ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸರ್ಕಾರಿ ಸಂಸ್ಥೆ, ನಿಗಮ, ಸಂಸ್ಥೆಗಳಲ್ಲಿ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವಂತ ವಿವಿಧ ವೃಂದದ 708 ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಈ ಕುರಿತಂತೆ ಕೆಇಎ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಖಾಲಿ ಇರುವಂತ 18 ಹುದ್ದೆ, ಕರ್ನಾಟಕ ಸೋಪ್ಸ್ ಆಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ ನಲ್ಲಿ ಖಾಲಿ ಇರುವಂತ 14 ಸೇರಿದಂತೆ 394 ಹುದ್ದೆಗಳ ನೇಮಕಾತಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ನೇಮಕಾತಿ ಹುದ್ದೆಗಳ ವಿವರ
ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ- 18+07 ಹುದ್ದೆಗಳು
ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ – 07+ 14 ಹುದ್ದೆಗಳು
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ, ಬೆಂಗಳೂರು – 40+4 ಹುದ್ದೆಗಳು
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ- 63+253 ಹುದ್ದೆ
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ- 19 ಹುದ್ದೆ
ಕೃಷಿ ಮಾರಾಟ ಇಲಾಖೆ- 180 ಹುದ್ದೆಗಳು
ತಾಂತ್ರಿಕ ಶಿಕ್ಷಣ ಇಲಾಖೆ – 50+43 ಹುದ್ದೆಗಳು
ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದಲ್ಲಿ – 10 ಹುದ್ದೆಗಳು
ಶೈಕ್ಷಣಿಕ ವಿದ್ಯಾರ್ಹತೆ
ಪ್ರಥಮ ದರ್ಜೆ ಸಹಾಯಕರಿಗೆ – ಪದವಿ
ದ್ವಿತೀಯ ದರ್ಜೆ ಸಹಾಯಕರಿಗೆ – ದ್ವಿತೀಯ ಪಿಯುಸಿ
ಸಹಾಯಕ ಸಂಚಾರ ನಿರೀಕ್ಷಕರ ಹುದ್ದೆಗೆ- ಕಲಾ, ವಾಣಿಜ್ಯ, ವಿಜ್ಞಾನ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.
ನಿರ್ವಾಹಕರ ಹುದ್ದೆ – ಪಿಯುಸಿ
ಸಹಾಯಕ ಲೆಕ್ಕಿಗ – ಬಿಕಾಂ
ಅಧಿಕಾರಿ – ಪದವಿ ಜೊತೆಗೆ ಎಂಬಿಎ
ಕಿರಿಯ ಅಧಿಕಾರಿ- ಎಂಎಸ್ಸಿ ಕೆಮಿಸ್ಟ್ರಿ
ಸಹಾಯಕ ಗ್ರಂಥಪಾಲಕರು – ಎಂಎಸ್ಸಿ ಲೈಬ್ರರಿ ಸೈನ್ಸ್
ಗ್ರಂಥಪಾಲಕರು – ಎಂಲಿಬ್
ಜೂನಿಯರ್ ಪ್ರೋಗ್ರಾಮರ್- ಎಲೆಕ್ಟ್ರಾನಿಕ್ಸ್ ಕಂಪ್ಯೂಟರ್ ಸೈನ್ಸ್ ಅಥವಾ ಎಂಸಿಎ
ಸಹಾಯಕ ಇಂಜಿನಿಯರ್- ಸಿವಿಲ್ ಇಂಜಿನಿಯರಿಂಗ್
ಸಹಾಯಕ ಅಭಿಯಂತರರು- ಬಿಇ ಸಿವಿಲ್
ಕಿರಿಯ ಅಭಿಯಂತರರು- ಡಿಪ್ಲೋಮಾ ಸಿವಿಲ್
ಮಾರುಕಟ್ಟೇ ಮೇಲ್ವಿಚಾರಕರು – ಬಿಎಸ್ಸಿ ಅಕ್ರಿಕಲ್ಚರ್ ಮಾರ್ಕೇಟಿಂಗ್.
