ಬೆಂಗಳೂರು: ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆದಿರುವುದು ಮನುವಾದದ ಬೆಂಬಲಿಗರ ಷಡ್ಯಂತ್ರದ ಭಾಗವಾಗಿದೆ. ದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪ್ರಜಾಪ್ರಭುತ್ವವಾದಿಗಳು, ಸಂವಿಧಾನವಾದಿಗಳು ತಲೆ ತಗ್ಗಿಸುವ ವಿಚಾರ ಇದಾಗಿದೆ. ಈ ಷಡ್ಯಂತ್ರದ ಹಿಂದಿರುವ ಕೈಗಳು ಹೊರಬರಬೇಕು ಅದಕ್ಕಾಗಿ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಹೇಳಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಶೂ ಎಸೆತ ಸಣ್ಣ ಪ್ರಮಾಣದ ಕೃತ್ಯವಲ್ಲ. ಇದರ ಹಿಂದಿರುವ ಕುತಂತ್ರ ಬಹಿರಂಗಗೊಳ್ಳಬೇಕು ಎಂದರೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆಯಾಗಬೇಕು. ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯಕ್ಕೆ ಬಿಜೆಪಿ ಮನಸ್ಥಿತಿ ಕಾರಣ. ಹಿಂದುಳಿದ ವರ್ಗಗಳ, ದಲಿತರ ನಾಯಕರು, ಅಧಿಕಾರಿಗಳನ್ನು ಗುರಿ ಮಾಡಿ ಟೀಕೆ ಮಾಡಲಾಗುತ್ತಿದೆ ಎಂದರು.
ದೇಶದ ಇತಿಹಾಸದಲ್ಲಿ ಇಬ್ಬರು ದಲಿತರು ಮಾತ್ರ ಮುಖ್ಯನ್ಯಾಯಧೀಶರಾಗಿ ಕೆಲಸ ಮಾಡಿದ್ದಾರೆ. ಮೊದಲನೆಯದಾಗಿ ಜಸ್ಟೀಸ್ ಬಾಲಕೃಷ್ಣ ಅವರು ಎರಡನೇ ವ್ಯಕ್ತಿಯಾಗಿ ಗವಾಯಿ ಅವರು. ಇವರು ಇಂತಹ ಉನ್ನತ ಸ್ಥಾನಕ್ಕೆ ದಲಿತರು ಹೋಗಿದ್ದಾರೆ ಎಂಬುದನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ. ಇದರ ವಿರುದ್ದ ಬಿಜೆಪಿ ಕೆಲಸ ಮಾಡುತ್ತಿದೆ. ಸುಪ್ರೀಂ ಕೋರ್ಟ್ ಘನತೆ ಉಳಿಯಬೇಕು ಎಂದರೆ ಕೇಂದ್ರ ಸರ್ಕಾರ ಕಠಿಣ ಕ್ರಮ ತಗೆದುಕೊಳ್ಳಬೇಕು ಎಂದು ಹೇಳಿದರು.
ದೇಶದ ಪ್ರಧಾನ ಮಂತ್ರಿಗಳು ಇಡೀ ದೇಶದಲ್ಲಿ ಯಾವುದೇ ಸಣ್ಣ ಘಟನೆಯಾದರೂ ಪ್ರಚಾರದ ಉದ್ದೇಶಕ್ಕಾದರೂ ಟ್ವೀಟ್ ಮಾಡುತ್ತಾರೆ. ಆದರೆ ಶೂ ಎಸೆತ ಘಟನೆಯಾದ ಆರು ಗಂಟೆಗಳ ನಂತರ ಪ್ರತಿಕ್ರಿಯೆ ನೀಡಿದ್ದಾರೆ. ಅಂದರೆ ಇದರಲ್ಲಿ ಇವರ ಪಾತ್ರವೂ ಇದೆಯೇ ಎನ್ನುವ ಅನುಮಾನ ಮೂಡುತ್ತಿದೆ ಎಂದರು.
