧಿಕಾರಕ್ಕೆ ಬರೋದಿಲ್ಲ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದರು.
BREAKING: ‘ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(KUWJ)’ದ ಚುನಾವಣೆಗೆ ಮುಹೂರ್ತ ಫಿಕ್ಸ್
‘RBD ಮೋಟಾರ್ಸ್’ನ ನೂತನ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಉದ್ಘಾಟಿಸಿದ ‘ಶಾಸಕ ಗೋಪಾಲಕೃಷ್ಣ ಬೇಳೂರು’