ವಯೋಮಿತಿ
ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 41 ವರ್ಷ
ಎಸ್ಸಿ, ಎಸ್ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 43 ವರ್ಷ
ಈ ಮೇಲ್ಕಂಡ 394 ಕೆಇಎ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ, ಇತರೆ ಮಾಹಿತಿಗೆ ಸಂಬಂಧಿಸಿದಂತೆ http://cetonline.karnataka.gov.in/kea/ ಜಾಲತಾಣಕ್ಕೆ ಭೇಟಿ ನೀಡಿ ವೀಕ್ಷಿಸಬಹುದಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ;
a) OMR ಆಧಾರಿತ ಪರೀಕ್ಷೆಯಾಗಿದ್ದು ಒಂದು ಪ್ರಶ್ನೆಗೆ OMR ನಲ್ಲಿ 05 ವೃತ್ತಗಳಿದ್ದು, ಮೊದಲ 04 ವೃತ್ತಗಳು ಒಂದು ಸರಿಯಾದ ಉತ್ತರವನ್ನು ಶೇಡ್ ಮಾಡಲು ಸಂಬಂಧಿಸಿವೆ. ಅಭ್ಯರ್ಥಿಗೆ ಯಾವುದಾದರೂ ಪ್ರಶ್ನೆಗೆ / ಪ್ರಶ್ನೆಗಳಿಗೆ ಉತ್ತರ ತಿಳಿದಿಲ್ಲದಿದ್ದರೆ ಕಡ್ಡಾಯವಾಗಿ 05 ನೇ ವೃತ್ತವನ್ನು ಕೇಡ್ ಮಾಡಬೇಕು. ಇಲ್ಲದಿದ್ದಲ್ಲಿ 4 ಅಂಕ ಕಡಿತ ಮಾಡಲಾಗುವುದು.
b) ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ ನಾಲ್ಕನೇ ಒಂದಂಶದಷ್ಟು (7) ಅಂಕಗಳನ್ನು ಕಡಿತ ಮಾಡಲಾಗುವುದು.
c) ಪರೀಕ್ಷಾ ವೇಳಾಪಟ್ಟಿಯನ್ನು ಪ್ರಾಧಿಕಾರದ ವೆಬ್ಸೈಟಿನಲ್ಲಿ ಪ್ರಕಟಿಸಲಾಗುವುದು,
d) ಒಂದೇ ಪಠ್ಯಕ್ರಮವಿರುವ ವಿವಿಧ ಇಲಾಖೆಗಳ ಹುದ್ದೆಗಳಿಗೆ ಒಂದೇ ಪರೀಕ್ಷೆ ನಡೆಸಿ ಸಂಬಂಧಪಟ್ಟ ಇಲಾಖೆಗಳಿಗೆ ಮೆರಿಟ್ ಪಟ್ಟಿ ನೀಡಲಾಗುವುದು.
ಅರ್ಜಿ ಆಹ್ವಾನಿಸಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ಸಂಬಂಧ ಪಟ್ಟ ನೇಮಕಾತಿ ಪ್ರಾಧಿಕಾರಗಳಿಗೆ ನೀಡುವ ಜವಾಬ್ದಾರಿ ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ್ದಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ನೀಡಿರುವ ಮಾಹಿತಿಯನುಸಾರ ದಾಖಲೆ ಪರಿಶೀಲಿಸಿ ನಿಯಮಾನುಸಾರ ನೇಮಕಾತಿ ಆದೇಶ ನೀಡುವುದು ಸಂಬಂಧ ಪಟ್ಟ ನೇಮಕಾತಿ ಪ್ರಾಧಿಕಾರದ ಜವಾಬ್ದಾರಿಯಾಗಿರುತ್ತದೆ.
ನೇಮಕಾತಿ ಪ್ರಕ್ರಿಯೆ ಕುರಿತು ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಮಾಹಿತಿಯನ್ನು ಕಳುಹಿಸುವುದಿಲ್ಲ, ಅಭ್ಯರ್ಥಿಗಳು ಆಗಿಂದಾಗ್ಗೆ ಪ್ರಾಧಿಕಾರದ ವೆಬ್ಸೈಟ್ https://cetonline.karnataka.gov.in/keaಗೆ ಭೇಟಿ ನೀಡುತ್ತಿರಲು ಸೂಚಿಸಿದೆ.
#KEARecruitment: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಕಾರ್ಖಾನೆ, ರಾಜೀವ್ ಗಾಂಧಿ ಆರೋಗ್ಯ ವಿವಿ ಹೀಗೆ 8 ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 708 ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅ.9ರಿಂದ ನ.11ರವರೆಗೆ ಅರ್ಜಿ ಸಲ್ಲಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ… pic.twitter.com/xsrF20dAAc
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) October 8, 2025