ಘಟನೆಯಾದ ಸಂಧರ್ಭದಲ್ಲಿ ಮುಖ್ಯನ್ಯಾಯಧೀಶರಾದ ಗವಾಯಿ ಅವರು ಇಂತಹ ಘಟನೆಗಳಿಂದ ನಾನು ವಿಚಲಿತನಾಗುವುದಿಲ್ಲ, ನೀವುಗಳೂ ಸಹ ವಿಚಲಿತರಾಗಬೇಡಿ. ನೀವು ಕಲಾಪ ಮುಂದುವರೆಸಿ ಎಂದು ಸ್ಥಳದಲ್ಲಿದ್ದ ವಕೀಲರಿಗೆ ಅವರು ತಿಳಿಸಿದರು. ಇದು ಅವರ ಮೇಲಿನ ಮೊದಲ ಹಲ್ಲೆ ಪ್ರಕರಣ ಮಾತ್ರವಲ್ಲ ಕೆಲವು ದಿನಗಳ ಹಿಂದೆಯೂ ಹಲ್ಲೆ ಪ್ರಯತ್ನವಾಗಿತ್ತು. ಆದರೂ ಮೋದಿ ಸರ್ಕಾರ ಈ ದೇಶದ ಉನ್ನತ ಸ್ಥಾನದಲ್ಲಿರುವ ದಲಿತ ವ್ಯಕ್ತಿಯ ಮೇಲೆ ಅಸಡ್ಡೆ ಹೊಂದಿದೆ ಎಂದರು.
ಮೋದಿ ಅವರ ಸಂಪುಟದ ಸಹೋದ್ಯೋಗಿಗಳು ಇಂತಹ ಘಟನೆಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣರಾಗಿದ್ದಾರೆ. ಉಪರಾಷ್ಟ್ರಪತಿ ಚುನಾವಣೆ ವೇಳೆ ಯುಪಿಎ ಅಭ್ಯರ್ಥಿಗಳಾಗಿದ್ದ ಸುದರ್ಶನ ರೆಡ್ಡಿ ಅವರ ಮೇಲೆ ದೇಶದ ಗೃಹಮಂತ್ರಿ ಅಮಿತ್ ಶಾ ಅವರು ನಕ್ಸಲ್ ಎಂದು ಆರೋಪ ಮಾಡಿದರು.
ಸನಾತನಿಗಳು ದಲಿತ, ಹಿಂದುಳಿದ ವರ್ಗಗಳ ಜನರನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಲಾಗುತ್ತಿದೆ. ಬಿಜೆಪಿ ಮುಖಂಡ ಭಾಸ್ಕರ್ ರಾವ್ ಅವರು ಮುಖ್ಯ ನ್ಯಾಯಾಧೀಶರ ಮೇಲೆ ಆದ ದಾಳಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ. ಇದು ಇವರ ವೈಯಕ್ತಿಕ ಹೇಳಿಕೆ ಮಾತ್ರವಲ್ಲ. ಇದು ಹಿಂದುತ್ವ ಮನುವಾದಿಗಳ, ಬಿಜೆಪಿಯ ಹೇಳಿಕೆಯಾಗಿದೆ ಎಂದರು.
ಗ್ವಾಲಿಯರ್ ಬಾರ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಅನಿಲ್ ಮಿಶ್ರಾ ಎನ್ನುವ ವ್ಯಕ್ತಿ ಅಂಬೇಡ್ಕರ್ ಅವರು ಕೊಳಕು ಮನಸ್ಸಿನ ವ್ಯಕ್ತಿ ಎಂದು ಹೇಳಿದ್ದಾರೆ. ಅಂದರೆ ಇವರೆಲ್ಲರೂ ಬಿಜೆಪಿಯ ಮನಸ್ಥಿತಿಯನ್ನು ಈ ರೀತಿ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ. ಬಿಜೆಪಿ ಸಿದ್ದಾಂತ ಎಂದಿಗೂ ಪರಿಶಿಷ್ಟ ಜಾತಿ, ಪಂಗಡದ ಪರವಾಗಿಲ್ಲ. ಬಿಜೆಪಿ ಅಧ್ಯಕ್ಷರಾಗಿದ್ದ ಬಂಗಾರು ಹನುಮಂತು ಅವರನ್ನು ಷಡ್ಯಂತ್ರ ಮಾಡಿ ಜೈಲಿಗೆ ಹಾಕಲಾಯಿತು ಎಂದು ತಿಳಿಸಿದರು.
BREAKING: ಈ ಬಾರಿ ‘ರಾಜ್ಯೋತ್ಸವ ಪ್ರಶಸ್ತಿ’ಗೆ ಆನ್ ಮೂಲಕ ಅರ್ಜಿ ಪ್ರಕ್ರಿಯೆ ಇಲ್ಲ: ಸಚಿವ ಶಿವರಾಜ ತಂಗಡಗಿ
‘ಸ್ಥಳೀಯರಿಗೆ ಉದ್ಯೋಗ’ ನೀಡುವ ನಿಟ್ಟಿನಲ್ಲಿ ಸಾಗರದಲ್ಲಿ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಓಪನ್: RBD ಮಹೇಶ್








