ಬೆಂಗಳೂರು: ರಾಜ್ಯದ ಎಲ್ಲ ಕೈಗಾರಿಕೆಗಳೂ ಸುಸ್ಥಿರ ಅಭಿವೃದ್ಧಿಯ ಚಿಂತನೆ ಮಾಡಬೇಕು. ತಮ್ಮ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲ ಗ್ರಾಮ, ಪಟ್ಟಣದಲ್ಲೂ ಹಸಿರು ವಲಯ ಸಂರಕ್ಷಣೆಗೆ ಶ್ರಮಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದ ತಮ್ಮ ಕಚೇರಿಯಲ್ಲಿಂದು ಟಯೋಟಾ ಕಿರ್ಲೋಸ್ಕರ್ ಮೋಟರ್ಸ್ ಸಂಸ್ಥೆಯ ಸುಸ್ಥಿರ ವರದಿ 2025 ಬಿಡುಗಡೆ ಮಾಡಿ ಮಾತನಾಡಿದ ಅವರು, ಹಸಿರಿದ್ದರೆ ಉಸಿರು, ಬನವಿದ್ದರೆ ಭವಿಷ್ಯ ಎಂಬುದನ್ನು ಎಲ್ಲರೂ ಅರಿತಾಗ ಮಾತ್ರ ಈ ಭೂಗ್ರಹವನ್ನು ಸಂರಕ್ಷಿಸಲು ಸಾಧ್ಯ ಎಂದರು.
ಇಂದು ಇಡೀ ವಿಶ್ವ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಎದುರಿಸುತ್ತಿದ್ದು, ವೃಕ್ಷ ಸಂರಕ್ಷಣೆ ಮತ್ತು ಸಂವರ್ಧನೆಯೊಂದೇ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ಕೈಗಾರಿಕೆಗಳೂ ತಮ್ಮ ಕೈಗಾರಿಕಾ ಆವರಣದಲ್ಲಿ ಹೆಚ್ಚು ಹೆಚ್ಚು ಮರ ಗಿಡ ಬೆಳೆಸಬೇಕು, ರಸ್ತೆ ಬದಿ ಮರಗಳನ್ನು ನೆಟ್ಟು ಸಂರಕ್ಷಿಸಬೇಕು. ಸಾಧ್ಯವಾದಷ್ಟು ಹಸಿರು ಕಟ್ಟಡ ನಿರ್ಮಿಸಿ, ನವೀಕರಿಸಬಹುದಾದ ಇಂಧನ ಬಳಕೆ ಮಾಡಬೇಕು, ನೀರನ್ನು ಮಿತವಾಗಿ ಬಳಸುವುದರ ಜೊತೆಗೆ ಶುದ್ಧೀಕರಿಸಿ ಮರು ಬಳಕೆ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತರೀಕೆರೆ ಶಾಸಕ ಶ್ರೀನಿವಾಸ್, ಟೊಯೋಟೋ ಕಿರ್ಲೋಸ್ಕರ್ ಮೋಟರ್ ನ ಉಪ ವ್ಯವಸ್ಥಾಪಕ ನಿರ್ದೇಶಕ ಸ್ವಪ್ನೇಶ್ ಮಾರು, ಹಿರಿಯ ಉಪಾಧ್ಯಕ್ಷ ಹಾಗೂ ನಿರ್ದೇಶಕ ಸುದೀಪ್ ದಾಲ್ವಿ, ಉಪಾಧ್ಯಕ್ಷ ಎ. ರಮೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
JOB ALERT: ಮಿಷನ್ ವಾತ್ಸಲ್ಯ ಯೋಜನೆಯಡಿ ‘ಶಿಕ್ಷಕರ ಹುದ್ದೆ’ಗೆ ಅರ್ಜಿ ಆಹ್ವಾನ
CRIME NEWS: ವಿಜಯಪುರದಲ್ಲಿ SBI ಬ್ಯಾಂಕ್ ದರೋಡೆ ಪ್ರಕರಣದ ಮೂವರು ಆರೋಪಿಗಳು ಅರೆಸ್ಟ್








